ಗೋವುಗಳ ಅಕ್ರಮ ಸಾಗಣೆ ತಡೆಯಬೇಕು, ಗೋ ಹತ್ಯೆ ನಿಷೇಧಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಚಿಂಚೋಳಿಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಗೋ ರಾ ಉತ್ತರ ಕರ್ನಾಟಕ ಸಂಟನೆಗಳಿಂದ ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಸಲಾಯಿತು. ರೇವಣಸಿದ್ದಪ್ಪ ಮೋಘಾ, ವಿಜಯಕುಮಾರ ಚೆಂಗಟಿ, ಶರಣು ನಾಟೀಕಾರ, ಸಾವನ್ ಕಲಬುರರ್ಗಿ, ನಿತೀನ ನಿರಾಳೆ ಇತರರಿದ್ದರು.
- ಚಿಂಚೋಳಿಯಲ್ಲಿ ವಿಎಚ್ಪಿ, ಬಜರಂಗದಳದಿಂದ ತಹಸೀಲ್ದಾರ್ಗೆ ಮನವಿ
ಚಿಂಚೋಳಿ: ತಾಲೂಕಿನಲ್ಲಿ ಗೋ ಅಕ್ರಮ ಸಾಗಣೆ ಹಾಗೂ ಹತ್ಯೆ ಎಗ್ಗಿಲ್ಲದೆ ಸಾಗಿದ್ದು, ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ, ಗೋ ರಾ ಉತ್ತರ ಕರ್ನಾಟಕ ವಿಭಾಗ ಸಂಟನೆಗಳು ಒತ್ತಾಯಿಸಿವೆ. ಈ ಕುರಿತು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದ ಸಂಟನೆಗಳ ಪ್ರಮುಖರು, ಅಕ್ರಮ ಗೋ ಸಾಗಣೆ ಮತ್ತು ಗೋ ಹತ್ಯೆ ಆಗದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಣಾ ಕಾಯ್ದೆ ಜಾರಿಯಲ್ಲಿದ್ದು, ಸರ್ಕಾರದ ಆದೇಶ ಗಾಳಿಗೆ ತೂರಿ ರಾಜರೋಷವಾಗಿ ಹತ್ಯೆ ನಡೆಯುತ್ತಿದೆ. ಕೂಡಲೇ ಪೊಲೀಸ್, ಸಾರಿಗೆ ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಚೆಕ್ಪೋಸ್ಟ್ ವ್ಯವಸ್ಥೆ ಮಾಡಿ ನಿಗಾ ವಹಿಸಬೇಕು, ಪ್ರಮುಖ ಸ್ಥಳಗಳಲ್ಲಿ ಗಸ್ತು ನಡೆಸಲು ವಿಶೇಷ ತಂಡ ರಚಿಸಬೇಕು. ಮೇ 29ರವರೆಗೂ ಗೋ ಮಾರಾಟ, ಜಾನುವಾರುಗಳ ಸಂತೆ ನಿಷೇಧಿಸಬೇಕು. ಗೋ ರಕರಿಗೆ ಸಂಪೂರ್ಣ ಸಹಕಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ರೇವಣಸಿದ್ದಪ್ಪ ಮೋಘಾ, ವಿಜಯಕುಮಾರ ಚೆಂಗಟಿ, ಶರಣು ನಾಟೀಕಾರ, ಸಾವನ ಕಲಬುರಗಿ, ನಿತೀನ್ ನಿರಾಳೆ, ಆನಂದ ಚೌಧರಿ, ಗುರುಶಾಂತ ಜೋಗದ, ಪ್ರಮೋದ ಐನೋಳ್ಳಿ, ಸುರೇಶ ಮೈಲಾರಿ, ಸಂಜು ಕಳಸ್ಕರ್ ಇತರರಿದ್ದರು.