ಬೀದರ್ನಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿರದಲ್ಲಿ ಯೋಗ ಮಹೋತ್ಸವದ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ಅನಂತ ಬಿರಾದಾರ್, ಭವರಲಾಲ್ ಆರ್ಯ, ಗಣಪತರಾವ ಖೂಬಾ, ಬಸವರಾಜ ಧನ್ನೂರ, ಯೋಗೇಂದ್ರ ಯದಲಾಪುರೆ, ಚಂದ್ರಶೇಖರ ಹೆಬ್ಬಾಳೆ, ಅಮೃತರಾವ್ ಪಾಟೀಲ್ ಇತರರಿದ್ದರು.
- ಅನಂತ ಬಿರಾದಾರ್ ಅಭಿಮತ
- ಬೀದರ್ನಲ್ಲಿ ಯೋಗ, ಧ್ಯಾನ, ಪ್ರಾಣಾಯಾಮ ಶಿಬಿರ
ಬೀದರ್: ದೈಹಿಕ, ಮಾನಸಿಕ, ಅಧ್ಯಾತ್ಮ, ಸಾಮಾಜಿಕ ಹಾಗೂ ಭಾವನಾತ್ಮಕ ಸಮತೋಲನವೇ ಆರೋಗ್ಯಪೂರ್ಣ ಜೀವನ ಎಂದು ಅಂತಾರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸಾ ಸಂಸ್ಥೆ ಅಧ್ಯರೂ ಆದ ಕೇಂದ್ರ ಆಯುಷ್ ಇಲಾಖೆ ಯೋಗ ಸರ್ಟಿಫಿಕೇಷನ್ ಮಂಡಳಿ ಸದಸ್ಯ ಅನಂತ ಬಿರಾದಾರ್ ಹೇಳಿದರು.
ಪತಂಜಲಿ ಯೋಗ ಸಮಿತಿ ಜಿಲ್ಲಾ ಟಕ ನಗರದಲ್ಲಿ ಶನಿವಾರ ಆಯೋಜಿಸಿದ್ದ ವಿಶೇಷ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಯೋಗದ ಮೊರೆ ಹೋಗಬೇಕು. ಯೋಗ ಮತ್ತು ಪ್ರಾಕೃತಿಕ ಚಿಕಿತ್ಸೆ ಮನುಷ್ಯನಿಗೆ ಆನಂದಮಯ ಜೀವನ ನಡೆಸಲು ನೆರವಾಗುತ್ತವೆ ಎಂದರು.
ಕೇಂದ್ರ ಸರ್ಕಾರ 2047ರ ವೇಳೆಗೆ ವಿಕಸಿತ ಭಾರತವನ್ನಾಗಿಸುವ ಗುರಿ ಹೊಂದಿದೆ. ಈ ದಿಸೆಯಲ್ಲಿ ಮಹತ್ವದ ಹೆಜ್ಜೆ ಕೂಡ ಇಟ್ಟಿದೆ. ಯೋಗ ಮತ್ತು ಪ್ರಾಕೃತಿಕ ಚಿಕಿತ್ಸೆಗೆ ಉತ್ತೇಜನ ನೀಡುತ್ತಿದ್ದು, ಜನರು ಸಹ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯ ಬಸವರಾಜ ಧನ್ನೂರ ಮಾತನಾಡಿ, ಯೋಗ ಆರೋಗ್ಯವಂತ ವ್ಯಕ್ತಿಗೆ ಜೀವನ ಪದ್ಧತಿ, ರೋಗಿಗೆ ಚಿಕಿತ್ಸಾ ಪದ್ಧತಿ ಹಾಗೂ ಸಾಧಕನಿಗೆ ಸಾಧನಾ ಪದ್ಧತಿಯಾಗಿದೆ. ಆತ್ಮ&ಪರಮಾತ್ಮನ ಮಿಲನವೇ ಯೋಗ. ಯೋಗದಿಂದ ಮನುಷ್ಯನ ಸಂಪೂರ್ಣ ಶಕ್ತಿಯನ್ನು ಜಾಗೃತಗೊಳಿಸಬಹುದಾಗಿದೆ ಎಂದು ಹೇಳಿದರು.
ಪತಂಜಲಿ ಯೋಗ ಸಮಿತಿ ಕರ್ನಾಟಕದ ಪ್ರಭಾರಿ ಭವರಲಾಲ್ ಆರ್ಯ, ಹಿರಿಯ ಯೋಗ ಸಾಧಕ ಗಣಪತರಾವ್ ಖೂಬಾ, ಗಾನಯೋಗಿ ಪಂಚಾರ ಗವಾಯಿ ಸೇವಾ ಸಂದ ಅಧ್ಯ ಚಂದ್ರಶೇಖರ ಹೆಬ್ಬಾಳೆ, ಸಪ್ನಾ ಕನ್ವೆನ್ಶನ್ ಹಾಲ್ ವ್ಯವಸ್ಥಾಪಕ ಅಮೃತರಾವ್ ಪಾಟೀಲ್ ಖಾಜಾಪುರ ಮಾತನಾಡಿದರು.
ಪತಂಜಲಿ ಯೋಗ ಸಮಿತಿ ಜಿಲ್ಲಾಧ್ಯ ಯೋಗೇಂದ್ರ ಯದಲಾಪುರೆ ಅಧ್ಯತೆ ವಹಿಸಿದ್ದರು. ಪ್ರಮುಖರಾದ ಗುರುನಾಥ ರಾಜಗೀರಾ, ರೂಪಾ ಪಾಟೀಲ್, ಮಂಜುಳಾ ಮುಚಳಂಬೆ, ಉಮಾದೇವಿ ಹೂಗಾರ, ಗೋರಕನಾಥ ಕುಂಬಾರ, ಲಲಿತಾ ಗಾದಗೆ, ಹನುಮಾನ ಠಾಕೂರ್, ಅಜಯಕುಮಾರ ದುಬೆ, ಜಗದೀಶ್ ಖೂಬಾ, ಶಿವಮೂರ್ತಿ ಬಟನಾಪುರೆ, ವಿಶ್ವನಾಥ ಮಠಪತಿ, ಹುಲೆಪ್ಪ ಬರದಾಬಾದೆ, ಗುರಪ್ಪ ಗಿರಿಮಲ್, ಮಲ್ಲಿಕಾರ್ಜುನ ನೆಲವಾಡ, ರವೀಂದ್ರ ಗಚ್ಚಿನಮಠ, ಯೋಗ ಶಿಕರಾದ ವಿಜಯಕುಮಾರ ಬಾಬಣೆ, ರವಿ ತೆಲಗಾಣೆ, ವೀರಭದ್ರಪ್ಪ ಉಪ್ಪಿನ್, ಕಂಟೆಪ್ಪ ಗಂದಿಗುಡೆ, ಕಲ್ಲಪ್ಪ ಮುಗಟೆ, ಸಂಗು ಸಾಹುಕಾರ, ಶಿವಕುಮಾರ ವಸ್ಮತೆ, ತಾನಾಜಿ ಸಾವರೆ, ಸಂತೋಷ ಪಾಟೀಲ್, ರಾವೇಂದ್ರ ಕುಲಕರ್ಣಿ, ನಾಗರಾಜ ಸ್ವಾಮಿ ಕಮಠಾಣ, ಶಿವಾಜಿ ಭೋಸ್ಲೆ, ಶಿವಾನಂದ ಡೊಣ್ಣೆ, ವಿದ್ಯಾವತಿ ಹಿರೇಮಠ, ವಿಲಾಸ ಪಾಟೀಲ್, ಸಂಜೀವಕುಮಾರ ಅಷ್ಟೂರೆ, ರಾಜೇಶ್ವರಿ ಕಲೀಂ, ಶೈಲಜಾ ಕೋತಮಿರ್, ಅನಿತಾ ಮಡಿವಾಳ, ಪದ್ಮಾ ಮಹಾರಾಜ, ಭದ್ರಮ್ಮ, ಶಕುಂತಲಾ, ಅನೀಲ್ ಏಕಂಬೆ ಇತರರಿದ್ದರು. ಕೃಷ್ಣಾರಡ್ಡಿ ಸ್ವಾಗತಿಸಿದರು. ರಾಖಿ ಚೌಧರಿ ನಿರೂಪಣೆ ಮಾಡಿದರು. ಅಶೋಕರಡ್ಡಿ ವಂದಿಸಿದರು.
ಕಾರ್ಯಕ್ರಮದ ನಂತರ ಕನ್ವೆನ್ಶನ್ ಹಾಲ್ನಿಂದ ಬಿವಿಬಿ ಕಾಲೇಜುವರೆಗೆ ಭಿತ್ತಿಚಿತ್ರಗಳೊಂದಿಗೆ ಯೋಗ ಹಾಗೂ ಪ್ರಾಕತಿಕ ಚಿಕಿತ್ಸೆ ಕುರಿತ ಜಾಗೃತಿ ಜಾಥಾ ನಡೆಯಿತು.
ಮನುಷ್ಯ ದೈಹಿಕ ಮತ್ತು ಮಾನಸಿಕವಾಗಿ ಚೈತನ್ಯದಿಂದ ಇರುವಲ್ಲಿ ಯೋಗದ ಪಾತ್ರ ಬಹಳ ಮಹತ್ವದ್ದಾಗಿದೆ. ಯೋಗದಲ್ಲಿ ಆಸನ, ಪ್ರಾಣಾಯಾಮ, ಧ್ಯಾನ ಕ್ರಿಯೆ ಪ್ರಮುಖವಾಗಿವೆ. ಯೋಗ ಕ್ರಿಯೆ ಅಳವಡಿಸಿಕೊಳ್ಳುವುದರಿಂದ ದೇಶ ಹಾಗೂ ಸಮಾಜ ಉತ್ಸಾಹಿ ಆಗಿರಲಿದೆ.
ಆರೋಗ್ಯಪೂರ್ಣ ಬೀದರ್ ಜಿಲ್ಲೆಯಾಗಿಸುವ ಗುರಿ ಸಮಿತಿಯದ್ದು. ಈ ದಿಸೆಯಲ್ಲಿ ವಿವಿಧ ಚಟವಟಿಕೆಗಳನ್ನು ನಡೆಸಲಾಗುತ್ತಿದೆ. ಯೋಗ, ಧ್ಯಾನ ಹಾಗೂ ಪ್ರಾಣಾಯಾಮದಿಂದ ಮನುಷ್ಯ ರೋಗಗಳಿಂದ ದೂರ ಇರಬಹುದು. ಹೀಗಾಗಿ ಯೋಗವನ್ನು ನಿತ್ಯ ಜೀವನದ ಭಾಗವಾಗಿಸಬೇಕು.