ಹಗರಿಬೊಮ್ಮನಹಳ್ಳಿ ಪೊಲೀಸ್ ಕ್ವಾರ್ಟರ್ಸ್ ಎದುರಿನ ವೃತ್ತದಲ್ಲಿ ಡಾ.ಬಾಬು ಜಗಜೀವನರಾಮ್ ನಾಮಫಲಕವನ್ನು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಅನಾವರಣಗೊಳಿಸಿದರು. ವೇದಿಕೆ ತಾಲೂಕು ಅಧ್ಯಕ್ಷ ಎಚ್.ಪ್ರಭಾಕರ್, ಪ್ರಮುಖರಾದ ಕೆಚ್ಚಿನಬಂಡಿ ದುರುಗಪ್ಪ, ಹೆಗ್ಡಳ್ ಪರಶುರಾಮ್, ಯಡ್ರಮ್ಮಹಳ್ಳಿ ಮರಿಯಪ್ಪ, ರಾಮೇಶ್ ಪೂಜಾರಿ, ನಾಗರಾಜ್ ಕಲ್ಲಹಳ್ಳಿ ಇತರರಿದ್ದರು. 
ರಾಜ್ಯ

ಪ್ರೇರಣೆಯಾಗಿವೆ ಬಾಬೂಜಿ ಆದರ್ಶಗಳು

ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಮನಗರ ಪೊಲೀಸ್ ಕ್ವಾರ್ಟರ್ಸ್ ಮುಂದಿರುವ ವೃತ್ತದಲ್ಲಿ ಡಾ.ಬಾಬುಜಗಜೀವನ ರಾಮ್ ನಾಮಫಲಕವನ್ನು ಮಂಗಳವಾರ ಅನಾವರಣಗೊಳಿಸಲಾಯಿತು.
ಡಾ.ಬಾಬು ಜಗಜೀವನರಾಮ್ ವೇದಿಕೆ ತಾಲೂಕು ಅಧ್ಯಕ್ಷ ಎಚ್.ಪ್ರಭಾಕರ್ ಮಾತನಾಡಿ, ಬಾಬೂಜಿ ಅವರು ಶೋಷಿತ ಸಮುದಾಯದ ಧ್ವನಿಯಾಗಿ ದೇಶದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಹಸಿರು ಕ್ರಾಂತಿಯ ಹರಿಕಾರರಾಗಿದ್ದು, ಅವರ ಆದರ್ಶಗಳು ಯುವಜನತೆಗೆ ಪ್ರೇರಣೆಯಾಗಿವೆ ಎಂದರು.
ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಹೆಗ್ಡಳ್ ಪರಶುರಾಮ್ ಮಾತನಾಡಿ, ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಪರ ಹೋರಾಡಿದ ಮಹಾನ್ ನಾಯಕನ ಹೆಸರನ್ನು ವೃತ್ತಕ್ಕೆ ನಾಮಕರಣ ಮಾಡಿರುವುದು ಸಮುದಾಯಕ್ಕೆ ಹೆಮ್ಮೆಯ ಸಂಗತಿ ಎಂದರು.
ಪ್ರಮುಖರಾದ ಕೆಚ್ಚಿನಬಂಡಿ ದುರುಗಪ್ಪ, ವಕೀಲ ನವೀನ್, ಮಹೇಂದ್ರ, ಯಡ್ರಮ್ಮಹಳ್ಳಿ ಮರಿಯಪ್ಪ, ರಾಮೇಶ್ ಪೂಜಾರಿ, ನಾಗರಾಜ್ ಕಲ್ಲಹಳ್ಳಿ, ದುರುಗಪ್ಪ ಕಿತ್ನೂರು, ಚಿಂತ್ರಪಳ್ಳಿ ರಮೇಶ್, ದಶಮಾಪುರ ಮರಿಯಪ್ಪ, ಹರೆಗೊಂಡನಹಳ್ಳಿ ದುರುಗಪ್ಪ, ಕೋಟೆಪ್ಪ, ಕೆಂಚಪ್ಪ, ಬಸವರಾಜ್, ಗೊಣೆಪ್ಪ, ಶಿವಮೂರ್ತಿ, ಪ್ರತಾಪ್, ಕೊಟ್ರೇಶ, ಪೂಜಾರ್ ಸಿದ್ದಪ್ಪ, ಸುಬ್ರಹ್ಮಣ್ಯ ಇನ್ನಿತರಿದ್ದರು.