ಬೆಂಗಳೂರು ನಗರ ವಿಶ್ವವಿದ್ಯಾನಿಲಯ
- ಅರ್ಜಿ ಸಲ್ಲಿಸಲು ಮಾ.18 ಕೊನೆಯ ದಿನವಾಗಿದ್ದು, 200 ರೂ. ದಂಡ ಶುಲ್ಕದೊಂದಿಗೆ ಸಲ್ಲಿಸಲು ಮಾ.25 ಕೊನೆಯ ದಿನವಾಗಿದೆ.
- ಆಸಕ್ತ ಸ್ನಾತಕೋತ್ತರ ಪದವೀಧರರು ಆನ್‌ಲೈನ್/ಆ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಬೆಂಗಳೂರು: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗಗಳು ಮತ್ತು ಸಂಯೋಜಿತ ಸಂಶೋಧನಾ ಕೇಂದ್ರಗಳಲ್ಲಿ ಸಂಶೋಧನಾ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಗತ್ಯ ವಿದ್ಯಾರ್ಹತೆ ಹೊಂದಿರುವ ಆಸಕ್ತ ಸ್ನಾತಕೋತ್ತರ ಪದವೀಧರರು ಆನ್‌ಲೈನ್/ಆ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮಾ.18 ಕೊನೆಯ ದಿನವಾಗಿದ್ದು, 200 ರೂ. ದಂಡ ಶುಲ್ಕದೊಂದಿಗೆ ಸಲ್ಲಿಸಲು ಮಾ.25 ಕೊನೆಯ ದಿನವಾಗಿದೆ.
ಪ್ರವೇಶಕ್ಕೆ ಅಗತ್ಯವಾದ ವಿದ್ಯಾರ್ಹತೆ, ಪ್ರವೇಶ ಪರೀಕ್ಷೆ ವಿವರಗಳು, ಪ್ರವೇಶ ಪರೀಕ್ಷೆಯಿಂದ ವಿನಾಯಿತಿ ಹೊಂದುವ ವಿವರಗಳು, ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ ಸಂದಾಯದ ವಿವರ, ಲಭ್ಯವಿರುವ ವಿಷಯವಾರು ಖಾಲಿ ಸ್ಥಾನಗಳ ವಿವರ, ಸಂಶೋಧನಾ ಕೇಂದ್ರಗಳ ವಿವರ, ಇತ್ಯಾದಿಗಳನ್ನು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜಾಲತಾಣದಲ್ಲಿ k||t://deO.be.q/sqoqhbtt/
ಪ್ರವೇಶ ಪರೀಕ್ಷೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಶುಲ್ಕ ಪಾವತಿ ರಶೀದಿ ಹಾಗೂ ಇತರೆ ದಾಖಲೆಗಳೊಂದಿಗೆ ಕುಲಸಚಿವರು (ಮೌಲ್ಯಮಾಪನ), ಜ್ಞಾನಜ್ಯೋತಿ-ಸೆಂಟ್ರಲ್ ಕಾಲೇಜ್ ಕ್ಯಾಂಪಸ್, ಡಾ.ಅಂಬೇಡ್ಕರ್ ವೀದಿ, ಬೆಂಗಳೂರು-560001 ಕಳುಹಿಸುವಂತೆ ಬಿಸಿಯು ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ ಬಿ. ಕುಡೇನಟ್ಟಿ ತಿಳಿಸಿದ್ದಾರೆ.