ದಯಾನಂದ ಸ್ವಾಮೀಜಿ 
ರಾಜ್ಯ

ಜಾತ್ರೆಯಲ್ಲಿ ಪ್ರಾಣಿಹತ್ಯೆ ನಿಷೇದಿಸಿ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಅಂಬಾಮಠ ಸೇರಿದಂತೆ ಅನೇಕ ಕಡೆ ನಡೆಯುವ ಪ್ರಾಣಿಹತ್ಯೆಯನ್ನು ಸಂಪೂರ್ಣ
ನಿರ್ಬಂಧಿಸಬೇಕೆಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಂಧನೂರು ತಾಲೂಕಿನ ಸೋಮಲಾಪುರ ಗ್ರಾಮದ ಅಂಬಾಭವನಿ ದೇವಿಯ ಜಾತ್ರಮಹೋತ್ಸವವು ಜ.3 ರಿಂದ 7ವರೆಗೆ ನಡೆಯಲಿದೆ. ಅಂಬಾಮಠ ದೇವಸ್ಥಾನವೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಒಳಪಟ್ಟಿದೆ.
ಪ್ರಾಣಿ ಹತ್ಯೆ ನಿಷೇಧಿಸಿ 1959 ರಲ್ಲಿ ಉಚ್ಚ ನ್ಯಾಯಾಲಯ ಆದೇಶೀಸಿದೆ. ಉಲ್ಲಂಘನೆಯಾದಲ್ಲಿ ಜಿಲ್ಲಾ ಮತ್ತು ತಾಲೂಕ ಆಡಳಿತಗಳು ಹೊಣೆಯಾಗಬೇಕಾಗುತ್ತದೆ. 2016 ರಿಂದ 2019 ರಲ್ಲಿ 8 ಹೆಚ್ಚು ಪ್ರಕರಣಗಳಲ್ಲಿ ಹೈಕೋರ್ಟ್ ಆದೇಶಗಳಿವೆ. ಪ್ರಾಣಿ ಜೀವ ರಕ್ಷಣೆಗೆ ಜಾಗೃತಿ ಕೈಗೊಳ್ಳಲಾಗುತ್ತಿದೆ ಎಂದರು.ನಿಯಮ ಉಲ್ಲಂಘನೆಯಾದಲ್ಲಿ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಎಚ್ಚರಿಸಿದರು.