ಬೆಲಹೊಂಗಲ ಜಿಲ್ಲೆಯನ್ನಾಗಿ ೂಷಿಸಬೇಕೆಂದು ಗಣ್ಯರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಸಲ್ಲಿಸಿತು. ನೀಲಕಂಠ ಸ್ವಾಮೀಜಿ, ಗಂಗಾಧರ ಸ್ವಾಮೀಜಿ, ಮುರುರಾಜೇಂದ್ರ ಸ್ವಾಮೀಜಿ, ಪ್ರಭುನೀಲಕಂಠ ಸ್ವಾಮೀಜಿ, ಮಡಿವಾಳೇಶ್ವರ ಸ್ವಾಮೀಜಿ ಇತರರಿದ್ದರು. 
ರಾಜ್ಯ

ಬೈಲಹೊಂಗಲ ಜಿಲ್ಲೆ ಮಾಡಲು ಆಗ್ರಹ

ಬೈಲಹೊಂಗಲ: ಬ್ರಿಟಿಷರ ಕಾಲದಿಂದಲೂ ಬೈಲಹೊಂಗಲ ಉಪವಿಭಾಗ ಕೇಂದ್ರವಾಗಿದ್ದು, ಗೋಕಾಕ, ಮೂಡಲಗಿ, ಸವದತ್ತಿ, ಯರಗಟ್ಟಿ, ಚನ್ನಮ್ಮನ ಕಿತ್ತೂರು, ರಾಮದುರ್ಗ ತಾಲೂಕು ವ್ಯಾಪ್ತಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಬೈಲಹೊಂಗಲ ಜಿಲ್ಲೆ ೂಷಿಸಬೇಕೆಂದು ಸ್ಥಳಿಯ ಸ್ವಾಮೀಜಿಗಳು, ಶಾಸಕರು, ಮಾಜಿ ಶಾಸಕರು ಹಾಗೂ ಗಣ್ಯರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಭೇಟಿಯಾಗಿ, ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷಿ$್ಮ ಹೆಬ್ಬಾಳ್ಕರ್​, ವಿ.ಪ. ಸದಸ್ಯ ಚನ್ನರಾಜ ಹಟ್ಟಿಹೊಳಿ ಸಮ್ಮುಖದಲ್ಲಿ ಮನವಿ ಸಲ್ಲಿಸಿತು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಬೆಲಹೊಂಗಲ, ಚನ್ನಮ್ಮನ ಕಿತ್ತೂರು, ರಾಮದುರ್ಗ, ಯರಗಟ್ಟಿ, ಸವದತ್ತಿ ತಾಲೂಕು ಒಳಗೊಂಡು ಬೆಲಹೊಂಗಲ ಜಿಲ್ಲೆ ೂಷಿಸಬೇಕು. ಇದಕ್ಕೆ ಎಲ್ಲ ತಾಲೂಕುಗಳ ಶಾಸಕರ ಸಮ್ಮತಿ ಇದೆ ಎಂದರು.
ಚನ್ನಮ್ಮನಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಬೆಂಬಲ ವ್ಯಕ್ತಪಡಿಸಿದರು. ರಾಮದುರ್ಗ ಶಾಸಕ ಅಶೋಕ ಪಟ್ಟಣ ಕೂಡ ರಾಮದುರ್ಗ ತಾಲೂಕು ಒಳಗೊಂಡ ಬೆಲಹೊಂಗಲ ಜಿಲ್ಲೆಯನ್ನಾಗಿಸಬೇಕೆಂದು ಧ್ವನಿಗೂಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಜಿಲ್ಲೆಯ ಎಲ್ಲ ಶಾಸಕರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಮುರಗೋಡದ ನೀಲಕಂಠ ಸ್ವಾಮೀಜಿ, ಹೊಸೂರಿನ ಗಂಗಾಧರ ಸ್ವಾಮೀಜಿ, ಮುನವಳ್ಳಿಯ ಮುರುರಾಜೇಂದ್ರ ಸ್ವಾಮೀಜಿ, ಬೆಲಹೊಂಗಲ ಪ್ರಭುನೀಲಕಂಠ ಸ್ವಾಮೀಜಿ, ಮಡಿವಾಳೇಶ್ವರ ಸ್ವಾಮೀಜಿ, ಮಹಾಂತಯ್ಯ ಆರಾದ್ರಿಮಠ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಜಿಲ್ಲಾ ಹೋರಾಟ ಸಮಿತಿ ಅಧ್ಯ ಶಿವರಂಜನ ಬೋಳನ್ನವರ, ಜೆಡಿಎಸ್​ ಜಿಲ್ಲಾಧ್ಯ ಶಂಕರ ಮಾಡಲಗಿ, ಬಿಜೆಪಿ ಮುಖಂಡ ಗುರು ಮೆಟಗುಡ್ಡ, ಕರ್ನಾಟಕ ನವ ನಿರ್ಮಾಣ ಪಡೆ ಜಿಲ್ಲಾ ಉಪಾಧ್ಯ ಮಹಾಂತೇಶ ತುರಮರಿ, ಮುಖಂಡ ಬಸವರಾಜ ಕೌಜಲಗಿ, ಪುರಸಭೆ ಮಾಜಿ ಅಧ್ಯ ಬಸವರಾಜ ಜನ್ಮಟ್ಟಿ, ವಕೀಲರಾದ ಎ್​.ಎಸ್​.ಸಿದ್ದನಗೌಡರ, ಮಹಾಂತೇಶ ಮತ್ತಿಕೊಪ್ಪ, ಮಹೇಶ ಬೆಲ್ಲದ, ಮುಖಂಡರಾದ ಮಡಿವಾಳಪ್ಪ ಹೋಟಿ, ಶ್ರೀಶೆಲ ಯಡಳ್ಳಿ, ಬಿ.ಬಿ.ಗಣಾಚಾರಿ, ವಿರೂಪಾಯ್ಯ ಕೋರಿಮಠ, ಮಹಾಂತೇಶ ಕಮತ, ಶಬ್ಬಿರ್​ ಕುದರಿ, ಾರೂಕ್​ ಸುತಗಟ್ಟಿ, ಬಾಳನಗೌಡ ಪಾಟೀಲ, ಬಸವರಾಜ ಭರಮಣ್ಣವರ, ಕನ್ನಡಪರ ಸಂಟನೆ ಮುಖಂಡರು ಇದ್ದರು.