ಬೆಂಗಳೂರು ವಿಶ್ವವಿದ್ಯಾಲಯ 
ರಾಜ್ಯ

ಬೆಂವಿವಿ: ಪಿಎಚ್.ಡಿ ಸಂದರ್ಶನ ಮುಂದೂಡಿಕೆ

ಎನ್.ಎಲ್. ಶಿವಮಾದು

ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್.ಡಿ ಪ್ರವೇಶ ಪರೀಕ್ಷೆಗೆ ಆ.3,4 ಮತ್ತು 5 ರಂದು ರಂದು ನಿಗದಿಯಾಗಿದ್ದ ಮೌಖಿಕ ಪರೀಕ್ಷೆ (ವೈವಾ) ಸಂದರ್ಶನವನ್ನು ಮುಂದೂಡಲಾಗಿದೆ.

ಕಾರಣಾಂತರಗಳಿಂದ ನಿಗದಿತ ಮೌಖಿಕ ಪರೀಕ್ಷೆಯನ್ನು ಮುಂದೂಡಲಾಗಿದೆ. ಮೌಖಿಕ ಪರೀಕ್ಷೆ ನಡೆಸುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಕುಲಸಚಿವರು (ಮೌಲ್ಯಮಾಪನ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ 2026ನೇ ಸಾಲಿನ ಪಿಎಚ್.ಡಿ. ಪ್ರವೇಶ ಪರೀಕ್ಷೆಯನ್ನು ಜು.5ರಂದು ನಡೆಸಿತ್ತು. ಒಟ್ಟು 1,299 ಅಭ್ಯರ್ಥಿಗಳಲ್ಲಿ 870 ಮಂದಿ ಹಾಜರಾಗಿದ್ದರು. 429 ಅಭ್ಯರ್ಥಿಗಳು ಗೈರಾಗಿದ್ದರು. ಈಗ ಅಭ್ಯರ್ಥಿಗಳು ಲಿಖಿತ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ಆಧಾರದಲ್ಲಿ ಮೌಖಿಕ ಪರೀಕ್ಷೆ ನಿಗದಿ ಮಾಡಿದೆ. ಸ್ನಾತಕೋತ್ತರ ಪರೀಕ್ಷೆ, ಲಿಖಿತ ಮತ್ತು ಮೌಖಿಕ ಪರೀಕ್ಷೆ ಅಂಕಗಳನ್ನು ಪರಿಗಣಿಸಿ ಮೀಸಲಾತಿ ಆಧಾರದಲ್ಲಿ ಮೆರಿಟ್ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.