Back to natural farming 
ರಾಜ್ಯ

ನೈಸರ್ಗಿಕ ಕೃಷಿಯತ್ತ ಮರಳಿ

ಹುಳಿಯಾರು: ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ಹುಳಿಯಾರು ಕೃಷಿ ಅಧಿಕಾರಿ ಎಸ್​.ರಾಧಮ್ಮ ತಿಳಿಸಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಧರ್ತಿ ಮಾತಾ ಬಚಾವೋ ಆಂದೋಲನದ ಅಂಗವಾಗಿ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಪಂ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೈತರಿಗಾಗಿ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಣ್ಣು ತನ್ನಲ್ಲಿರುವ ಉಪಯುಕ್ತ ಜೈವಿಕ ಅಂಶಗಳನ್ನು ಕಳೆದುಕೊಳ್ಳುತ್ತಿದೆ. ಇದೇ ರೀತಿ ಮುಂದುವರಿದರೆ ಮುಂದಿನ ಪೀಳಿಗೆಗೆ ಕೃಷಿ ಮಾಡುವುದು ಅಸಾಧ್ಯವಾಗಬಹುದು. ಹೀಗಾಗಿ ಸಮತೋಲಿತ ಗೊಬ್ಬರ ಬಳಕೆ ಹಾಗೂ ಮಣ್ಣಿನ ಆರೋಗ್ಯ ಕಾಪಾಡುವುದು ಇಂದಿನ ಅಗತ್ಯವಾಗಿದೆ ಎಂದರು.
ಆಧುನಿಕ ಕೃಷಿ ಪದ್ಧತಿಯಲ್ಲಿ ಅತಿಯಾದ ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ. ಭೂಮಿ ಬರಡಾಗುತ್ತಿದೆ. ಮುಂದಿನ ಪೀಳಿಗೆಗೆ ಫಲವತ್ತಾದ ಮಣ್ಣನ್ನು ಬಿಟ್ಟು ಹೋಗಬೇಕಾದರೆ ರೈತರು ನೈಸರ್ಗಿಕ ಕೃಷಿಯತ್ತ ಮರಳಬೇಕು. ನೈಸರ್ಗಿಕ ಕೃಷಿಯು ಕೇವಲ ಪದ್ಧತಿಯಲ್ಲ, ಅದು ಭೂಮಿಯನ್ನು ಬದುಕಿಸುವ ದಾರಿ. ಕೊಟ್ಟಿಗೆ ಗೊಬ್ಬರ, ಗಂಜಲ ಮತ್ತು ಕಾಡಿನ ಮಣ್ಣನ್ನು ಬಳಸಿ ರೈತರು ಸ್ವತ@ ಗೊಬ್ಬರ ತಯಾರಿಸಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಬೇಕು. ಮುಖ್ಯವಾಗಿ ಜೀವಾಮೃತ ಮತ್ತು ಘನ ಜೀವಾಮೃತ ಬಳಸುವುದರ ಮೂಲಕ ಮಣ್ಣಿನಲ್ಲಿರುವ ಸೂಕ್ಷ$್ಮ ಜೀವಿಗಳನ್ನು ಜಾಗೃತಗೊಳಿಸಲು ಮೊದಲು ರೈತರು ಮುಂದಾಗಬೇಕಿದೆ ಎಂದರು.
ಕೃಷಿ ಇಲಾಖೆಯ ಲತಾಮಣಿ ಮತ್ತು ಮನೋಹರ್​, ಪ್ರಗತಿ ಪರ ರೈತರಾದ ನಿರಂಜನ್​, ಚಂದ್ರಮ್ಮ, ಜಯಣ್ಣ, ಪ್ರವಿಣ್​, ಶಿವಣ್ಣ, ಕಿರಣ್​ ಕುಮಾರ್​ ಇದ್ದರು.