ಹೊಸಕೋಟೆ ತಾಲೂಕಿನ ಚಿಕ್ಕಹುಲ್ಲೂರಿನ ಬಮುಲ್ ಶಿಬಿರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಾಲು ಉತ್ಪಾದಕರ ಮಕ್ಕಳಿಗೆ ಶಾಸಕ ಶರತ್ ಬಚ್ಚೆಗೌಡ ಪ್ರತಿಭಾ ಪುರಸ್ಕಾರ ನೀಡಿದರು. ಬಮುಲ್ ನಿರ್ದೇಶಕರಾದ ಬಿವಿ.ಸತೀಶ್ ಗೌಡ, ಕೆಎಂಎಂ.ಮಂಜುನಾಥ್, ಎಲ್ಎನ್ಟಿ.ಮಂಜುನಾಥ್ ಇದ್ದರು.
ಹೊಸಕೋಟೆ : ಬೆಂಗಳೂರು ಹಾಲು ಒಕ್ಕೂಟವು ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿ ಜತೆಗೆ ಉತ್ಪಾದಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರ ಶೈಕ್ಷಣಿಕ ಪ್ರಗತಿಗೂ ಬೆನ್ನೆಲುಬಾಗಿ ನಿಂತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಕಸಬಾ ಹೋಬಳಿಯ ಚಿಕ್ಕ ಹುಲ್ಲೂರು ಬಳಿಯ ಬಮುಲ್ ಹೊಸಕೋಟೆ ಶಿಬಿರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಈ ಬಾರಿ 300 ಮಕ್ಕಳಿಗೆ 10.5ಲಕ್ಷ ರೂ. ವೆಚ್ಚದಲ್ಲಿ ಪ್ರತಿಭಾ ಪುರಸ್ಕಾರವನ್ನು ಬಮುಲ್ನಿಂದ ನೀಡಲಾಗುತ್ತಿದೆ. ಬಮುಲ್ 60 ಕೋಟಿ ರೂ. ಲಾಭಗಳಿಸುವ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿದೆ ಎಂದರು.
ಬಮುಲ್ ವ್ಯಾಪ್ತಿಯಲ್ಲಿ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವಲ್ಲಿ ಹೊಸಕೋಟೆ ತಾಲೂಕು ಮುಂಚೂಣಿಯಲ್ಲಿರುವುದು ತಾಲೂಕಿಗೆ ಸಂಧ ಗೌರವ. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ನಿಷ್ಠೆ, ಪ್ರಾಮಾಣಿಕತೆ ನೈತಿಕತೆ ಹಾಗೂ ಶ್ರದ್ಧೆ ಭಕ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಕೇವಲ ತಾಲೂಕು, ಜಿಲ್ಲೆ, ದೇಶಕಷ್ಟೇ ಅಲ್ಲ ಇಡೀ ವಿಶ್ವಕ್ಕೆ ಆಸ್ತಿ ಇದ್ದಹಾಗೆ. ಆದ್ದರಿಂದ ಕೌಶಲ ಆಧಾರಿತ ಶಿಕ್ಷಣ ಪಡೆಯುವ ಮೂಲಕ ದೊಡ್ಡ ಸಾಧಕರಾಗಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ರೈತರ ಲಾಭದಾಯಕ ಕೆಲಸವಾಗಿ ಹೈನುಗಾರಿಕೆ ರೂಪುಗೊಂಡಿದ್ದು, ಬಿಡಿಸಿಸಿ ಬ್ಯಾಂಕ್ನಿಂದ ಸಿಗುವ ಸಾಲ ಸೌಲಭ್ಯವನ್ನು ನೇರವಾಗಿ ಹಾಲು ಉತ್ಪಾದಕರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.
ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೃಷ್ಣಮೂರ್ತಿ, ವೆಂಕಟೇಶಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಕೋಡಿಹಳ್ಳಿ ಸುರೇಶ್, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಪಶುಪಾಲನ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಂಜುನಾಥ್, ಶಿಬಿರದ ಉಪ ವ್ಯವಸ್ಥಾಪಕ ಶ್ರೀರಾಮ್ ಇದ್ದರು.
ಹೈನು ಸಾಕಾಣಿಕೆದಾರರ ಅಭಿವೃದ್ಧಿಗೆ ಬದ್ಧವಾಗಿ ಬಮುಲ್ ಕೆಲಸ ಮಾಡುತ್ತಿದ್ದು, ಡಿ.ಕೆ.ಸುರೇಶ್ ನೇತೃತ್ವದಲ್ಲಿ ಬಮುಲ್ ತನ್ನ ಕಾರ್ಯಕ್ಷೇತ್ರವನ್ನು ಎಲ್ಲ ರೀತಿಯಲ್ಲೂ ವಿಸ್ತರಿಸುತ್ತಿದೆ. ಇದರ ಪರಿಣಾಮವಾಗಿ ವಹಿವಾಟನ್ನು 9 ತಿಂಗಳಿನಲ್ಲಿ 2906 ಕೋಟಿಯಿಂದ 3400 ಕೋಟಿಗೆ ಹೆಚ್ಚಳ ಮಾಡಿ 60 ಕೋಟಿ ರೂ.ಗಳ ಪ್ರೋತ್ಸಾಹ ಧನವನ್ನು ಉತ್ಪಾದಕರಿಗೆ ನೀಡುತಿದ್ದೇವೆ.