ಬೈಲವಾಡ ಗ್ರಾಮದ ಗ್ರಾಮದೇವಿ ಜಾತ್ರಾ ಮಹೋತ್ಸವದ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು. ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಬಾಳಪ್ಪ ಸೊಲಬಕ್ಕನವರ, ಮಡಿವಾಳಪ್ಪ ಹೋಟಿ, ಸುನೀಲ ಮರಕುಂಬಿ, ಆನಂದ ಮೂಗಿ, ಬಸವರಾಜ ಕರೀಕಟ್ಟಿ, ಶ್ರೀಶೈಲ ಯಲ್ಲಪ್ಪಗೌಡ್ರ ಇತರರಿದ್ದರು. 
ರಾಜ್ಯ

ಬೈಲವಾಡ ಗ್ರಾಮದೇವಿ ಜಾತ್ರೆ ಏ.20ರಿಂದ

ಎಂ.ಎಸ್​.ಹಿರೇಮಠ ಬೆಳಗಾವಿ
ಬೈಲಹೊಂಗಲ: ತಾಲೂಕಿನ ಬೈಲವಾಡ ಗ್ರಾಮದಲ್ಲಿ ಏ.20ರಿಂದ ಮೇ 5 ರವರೆಗೆ ನಡೆಯುವ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವಕ್ಕೆ ಭಕ್ತರು ಸಹಕಾರ ನೀಡಬೇಕೆಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಗ್ರಾಮದ ಗ್ರಾಮದೇವಿ ಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಜಾತ್ರೆಯ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಜಾತ್ರೆಗಳು ಮನುಷ್ಯನ ಆಲಸ್ಯ ಕಳೆದು ಬದುಕಿಗೆ ಹೊಸ ಹುರುಪು ನೀಡುತ್ತವೆ. ಧರ್ಮ, ಅಧ್ಯಾತ್ಮದ ತಳಹದಿ ಮೇಲೆ ಜಾತ್ರೆಯನ್ನು ಗ್ರಾಮಸ್ಥರು ಯಶಸ್ವಿಗೊಳಿಸಬೇಕೆಂದು ಸಲಹೆ ನೀಡಿದರು.
ಮುಖಂಡ ಬಾಳಪ್ಪ ಸೊಲಬಕ್ಕನವರ ಮಾತನಾಡಿ, 11 ವರ್ಷಗಳ ನಂತರ ಜಾತ್ರೆ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ಸಿದ್ಧತೆಗಳನ್ನು ಆರಂಭಿಸಲಾಗಿದೆ. ಜಾತ್ರೆಯ ಯಶಸ್ಸಿಗೆ ಗ್ರಾಮಸ್ಥರ ಸಹಕಾರ ಅವಶ್ಯ ಎಂದರು.
ಮಡಿವಾಳಪ್ಪ ಹೋಟಿ, ಸುನೀಲ ಮರಕುಂಬಿ, ಆನಂದ ಮೂಗಿ, ಜಾತ್ರಾ ಮಹೋತ್ಸವ ಸೇವಾ ಸಮಿತಿ ಸದಸ್ಯರಾದ ಬಸವರಾಜ ಕರೀಕಟ್ಟಿ, ಶ್ರೀಶೈಲ ಯಲ್ಲಪ್ಪಗೌಡ್ರ, ಸೋಮನಗೌಡ ಗಿರೆಪ್ಪಗೌಡ್ರ, ರಮೇಶ ಯಲ್ಲಪ್ಪಗೌಡ್ರ, ಶಿವಬಸಪ್ಪ ಮದ್ನಳ್ಳಿ, ವೀರನಗೌಡ ಗಿರೆಪ್ಪಗೌಡ್ರ, ಸುರೇಶ ಮುದಕನಗೌಡ್ರ, ರುದ್ರಪ್ಪ ಹೊಸೂರ, ಬಸಪ್ಪ ಬೋಳಗೌಡ್ರ, ಶಿವಬಸಪ್ಪ ಬೋಳಗೌಡ್ರ, ಶಿವನಗೌಡ ಪಾಟೀಲ, ಮಲಕಾಜ ಮದ್ನಳ್ಳಿ, ರುದ್ರಪ್ಪ ಹೊಸೂರ, ಬಸವರಾಜ ಗಿರೆಪ್ಪಗೌಡ್ರ, ರುದ್ರಯ್ಯ ಹಿರೇಮಠ, ಶ್ರೀಶೈಲ ಬಡಿಗೇರ, ಬಸವರಾಜ ಅರಳಿಕಟ್ಟಿ ಇತರರಿದ್ದರು.