Ballot paper revision is essential.
ಶಿರಾ: ಎಸ್ಐಆರ್ ಮತ ಪಟ್ಟಿ ಪರಿಸ್ಕರಣೆ ಅತ್ಯವಶ್ಯಕವಾಗಿದ್ದು, ಚುನಾವಣಾ ಆಯೋಗ ಕೈಗೊಂಡಿರುವ ಈ ಮಹತ್ವದ ಕೆಲಸದಲ್ಲಿ ಎಲ್ಲರೂ ಪಾಲ್ಗೊಂಡು ನಮ್ಮ ವೋಟು, ನಮ್ಮ ಹಕ್ಕು ಧ್ಯೇಯ ವಾಕ್ಯದೊಂದಿಗೆ ಮುನ್ನಡೆದು ಮತಪಟ್ಟಿ ಸಂಸ್ಕರಣ ಅಭಿಯಾನ ಯಶಸ್ವಿಗೊಳಿಸಬೇಕು ಎಂದು ಶಿರಾ ಜೆಡಿಎಸ್ ನಾಯಕ ಆರ್.ಉಗ್ರೇಶ್ ಹೇಳಿದರು.
ತಾಲೂಕಿನ ಆದಲೂರು ಗ್ರಾಮದಲ್ಲಿ ಮತಪಟ್ಟಿ ಪರಿಷ್ಕರಣೆ ಅಧಿಕಾರಿಗಳಿಂದ ಮತನೋಂದಣಿ ಅರ್ಜಿ ಸ್ವೀಕರಿಸಿ ಮಾತನಾಡಿ, ಜೆಡಿಎಸ್ ಪಕ್ಷ ಕೂಡ ಎಸ್ಐಆರ್ ಯಶಸ್ವಿಗೊಳಿಸಲು ಶಿರಾ ಕ್ಷೇತ್ರದಾದ್ಯಂತ 290 ಮತಗಟ್ಟೆಗಳಲ್ಲಿ ಪ್ರತಿನಿಧಿಗಳನ್ನು ನೇಮಕ ಮಾಡಿದ್ದು, ಇವರು ಕೂಡ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಿ ನೋಂದಣಿ ಕಾರ್ಯದಲ್ಲಿ ಸಹಾಯ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಶಿರಾ ವಿಧಾನಸಭಾ ಕ್ಷೇತ್ರ ಮತದಾರರ ನೋಂದಣಾಧಿಕಾರಿ ಕೆ.ರುದ್ರೇಶ್ ಮಾತನಾಡಿ, ಮತಪಟ್ಟಿ ಪರಿಷ್ಕರಣೆ ಜೂ.30ರಿಂದ ಪ್ರಾರಂಭವಾಗಿದ್ದು ಜುಲೈ 29ರವರೆಗೂ ನಡೆಯಲಿದೆ. ತಾಲೂಕಿನ ಪ್ರತಿ ಬೂತ್ಗೂ ಬಿಎಲ್ಒಗಳನ್ನು ನೇಮಕ ಮಾಡಲಾಗಿದ್ದು, ಅವರು ಮನೆಮನೆಗೆ ಭೇಟಿ ನೀಡಿ ದ್ವಿಪ್ರತಿಯಲ್ಲಿ ಅರ್ಜಿ ನೀಡಲಿದ್ದಾರೆ. ಅರ್ಜಿಗಳನ್ನು ಪಡೆದು ಸೂಚಿಸಲಾಗಿರುವ ಮಾಹಿತಿ ಭರ್ತಿ ಮಾಡಿ ಬಿಎಲ್ಒಗಳಿಗೆ ಹಿಂತಿರುಗಿಸಬೇಕು. ಒಂದು ಪ್ರೀತಿಯನ್ನು ತಮ್ಮ ಬಳಿ ಇಟ್ಟು ಕೊಳ್ಳಬೇಕು. ಚುನಾವಣಾ ಆಯೋಗ ಕೈಗೊಂಡಿರುವ ಮತಪಟ್ಟಿ ಪರಿಷ್ಕರಣೆ ಎಸ್ಐಆರ್ ಬಗ್ಗೆ ಮತದಾರರು ಯಾವುದೇ ಗೊಂದಲಗಳಿಗೆ ಈಡಾಗದೇ ಅರ್ಜಿ ಭರ್ತಿ ಮಾಡಿ ನೀಡಬೇಕು ಎಂದು ತಿಳಿಸಿದರು