ಬೈಲಹೊಂಗಲ ದಾನಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮುರುಂದ್ರ ಸ್ವಾಮೀಜಿ ಹಾಗೂ ಪ್ರಭುನೀಲಕಂಠ ಸ್ವಾಮೀಜಿ ಅವರನ್ನು ಸತ್ಕರಿಸಲಾಯಿತು. ಮುಕ್ತಾನಂದ ಸ್ವಾಮೀಜಿ, ರಾಜಯೋಗಿಣಿ ಬಿ.ಕೆ.ಪ್ರಭಾ ಅಕ್ಕ, ಡಾ.ಮಹಾಂತೇಶ ಶಾಸ್ತ್ರಿ, ಪ್ರಮೋದಕುಮಾರ ಇತರರಿದ್ದರು. 
ರಾಜ್ಯ

ಬೈಲಹೊಂಗಲ ಆಧ್ಯಾತ್ಮಿಕ ತಾಣಗಳ ತವರೂರು

ವಿಜಯವಾಣಿ ಸುದ್ದಿಜಾಲ ಬೈಲಹೊಂಗಲ
ಮಠ&ಮಾನ್ಯ, ದೇವಸ್ಥಾನಗಳಿಂದ ತುಂಬಿ ತುಳುಕುತ್ತಿರುವ ಬೈಲಹೊಂಗಲ ಆಧ್ಯಾತ್ಮಿಕ ತಾಣಗಳ ತವರೂರಾಗಿ ಜನತೆಗೆ ಸಂಸ್ಕಾರ, ಆಧ್ಯಾತ್ಮಿಕತೆ, ಶರಣ ಸಂಪ್ರದಾಯ ಬಿತ್ತುತ್ತಿದೆ ಎಂದು ಶಾಖಾ ಮೂರು ಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.
ನಗರದ ಚನ್ನಮ್ಮ ಉಪನಗರ ಬಡಾವಣೆಯ ದಾನಮ್ಮದೇವಿ ದೇವಸ್ಥಾನದ 17ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಈಚೆಗೆ ಜರುಗಿದ ಜಾತ್ರಾ ಮಹೋತ್ಸವ ಉದ್ಘಾಟನೆ ಹಾಗೂ ಸಿದ್ಧಾರೂಢ ಜೀವನಾಮೃತ ಚರಿತ್ರೆ ಪ್ರವಚನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮುನವಳ್ಳಿ ಸೋಮಶೇಖರ ಮಠದ ಮುರುರಾಜೇಂದ್ರ ಸ್ವಾಮೀಜಿ ಮಾತನಾಡಿ, ಲೋಕ ಕಲ್ಯಾಣಕ್ಕಾಗಿ ನಾಡಿನ ಹಲವಾರು ಮಠ&ಮಂದಿರಗಳು ಪ್ರತಿನಿತ್ಯ ಶ್ರಮಿಸುತ್ತಿದ್ದು, ಅಂತಹ ಧಾರ್ಮಿಕ ಕೇಂದ್ರಗಳಿಗೆ
ಭಕ್ತರು ತನು&ಮನ ಧನದಿಂದ ಸಹಾಯ ನೀಡಲು ಮುಂದಾಗಬೇಕು ಎಂದರು.
ಪ್ರವಚನಕಾರ ಮುಕ್ತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಏನೇ ಸಾಧನೆ ಮಾಡಿದರೂ ಸಂಸ್ಕಾರವಿಲ್ಲದಿದ್ದರೆ ಪಶು&ಪಗಳಿಗಿಂತ ಕಡೆಯಾಗಲಿದೆ. ಪ್ರವಚನ, ಪುರಾಣ, ಸತ್ಸಂಗಗಳು ಜೀವನಕ್ಕೆ ಸನ್ಮಾರ್ಗ ತೋರಲಿವೆ ಎಂದರು.
ಕಮಿಟಿ ಅಧ್ಯ ಪ್ರಮೋದಕುಮಾರ ವಕ್ಕುಂದಮಠ, ರಾಜಯೋಗಿಣಿ ಬಿ.ಕೆ.ಪ್ರಭಾ ಅಕ್ಕ, ಡಾ.ಮಹಾಂತೇಶ ಶಾಸ್ತ್ರಿ ಆರಾದ್ರಿಮಠ, ಬಿ.ಕೆ.ಬಸವರಾಜ ಇತರರಿದ್ದರು.