ಸುರಪುರದಲ್ಲಿ ಗುರುವಾರ ಅಯ್ಯಪ್ಪ ಸ್ವಾಮಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಭಿತ್ತಿಪತ್ರವನ್ನು ಅಯ್ಯಪ್ಪ ಸ್ವಾಮಿ ಟ್ರಸ್ಟ್ನ ಗೌರವಾಧ್ಯಕ್ಷ ರಾಜಾ ಹನುಮಪ್ಪ ನಾಯಕ ಬಿಡುಗಡೆ ಮಾಡಿದರು. ಅಧ್ಯಕ್ಷ ಮಂಜುನಾಥ ನಾಯಕ ಭೈರಿಮಡ್ಡಿ, ಪ್ರಕಾಶ ಗುರುಸ್ವಾಮಿ ಮದ್ನೂರು, ಉದಯಕುಮಾರ ಇತರರಿದ್ದರು.
ಸುರಪುರ: ನಗರದ ಜ್ಯೋತಿ ಸ್ವರೂಪ ಅಯ್ಯಪ್ಪ ಸ್ವಾಮಿ ಟ್ರಸ್ಟ್ನಿಂದ ಮೂರ್ತಿ ಪ್ರತಿಷ್ಠಾಪನೆ, ದೇವಾಲಯ ಲೋಕಾರ್ಪಣೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಸೆ.೧೬ರಿಂದ ೧೮ರವರೆಗೆ ಜರುಗಲಿದೆ ಎಂದು ಟ್ರಸ್ಟ್ನ ಗೌರವಾಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ) ಹೇಳಿದರು.
ಈ ಕುರಿತು ಗುರುವಾರ ಭಿತ್ತಿಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಧಾರ್ಮಿಕ ಕಾರ್ಯಕ್ರಮಗಳು ಜ್ಯೋತಿ ಸ್ವರೂಪ ಅಯ್ಯಪ್ಪ ಸ್ವಾಮಿ ದೇವಾಲಯದ ನಡೆಯಲಿದ್ದು, ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಹೋಮ-ಹವನ, ವಿಶೇಷ ಪೂ ಹಾಗೂ ಧಾರ್ಮಿಕ ವಿದ-ವಿಧಾನಗಳು ನೆರವೇರಲಿವೆ ಎಂದರು.
ಸೆ.೧೬ರಂದು ಬೆಳಗ್ಗೆ ೯ಕ್ಕೆ ವೇಣುಗೋಪಾಲಸ್ವಾಮಿ ದೇವಾಲಯದಿಂದ ಗಾಂಧಿ ಚೌಕ್ ಮಾರ್ಗವಾಗಿ ಅಯ್ಯಪ್ಪಸ್ವಾಮಿ ದೇವಸ್ಥಾನದವರೆಗೆ ಕುಂಭಕಳಶದೊಂದಿಗೆ ಮೂರ್ತಿ ಮೆರವಣಿಗೆಯ ನೇತೃತ್ವವನ್ನು ವಿಷ್ಣು ಪ್ರಕಾಶ ಜೋಷಿ ನಾಗರಾಳ ವಹಿಸಲಿದ್ದಾರೆ. ಸಂಜೆ ೬ಕ್ಕೆ ಗಣಪತಿ ಪೂಜೆ, ವಾಸ್ತು ಹೋಮ ಹಾಗೂ ಕಳಶಾಭಿಷೇಕ. ಸೆ.೧೭ ಮತ್ತು ೧೮ರಂದು ಮಹಾ ಗಣಪತಿ ಹೋಮ, ಅಮವಾಸ ಹೋಮ, ಬಿಂಬ ಪ್ರತಿಷ್ಠಾಪನೆ, ಅಷ್ಟಬಂಧ ಕ್ರಿಯೆ ಹಾಗೂ ಪ್ರಧಾನ ಕುಂಭಾಭಿಷೇಕ ಕಾರ್ಯಕ್ರಮಗಳು ಕೇರಳದ ಕಾಸರಗೋಡಿನ ಬ್ರಹ್ಮಶ್ರೀ ತಂತ್ರರತ್ನ ಶ್ರೀ ರಘುಪತಿ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಸೆ.೧೮ರಂದು ಬೆಳಗ್ಗೆ ೯ರಿಂದ ಜ್ಯೋತಿ ಸ್ವರೂಪ ಅಯ್ಯಪ್ಪ ಸ್ವಾಮಿ ಪ್ರವಚನ ಹಾಗೂ ಭಕ್ತಿ ಸುಧೆ ಹಾಡುಗಳ ಕಾರ್ಯಕ್ರಮ. ನಂತರ ಬೆಳಗ್ಗೆ ೧೧ಕ್ಕೆ ಧಾರ್ಮಿಕ ಸಭೆ. ಈ ಸಭೆಯಲ್ಲಿ ವಿವಿಧ ಮಠಾಧಿಶರು ಹಾಗೂ ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ.
ಅರಸು ಮನೆತನ ರಾಜಾ ಕೃಷ್ಣಪ್ಪ ನಾಯಕ ಅಧ್ಯಕ್ಷತೆ ವಹಿಸುವರು. ಶಾಸಕ ರಾಜಾ ವೇಣುಗೋಪಾಲ ನಾಯಕ ಹಾಗೂ ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ದೀಪ ಬೆಳಗಿಸಲಿದ್ದಾರೆ. ಸಂಜೆ ದೀಪಾರಾಧನೆ ಮತ್ತು ಹರಿವರಾಸನ ಸೇವೆ ನಡೆಯಲಿದೆ ಎಂದರು.
ಈ ವೇಳೆ ಟ್ರಸ್ಟ್ ಅಧ್ಯಕ್ಷ ಮಂಜುನಾಥ ನಾಯಕ ಭೈರಿಮಡ್ಡಿ, ಪ್ರಕಾಶ ಗುರುಸ್ವಾಮಿ ಮದ್ನೂರು, ಉದಯಕುಮಾರ ಕಟ್ಟಿಗಿ ಅಡ್ಯ, ಪಾರಪ್ಪ ಗುತ್ತೇದಾರ್, ರಾಘವೇಂದ್ರ ಪ್ಯಾಸಲರ್, ಚಂದ್ರಶೇಖರ ಕೊಡೇಕಲ್, ಬಾಲಯ್ಯ ಗುತ್ತೇದಾರ್, ನಂದಿಸ್ವಾಮಿ ಹಿರೇಮಠ ಕುಂಬಾರಪೇಟೆ, ಆನಂದ ಜೇವರ್ಗಿ, ರಾಘವೇಂದ್ರ ಚವಲಕರ್, ದೇವ ಹವಲ್ದಾರ್, ಭೀಮರಾಯ ಕಳ್ಳಿಮನಿ ಇತರರಿದ್ದರು.