ಕಮಲನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬ ನಿಮಿತ್ತ ಗುರುವಾರ ಮುಸ್ಲಿಂರು ವಿಶೇಷ ಪ್ರಾರ್ಥನೆ ಸಲ್ಲಿಸಿದರು
ಕಮಲನಗರ: ತ್ಯಾಗ ಹಾಗೂ ಬಲಿದಾನಗಳ ಸಂಕೇತವಾಗಿರುವ ಈದ್-ಉಲ್-ಅದಾ (ಬಕ್ರೀದ್) ಹಬ್ಬದ ನಿಮಿತ್ತ ಪಟ್ಟಣದ ಈದ್ಗಾ ಮೈದಾನದಲ್ಲಿ ಗುರುವಾರ ಮುಸ್ಲಿಂರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರು ಹಾಫೀಸ್ ಸಲ್ಮಾನ ತಂಬೋಲಿ ವಿಶೇಷ ಪ್ರಾರ್ಥನೆ ಬೋಧಿಸಿ ಮಾತನಾಡಿ, ಬಕ್ರೀದ್ ಸತ್ಯ ಮತ್ತು ಧರ್ಮದ ಪ್ರಚಾರಕರಾಗಿದ್ದ ಪ್ರವಾದಿ ಹಜರತ್ ಇಬ್ರಾಹಿಂ ಅವರ ತ್ಯಾಗ, ಬಲಿದಾನ ಪ್ರತಿಕ ಎಂದರು. ಮುಸ್ಲಿಂರು ಬೆಳಗ್ಗೆ ಹೊಸ ಬಟ್ಟೆ ಧರಿಸಿ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶುಭಾಶಯ ವಿನಿಮಯ ಮಾಡಿಕೊಂಡರು. ಅಜರ ಬಾಗವಾನ್, ಇಸ್ಮಾಯಿಲ್ ಪಠಾಣ, ನಾಜೀಮ್ ಬಾಗವಾನ್, ಅಯೂಬ್ ಖುರೇಶಿ, ಮುಕ್ತಾರ್ ಮನಿಯಾರ್, ಶಬ್ಬಿರ್ ಖುರೇಶಿ, ಎಂ.ಡಿ ಜಾಫರ್, ಬಾಬಾ ಬಾಗವಾನ್, ಇರ್ಫಾನ್ ಶೇಖ, ಅಬೇದ್ ಶೇಖ, ಹಸನ್ ಬಾಗವಾನ್ ಶೇರು ಬಾಗವಾನ್, ಸೈಯ್ಯದ್ ಉಸ್ಮಾನ್, ಅತೀಕ್ ಶೇಖ, ಮಾಜೀದ್ ಬಾಗವಾನ್ ಸಲ್ಮಾನ್ ಖುರೇಶಿ, ಆಸೀಫ್ ಮನಿಯಾರ್, ಜಹೀರ್ ಪಠಾಣ, ಮುತಹೀರ್ ಬಾಗವಾನ್ ಇತರರಿದ್ದರು.