ಬಾನಂಡ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ ಲಾಂಛನ
ಗೋಣಿಕೊಪ್ಪಲು: ಅಖಿಲ ಅಮ್ಮ ಕೊಡವ ಸಮಾಜ ಮತ್ತು ಬಾನಂಡ ಕುಟುಂಬಸ್ಥರ ಸಹಯೋಗದಲ್ಲಿ ಮೇ 1ರಿಂದ ಮೇ 3ರವರೆಗೆ ಮೂರು ದಿನಗಳ ಕಾಲ ಬಾನಂಡ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಗೋಣಿಕೊಪ್ಪಲಿನ ಅಖಿಲ ಅಮ್ಮ ಕೊಡವ ಸಮಾಜ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.
ಬಾನಂಡ ಕುಟುಂಬದ ಅಧ್ಯಕ್ಷ ಎಸ್.ರಮೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪೃಥ್ಯು ಮಾತನಾಡಿ, ಮಾಯಮುಡಿ ಸರ್ಕಾರಿ ಶಾಲಾ ಮೈದಾನದಲ್ಲಿ 11ನೇ ವರ್ಷದ ಅಮ್ಮ ಕೊಡವ ಕ್ರಿಕೆಟ್ ನಮ್ಮೆಯನ್ನು ನಡೆಸಲಾಗುತ್ತಿದ್ದು, ಬಾನಂಡ ಕುಟುಂಬ 2ನೇ ಬಾರಿ ಪಂದ್ಯಾವಳಿ ಆಯೋಜಿಸುತ್ತಿದೆ.
ಈ ಬಾರಿ ಸುಮಾರು 27 ತಂಡಗಳು ಅಮ್ಮ ಕೊಡವ ಕ್ರಿಕೆಟ್ ನಮ್ಮೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಸರ್ಕಾರದ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ. ಬಾನಂಡ ಕ್ರಿಕೆಟ್ ನಮ್ಮೆಗೆ ಹೆಸರು ನೋಂದಾಯಿಸಿಕೊಳ್ಳಲು ಏ.20 ಕೊನೆಯ ದಿನವಾಗಿದ್ದು, ಅಮ್ಮ ಕೊಡವ ತಂಡಗಳು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ನಮ್ಮೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಈ ಸಂದರ್ಭ ಕ್ರಿಕೆಟ್ ಪಂದ್ಯಾವಳಿಯ ಅಧ್ಯಕ್ಷ ಬಾನಂಡ ಎ. ಸುನೀತ್, ಪ್ರಮುಖರಾದ ಬಾನಂಡ ಆರ್. ಪ್ರಕಾಶ್, ಬಾನಂಡ ಕೃಷಿರಾಜ್, ಬಾನಂಡ ಸುದನ್, ಬಾನಂಡ ರಘು ಸುಬ್ಬಮಯ್ಯ ಇತರರಿದ್ದರು.