ಚಿತ್ತಾಪುರದಲ್ಲಿ ಭಾನುವಾರ ಆಯೋಜಿಸಿದ್ದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್​ ಜಯಂತ್ಯುತ್ಸವ ಮೆರವಣಿಗೆಗೆ ತಹಸೀಲ್ದಾರ್​ ನಾಗಯ್ಯ ಹಿರೇಮಠ ಚಾಲನೆ ನೀಡಿದರು. ಭೀಮಣ್ಣ ಸಾಲಿ, ರಾಜಣ್ಣ ಕರದಾಳ, ಮರೆಪ್ಪ ಸಂದ್ಯಾನ್​, ಗೋಪಾಲರಾವ್​ ತೆಲಂಗ ಇದ್ದರು.  
ರಾಜ್ಯ

ದೇಶಕ್ಕೆ ಬಾಬೂಜಿ ಕೊಡುಗೆ ಅವಿಸ್ಮರಣೀಯ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್​ ನಾಗಯ್ಯ ಹಿರೇಮಠ ಬಣ್ಣನೆ
  • ಚಿತ್ತಾಪುರದಲ್ಲಿ ಡಾ.ಬಾಬು ಜಗಜೀವನರಾಮ್​ ಜಯಂತಿ
ಚಿತ್ತಾಪುರ: ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್​ ಅವರು ಸ್ವತಂತ್ರ ಭಾರತ ನಿರ್ಮಾಣದಲ್ಲಿ ವಿಶೇಷವಾಗಿ ಕೃಷಿ ಮತ್ತು ರಕ್ಷಣಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾಗಿದೆ ಎಂದು ತಹಸೀಲ್ದಾರ್​ ನಾಗಯ್ಯ ಹಿರೇಮಠ ಹೇಳಿದರು.
ಪ್ರಜಾಸೌಧ ಆವರಣದಲ್ಲಿ ತಾಲೂಕು ಆಡಳಿತ ಭಾನುವಾರ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್​ ಅವರ 119ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಸಚಿವರಾಗಿ ಆಧುನಿಕ ಕೃಷಿ ಪದ್ಧತಿಗಳನ್ನು ಉತ್ತೇಜಿಸಿ ದೇಶದಲ್ಲಿ ಆಹಾರದ ಕೊರತೆ ನೀಗಿಸಿ ಸ್ವಾವಲಂಬನೆ ಸಾಧಿಸುವಂತೆ ಮಾಡಿದರು. ರಕ್ಷಣಾ ಸಚಿವರಾಗಿ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಯಶಸ್ವಿ ನಾಯಕತ್ವದೊಂದಿಗೆ ಬಾಂಗ್ಲಾದೇಶ ಸೃಷ್ಟಿಗೆ ಕಾರಣರಾದರು ಎಂದರು.
ಸಮಾಜ ಸೇವಕ ಜಿ.ಗೋಪಾಲರಾವ್​ ತೆಲಂಗ ಉಪನ್ಯಾಸ ನೀಡಿದರು. ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಭೀಮಣ್ಣ ಸಾಲಿ, ಬಾಬು ಜಗಜೀವನರಾಮ್​ ಸಮಿತಿ ಅಧ್ಯಕ್ಷ ರಾಜಣ್ಣ ಕರದಾಳ ಮಾತನಾಡಿದರು.
ತಾಪಂ ಇಒ ಮಹ್ಮದ್​ ಅಕ್ರಂ ಪಾಷಾ, ಪುರಸಭೆ ಸಿಒ ಭಾರತಿ ದಂಡೋತಿ, ಸಮಾಜ ಕಲ್ಯಾಣಾಧಿಕಾರಿ ಚೇತನ್​ ಗುರಿಕಾರ, ಪಿಎಸ್​ಐ ಮಂಜುನಾಥ ರೆಡ್ಡಿ, ಪಿಡಬ್ಲುಡಿ ಎಇಇ ಮಹ್ಮದ್​ ಇಸ್ಮಾಯೀಲ್​, ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಶರಣಪ್ಪ ಮಂಠಾಳೆ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮನಳ್ಳಿ, ಪುರಸಭೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ನಗರ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ದೀಪಕ ಹೊಸ್ಸುರಕರ್​, ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್​, ಜಯಂತಿ ಸಮಿತಿ ಅಧ್ಯಕ್ಷ ಮರೆಪ್ಪ ಸಂದ್ಯಾನ್​, ನ್ಯಾಯವಾದಿ ಎಸ್​.ಎಂ. ಹೋಳಿ, ಪ್ರಮುಖರಾದ ತುಕಾರಾಮ ನಾಯಕ, ಮಹಾಂತೇಶ ಬೊಮ್ಮನಳ್ಳಿ, ರಮೇಶ ಕಟ್ಟಿ, ಸಂಜಯ ಬುಳಕರ್​, ಬಸವರಾಜ ಕೆ.ಬಿ., ನಾಗೇಶ ಹಲಗಿ, ಮಾರುತಿ, ಪರಶುರಾಮ ರಾಜಾಪುರ, ಗೌರಿಶಂಕರ ಕಾಳಗಿ ಇತರರಿದ್ದರು. ಡಾ.ಶಂಕರ ಕಣ್ಣಿ ನಿರೂಪಣೆ ಮಾಡಿ ವಂದಿಸಿದರು. ನಂತರ ಪ್ರಮುಖ ಬೀದಿಗಳಲ್ಲಿ ಬಾಬೂಜಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.