ಬೆಂಗಳೂರು ವಿಶ್ವವಿದ್ಯಾಲಯ  
ರಾಜ್ಯ

ಬೆಂಗಳೂರು ವಿವಿ ಪಿಎಚ್.ಡಿ ಸಂದರ್ಶನ; ಆಗಸ್ಟ್ 3 ಮತ್ತು 4ರಂದು ನಿಗದಿ; ನಿಟ್ಟುಸಿರು ಬಿಟ್ಟ ಆಕಾಂಕ್ಷಿಗಳು | Bangalore University

ಬೆಂಗಳೂರು: ಕಳೆದ ಆರು ತಿಂಗಳಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರು ವಿಶ್ವವಿದ್ಯಾಲಯದ(Bangalore University) ಪಿಎಚ್.ಡಿ ಪ್ರವೇಶ ಸಂದರ್ಶನ ಅಂತಿಮಘಟ್ಟ ತಲುಪಿದ್ದು, ಆಗಸ್ಟ 3 ಮತ್ತು 4ರಂದು ಸಂದರ್ಶನದ ದಿನಾಂಕ ನಿಗದಿಯಾಗಿದ್ದು, ಆಕಾಂಕ್ಷಿಗಳಲ್ಲಿ ಹರ್ಷವ್ಯಕ್ತಪಡಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಕಲಾ, ವಾಣಿಜ್ಯ ಮತ್ತು ವಿಜ್ಞಾನ ನಿಖಾಯದ 36 ವಿಷಯಗಳ ಒಟ್ಟು 384 ಪಿಎಚ್.ಡಿ ಸೀಟುಗಳಿಗೆ ಕಳೆದ ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊಥತಿಗಾಗಲೇ ಕೋರ್ಸ್‌ವರ್ಕ್ ಕೂಡ ಮುಗಿಯುತ್ತಿತ್ತು.
ಆದರೆ ಬೇರೆ-ಬೇರೆ ಕಾರಣಗಳಿಂದಾಗಿ ಎರಡು ಬಾರಿ ಅಧಿಸೂಚನೆ ರದ್ದಾಗಿತ್ತು. ಮೂರನೇ ಬಾರಿ ಹೊರಡಿಸಿದ್ದ ಅಧಿಸೂಚನೆ ಪ್ರಕ್ರಿಯೆ ಇದೀಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಪಿಎಚ್.ಡಿ ಆಕಾಂಕ್ಷಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ನೂತನ ಕುಲಪತಿಗಳಿಗೆ ಮೆಚ್ಚುಗೆ

ಬೆಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ನೇಮಕವಾಗಿರುವ ಪ್ರೊ.ಶಿವರಾಜು ಅವರು ವಿಶ್ವವಿದ್ಯಾಲಯದ ಎಲ್ಲಾ ಕಾರ್ಯಗಳಿಗೆ ವೇಗ ನೀಡಿದ್ದಾರೆ ಎಂಬ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾನ್ಯವಾಗಿ ಬೆಂಗಳೂರು ವಿವಿಯ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಮತ್ತು ಪ್ರವೇಶ ಪ್ರಕ್ರಿಯೆಗಳು ನಡೆಯುವಾಗ ಕುಲಪತಿಗಳು ವಿಳಂಭ ಧೋರಣೆ ಅನುಸರಿಸುತ್ತಾರೆ ಎಂದು ಈ ಹಿಂದಿನ ಕುಲಪತಿಗಳ ಮೇಲೆ ಆರೋಪವಿತ್ತು. ಆದರೆ ಇದೀಗ ನೂತನ ಕುಲಪತಿ ಪ್ರೊ. ಶಿವರಾಜ್ ಅವರ ಕಾರ್ಯಕ್ಕೆ ವಿವಿಯ ಬೋಧಕ ವೃಂದ ಮತ್ತು ವಿದ್ಯಾರ್ಥಿ ವಲಯದಲ್ಲಿ ‌ಮೆಚ್ಚುಗೆ ವ್ಯಕ್ತವಾಗಿದೆ.