ರಾಜ್ಯ

ಹುಣಸಗಿ ತಾಲೂಕು ಅಧ್ಯಕ್ಷರಾಗಿ ಬಾಲಪ್ಪ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ
ಹುಣಸಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹುಣಸಗಿ ತಾಲೂಕು ಅಧ್ಯಕ್ಷರಾಗಿ ಬಾಲಪ್ಪ ಕುಪ್ಪಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಾಂತಿನಾಥ ನಾರಾಯಣಪುರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಡಿ.ಸಿ.ಪಾಟೀಲ್​ ತಿಳಿಸಿದರು.
ನಂತರ ಮಾತನಾಡಿದ ಅವರು, ಸಂಘದ ತಾಲೂಕು ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಕೇವಲ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಾಲಪ್ಪ ಕುಪ್ಪಿ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಶಾಂತಿನಾಥ ನಾರಾಯಣಪುರ ಅವರು ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಣೆ ಮಾಡಿದರು.
ಸಹಾಯಕ ಚುನಾವಣಾಧಿಕಾರಿಯಾಗಿ ಪವನ ಕುಲಕರ್ಣಿ ಕೆಂಭಾವಿ ಕಾರ್ಯನಿರ್ವಹಿಸಿದರು.
ಈ ವೇಳೆ ಹಿರಿಯ ಪತ್ರಕರ್ತರಾದ ಬಸವರಾಜ ಅಂಗಡಿ, ರಾವೇಂದ್ರ ಕಾಮನಟಗಿ, ವೆಂಕಟಗಿರಿ ದೇಶಪಾಂಡೆ, ಭೀಮಶೇನರಾವ್​ ಕುಲರ್ಣಿ, ಚಂದ್ರಶೇಖರ ನಾರಾಯಣಪುರ, ಪವನ್​ ದೇಶಪಾಂಡೆ, ಬಸವರಾಜ ಶಾರದಳ್ಳಿ, ಅನಿಲ ಬಿರಾದಾರ, ಪ್ರೀತಿ ರಾಠಿ, ಬಸವರಾಜ ಕಟ್ಟಿಮನಿ, ಮಲ್ಲು ಗುತ್ತೆದಾರ್​, ಸಿದ್ದನಗೌಡ ಬಿರಾದಾರ, ಶ್ರೀಹರಿ ಕುಲಕರ್ಣಿ, ಶ್ರೀಕಾಂತ ನಾಗರಾಳ, ಶರಣಬಸವ ಪಾಟೀಲ್​, ಪ್ರಾಣೇಶ ದೇಶಪಾಂಡೆ ಇತರರಿದ್ದರು.