ಬಾಬು ಬಸಪ್ಪ ಕುಡಸೋಮಣ್ಣವರ 
ರಾಜ್ಯ

ಬಾಬು ಅಧ್ಯಕ್ಷ, ಮಲ್ಲಿಕಾರ್ಜುನ ಉಪಾಧ್ಯಕ್ಷ

ಬೈಲಹೊಂಗಲ: ನಗರದ ಶ್ರೀ ವರ್ತಿಸಿದ್ಧ ಬಸವೇಶ್ವರ ಅರ್ಬನ್​ ಕೋ&ಆಪ್​ ಕ್ರೆಡಿಟ್​ ಸೊಸೈಟಿ ಅಧ್ಯರಾಗಿ ಬಾಬು ಬಸಪ್ಪ ಕುಡಸೋಮಣ್ಣವರ ಹಾಗೂ ಉಪಾಧ್ಯರಾಗಿ ಮಲ್ಲಿಕಾರ್ಜುನ ಗಂಗಪ್ಪ ಬೋಳಣ್ಣವರ ಬುಧವಾರ ಅವಿರೋಧ ಆಯ್ಕೆಯಾಗಿದ್ದಾರೆ. ನೂತನ ಅಧ್ಯ ಬಾಬು ಕುಡಸೋಮಣ್ಣವರ ಮಾತನಾಡಿ, ಸಂಸ್ಥೆ ಹಿಂದಿನ ಅಧ್ಯ ದಿ.ಬಿ.ಎಂ.ಕುಡಸೋಮಣ್ಣವರ, ಮಾಜಿ ಅಧ್ಯ ದಿ.ಗಂಗಪ್ಪ ಬೋಳನ್ನವರ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಹಾಗೂ ಎಲ್ಲ ನಿರ್ದೇಶಕರ ಸಹಕಾರದೊಂದಿಗೆ ಸಂಸ್ಥೆ ಪ್ರಗತಿ ಪಥದತ್ತ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.ನಿರ್ದೇಶಕರಾಗಿ ಶಾಸಕ ಬಾಬಾಸಾಹೇಬ ಪಾಟೀಲ, ದುಂಡಪ್ಪ ತುರಮರಿ, ಸಣ್ಣಬಸಪ್ಪ ಕುಡಸೋಮಣ್ಣವರ, ಮಲ್ಲಪ್ಪ ಕುಡಸೋಮಣ್ಣವರ, ಮಲ್ಲಿಕಾರ್ಜುನ ಮೊರಬದ, ಮಹಾರುದ್ರಪ್ಪ ಸಂಪಗಾವಿ, ರುದ್ರಪ್ಪ ಕತ್ತಿ, ಲಕ್ಷ$್ಮಣ ಸೋಮನಟ್ಟಿ, ವೀರಭದ್ರಯ್ಯ ಸಾಲಿಮಠ, ಗಂಗವ್ವ ಬೆಟಗೇರಿ, ಭುವನೇಶ್ವರಿ ಚಿಟ್ಟಿ, ಅಬ್ದುಲ್​ರೆಹಮಾನ್​ ನಂದಗಡ, ರಾಜೇಶ ಬಡಿಗೇರ, ಗಂಗಪ್ಪ ಭರಮಣ್ಣವರ, ದುರ್ಗಪ್ಪ ತಳವಾರ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಆರ್​.ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯದರ್ಶಿ ಮಲ್ಲಿಕಾರ್ಜುನ ಗೌರಿ ಹಾಗೂ ಸಿಬ್ಬಂದಿ ಇದ್ದರು.