ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಜನ್ಮದಿನದ ಅಂಗವಾಗಿ ಇಂಚಲ ಗ್ರಾಮದ ಶ್ರೀಮಠದ ಡಾ.ಶಿವಾನಂದ ಭಾರತಿ ಶ್ರೀಗಳ ಆಶೀರ್ವಾದ ಪಡೆದರು. ಪೂರ್ಣಾನಂದ ಸ್ವಾಮೀಜಿ, ಬಸಪ್ಪ ಮಲ್ಲೂರ, ಬಾಳನಗೌಡ ಪಾಟೀಲ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಅಧಿಕಾರ ಇಲ್ಲದಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಬಂದು ಶುಭ ಕೋರಿ ಹಾರೆಸಿದ್ದು, ನನ್ನ ಜನಸೇವೆಯ ಮನೋಭಾವನೆಯನ್ನು ಇಮ್ಮಡಿಸಿದೆ. ನಿಮ್ಮ ಅಭಿಮಾನಕ್ಕೆ ಸದಾ ಚಿರಋಣಿಯಾಗಿ, ಪ್ರಾಮಾಣಿಕತೆಯಿಂದ ಸೇವೆ ಮಾಡುವೆ. ನಾಡಿಗೆ ಅನ್ಯಾಯ ಮಾಡುವವರ ಹಾಗೂ ಅನ್ಯಾಯವಾದಾಗ ಹೋರಾಟಕ್ಕೆ ನಾನು ಸದಾ ಸಿದ್ಧನಿರುವೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ತಮ್ಮ 62ನೇ ಜನ್ಮದಿನದ ಅಂಗವಾಗಿ ಮಂಗಳವಾರ ಕ್ಷೇತ್ರದ ವಿವಿಧ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ತಾಲೂಕು ಆಸ್ಪತ್ರೆ, ಇಂಚಲ ಆಯುರ್ವೇದ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು, ಬ್ರೆಡ್ ಹಾಗೂ ಹಾಲು ವಿತರಿಸಿ ಬಳಿಕ ಅವರು ಮಾತನಾಡಿದರು.
ಕಿತ್ತೂರು ರಾಣಿ ಚನ್ನಮ್ಮಾಜಿ ಸ್ಮಾರಕಗಳ ಅಭಿವದ್ಧಿ ಕುರಿತಾಗಿ ಸರ್ಕಾರ, ಸ್ಥಳಿಯ ಶಾಸಕರ ಅಸಡ್ಡೆಯನ್ನು ಖಂಡಿಸಿ, ನಡೆಸಿದ 23 ದಿನಗಳ ಹೋರಾಟದಲ್ಲಿ ಪಬೇದ ಮರೆತು ಜನತೆ ನನಗೆ ಬೆಂಬಲಿಸಿದ್ದೀರಿ. ತಾತ್ಕಾಲಿಕವಾಗಿ ಹೋರಾಟ ಕೆಬಿಡಲಾಗಿದೆ. ಮುಂದಿನ ದಿನಗಳಲ್ಲಿ ನ್ಯಾಯ ಸಿಗದಿದ್ದರೆ ಮತ್ತೆ ಹೋರಾಟ ನಡೆಯಲಿದೆ. ಸ್ವಾತಂತ್ರ್ಯ ಯೋಧರ, ವೀರರ ಕುರಿತಾದ ರ್ನಿಲಕ್ಷ$್ಯವನ್ನು ಎಂದು ಸಹಿಸುವುದಿಲ್ಲ ಎಂದರು.
ಬೆಳಗ್ಗೆ ಮನೆ ದೇವರಾದ ಮಲ್ಲಮ್ಮನ ಬೆಳವಡಿಯ ವೀರಭದ್ರೇಶ್ವರ, ಲಿಂಗದಳ್ಳಿಯ ಅಂಬಾಭವಾನಿ, ಮರಕುಂಬಿಯ ಚಕ್ರ ಸಮೇತ ಚಾಮುಂಡೇಶ್ವರಿ, ಮುರಗೋಡ ಮಹಾಂತಜ್ಜನ ಮಠ ಹಾಗೂ ಇಂಚಲದ ಶಿವಯೋಗೀಶ್ವರ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಮುರಗೋಡ ನೀಲಕಂಠ ಸ್ವಾಮೀಜಿ, ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹಾಗೂ ಜಾಲಿಕೊಪ್ಪ ತಪೋವನ ಸ್ವಾಮೀಜಿ ಆಶೀರ್ವಾದ ಪಡೆದರು.
ಇಂಚಲ ಹಾಗೂ ಮುರಗೋಡ ಗ್ರಾಮಗಳ ಗೋಶಾಲೆಗಳಿಗೆ ತೆರಳಿ ಗೋಪೂಜೆ ಕೆಗೊಂಡು ಗೋಮಾತೆಗೆ ಅಗತ್ಯ ಮೇವು ಹಾಗೂ ಆಹಾರ ಸಾಮಗ್ರಿ ವಿತರಿಸಿದರು. ಜನ್ಮ ದಿನದ ಅಂಗವಾಗಿ ನಡೆದ ಕೆಆರ್ಸಿಇಎಸ್ ಶಿಣ ಸಂಸ್ಥೆಯಲ್ಲಿನ ರಕ್ತದಾನ ಶಿಬಿರಕ್ಕೆ ಭೇಟಿ ನೀಡಿ, ನಂತರ ಗಹ ಕಚೇರಿಯಲ್ಲಿ ಸಾರ್ವಜನಿಕರು, ಕಾರ್ಯಕರ್ತರು, ಅಭಿಮಾನಿಗಳನ್ನು ಭೇಟಿಯಾದರು. ಕೇಕ್ ಕತ್ತರಿಸುವುದರೊಂದಿಗೆ ಜನ್ಮದಿನ ಆಚರಿಸಿಕೊಂಡರು. ಸಾವಿರಾರು ಜನತೆ ತಂಡೋಪತಂಡವಾಗಿ ಬಂದು ಶುಭ ಹಾರೆಸಿದರು.
ಜಿಪಂ ಮಾಜಿ ಸದಸ್ಯ ವೀರಣ್ಣ ಕರೀಕಟ್ಟಿ,
ಐ.ಎಲ್.ಪಾಟೀಲ, ವಿ.ಜಿ.ಪಾಟೀಲ, ಮಹ್ಮದ್ಸಾಹೇಬ ನದಾಫ್, ರಾಜು ಕುಡಸೋಣ್ಣವರ, ಮಡಿವಾಳಪ್ಪ ಹೋಟಿ, ಎ್.ಎಸ್. ಸಿದ್ದನಗೌಡರ, ಬಾಳನಗೌಡ ಪಾಟೀಲ, ಜಗದೀಶ ಕೊತಂಬ್ರಿ, ಶ್ರೀಶೆಲ ಯಡಳ್ಳಿ, ಶಿವಪ್ರಸಾದ ಪಾಟೀಲ, ಚಂದನ ಕೌಜಲಗಿ, ನಿಂಗಪ್ಪ ಚೌಡನ್ನವರ, ಪರ್ವತಗೌಡ ಪಾಟೀಲ, ವಿಶಾಲ ಬೋಗೂರ, ಅಪ್ಪಾಸಾಹೇಬ ಲಕ್ಕುಂಡಿ, ಗಂಗಪ್ಪ ಗುಗ್ಗರಿ, ಆನಂದ ಮೂಗಿ, ವಿಜಯ ಪತ್ತಾರ, ರಿತೇಶ ಪಾಟೀಲ, ಶ್ರೀಶೆಲ ಶರಣಪ್ಪನವರ, ಬಸವರಾಜ ನೇಸರಗಿ, ಸುನೀಲ ಈಟಿ, ರಾಜು ನರಸನ್ನವರ ಇತರರು ಇದ್ದರು.
ದುಬೈನಿಂದ ಆಗಮಿಸಿ ಶುಭ ಹಾರೈಕೆ: ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರ ಜನ್ಮದಿನಕ್ಕೆ ಶುಭ ಕೋರಲು ದೂರದ ದುಬೆ ದೇಶದಲ್ಲಿ ವಾಸವಿರುವ ಅವರ ಅಭಿಮಾನಿ ಗೋಕಾಕದ ವಿಠ್ಠಲ ಮೂಲಿಮನಿ ಮಂಗಳವಾರ ಆಗಮಿಸಿ ದುಬೆನ ವಿಶ್ವ ವಿಖ್ಯಾತ ಬುರ್ಜ್ ಖಲೀಾದ ಮಾದರಿ ಉಡುಗೊರೆಯಾಗಿ ನೀಡಿ ಶುಭ ಕೋರಿದರು. ನೂರಾರು ವರ್ಷಗಳಿಂದ ನಿರಂತರ ಜನಸೇವೆಯಲ್ಲಿ ತೊಡಗಿರುವ ಅರವಳ್ಳಿ ಗೌಡರ ಮನೆತನದವರಾದ ವಿ.ಐ.ಪಾಟೀಲರು ಹದಯವಂತ ವ್ಯಕ್ತಿ. ಹೀಗಾಗಿ ಎಷ್ಟೇ ದೂರವಿದ್ದರೂ ದುಬೆನಿಂದ ಇಲ್ಲಿ ಆಗಮಿಸಿ ಅವರಿಗೆ ಶುಭ ಕೋರಿದೆ ಎಂದು ವಿಠ್ಠಲ ಮೂಲಿಮನಿ ತಿಳಿಸಿದರು.
ಅಧಿಕಾರ ಇಲ್ಲದಿದ್ದರೂ ಜನರ ಆಶೀರ್ವಾದದಿಂದ ಜನಸೇವೆಯಲ್ಲಿ ಮುಂದುವರಿಯುವುದು ಓರ್ವ ಜನಸೇವಕನಾಗಿ ನನ್ನ ಕರ್ತವ್ಯ. ಮುಂಬರುವ 2028 ಚುನಾವಣೆಗೆ ಯಾವುದೇ ಸಮಸ್ಯೆಗೆ ಆಸ್ಪದ ನೀಡದೆ, ಎಲ್ಲರೂ ಸೇರಿ ಪವನ್ನು ಸಂಟಿಸೋಣ. ಮುಂದಿನ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆದಿದೆ. ಈ ಬಾರಿ ಜೆಡಿಎಸ್ ನಮ್ಮೊಂದಿಗೆ ಮೆತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿ ಬಲ ಹೆಚ್ಚಿ, ಗೆಲವು ಸುಲಭವಾಗಲಿದೆ.
> ಡಾ.ವಿ.ಐ.ಪಾಟೀಲ ಮಾಜಿ ಶಾಸಕ