ಬಗರ್​ ಹುಕುಂ ಅಕ್ರಮದಾರರಿಗೆ ಕಂಟಕ Bagar Hukum 
ರಾಜ್ಯ

ಬಗರ್​ ಹುಕುಂ ಅಕ್ರಮದಾರರಿಗೆ ಕಂಟಕ Bagar Hukum

ಕಚೇರಿ ತೆರೆಯುದ್ದಂತೆ ದಾಳಿ ನಡೆಸಿದ ಜಿಲ್ಲಾ ಲೋಕಾಯುಕ್ತ ತಂಡ
ಬಂಗಾರಪೇಟೆ: ಬಂಗಾರಪೇಟೆ ಹಾಗೂ ಕೆಜಿಎಫ್​ ತಾಲೂಕು ವ್ಯಾಪ್ತಿಯಲ್ಲಿ ಬಗರ್​ ಹುಕುಂ ಯೋಜನೆ ಮೂಲಕ ಅಕ್ರಮವಾಗಿ ಕೋಟ್ಯಂತರ ಮೌಲ್ಯದ ಸಾಗುವಳಿ ಚೀಟಿ ವಿತರಣೆ ಮಾಡಿರುವ ಬಗ್ಗೆ ದಾಖಲಾದ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳ ತಂಡ ಬುಧವಾರ ಬಂಗಾರಪೇಟೆ ತಾಲೂಕು ಕಚೇರಿ ಮೇಲೆ ದಾಳಿ ನಡೆಸಿ ಖಡತಗಳನ್ನು ಪರಿಶೀಲನೆ ನಡೆಸಿತು.Bagar Hukum
ಬೆಳಗ್ಗೆ ಕಚೇರಿ ತೆರೆಯುತ್ತಿದ್ದಂತೆ ದಾಳಿ ನಡೆಸಿದ ಅಧಿಕಾರಿಗಳು ಸಂಜೆ 6 ಗಂಟೆಯಾದರೂ ಗ್ರೇಡ್​&2 ತಹಸೀಲ್ದಾರ್​ ಗಾಯತ್ರಿ ಕೊಠಡಿಯಲ್ಲಿ ಪರಿಶೀಲನೆ ನಡೆಸಿದರು.
ತಾಲೂಕಿನ ವೆಂಕಟೇಶ್​ಗೌಡ ಎನ್ನುವವರು ನೀಡಿರುವ ದೂರಿನಂತೆ 2017-&18ನೇ ಸಾಲಿನಲ್ಲಿ 731 ಜನರಿಗೆ ಬಗರ್​ ಹುಕುಂ ಅಡಿ ಅಕ್ರಮವಾಗಿ 521 ಎಕರೆ ಜಮೀನು ಹಂಚಿರುವ ಬಗ್ಗೆ ಮಹತ್ತರ ದಾಖಲೆಗಳಿಗಾಗಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದರು.
ತಾಲೂಕು ಕಚೇರಿಯಲ್ಲಿರುವ ಬಗರ್​ ಹುಕುಂ ಯೋಜನೆಯ ಪುಸ್ತಕ, ಆರ್​ಆರ್​ಟಿ ಶಾಖೆಯ ಖಡತ, ಕಂಪ್ಯೂಟರ್​ನಲ್ಲಿನ ದಾಖಲೆ ಪರಿಶೀಲಿಸಿದರು. ಎರಡು ತಂಡಗಳಿಂದ ಪರಿಶೀಲನೆ ನಡೆಯುತ್ತಿದ್ದು, ಕಂದಾಯ ಇಲಾಖೆ ಅಧಿಕಾರಿಗಳಿಗೆ ಆತಂಕ ಮೂಡಿಸಿದೆ.
ಬೆಂಗಳೂರು ನೋಂದಣಿಯ ಟಾಟಾ ಸುಮೊದಲ್ಲಿ ಬಂದಿಳಿದು ನೇರವಾಗಿ ಕಚೇರಿಯೊಳಗೆ ಹೋಗಿ ದಾಖಲೆ ಬಗ್ಗೆ ಮಾಹಿತಿ ಕೇಳಿದಾಗ ಲೋಕಾಯುಕ್ತ ಅಧಿಕಾರಿಗಳು ಬಂದಿದ್ದಾರೆ ಎಂದು ಸಿಬ್ಬಂದಿಗೆ ಅರಿವಾಗಿದೆ. ಗ್ರೇಡ್​&2 ಅಧಿಕಾರಿ ಕೊಠಡಿಯಲ್ಲಿ ಮಾತ್ರ ಕಡತಗಳ ಪರಿಶೀಲನೆ ನಡೆಸಿರುವ ಅಧಿಕಾರಿಗಳು, ಬೇರೆ ಶಾಖೆ ಕೊಠಡಿಗಳಿಗೆ ಭೇಟಿ ನೀಡದೆ ಇರುವುದು ಸಿಬ್ಬಂದಿಗೆ ಕೊಂಚ ನಿರಾಳ ತಂದಿದೆ.