ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಕಜೆ ಆಯುರ್ವೇದಿಕ್ಚಾರಿಟೇಬಲ್ ಫೌಂಡೇಶನ್ ವತಿಯಿಂದಕೇಂದ್ರ ಆಯುಷ್ ಇಲಾಖೆ ಸಹಯೋಗದೊಂದಿಗೆಡಿ.25 ರಿಂದ28 ವರೆಗೆಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವದ್ವಿತೀಯ ಆಯುರ್ವೇದ ಸಮ್ಮೇಳನದಜನಜಾಗೃತಿಗಾಗಿ ಬೆಂಗಳೂರಿನಗಿರಿನಗರದಿಂದ ಆಯುರ್ವೇದ ಬೈಕ್ಜಾಥಾ ನಡೆಯಿತು.
ಬೈಕ್ಜಾಥಾವನ್ನು ಉದ್ಘಾಟಿಸಿ ಮಾತನಾಡಿದಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ,ಆಟ-ಪಾಠಹಾಗೂ ಚಿಂತನೆ ಸರಿಯಾದಾಗ ಆರೋಗ್ಯಪೂರ್ಣಜೀವನ ನಮ್ಮದಾಗುತ್ತದೆ.ಈ ಹಿನ್ನೆಲೆಯಲ್ಲಿಭಾರತೀಯರದ್ದು ವಸುಧೈವ ಕುಟುಂಬಕಂಎಂಬ ವಿಶ್ವಭ್ರಾತೃತ್ವದ ಚಿಂತನೆಯಾಗಿದೆ.ಕಾಯಿಲೆಗಳುರಸ್ತೆಯ ಹಂಪ್ ಇದ್ದಂತೆ.ನಾವು ವೇಗವಾದಜೀವನಶೈಲಿಯನ್ನು ಅಳವಡಿಸಿಕೊಂಡಾಗಕಾಯಿಲೆಗಳು ಬರುತ್ತವೆ ಎಂದುಅಭಿಪ್ರಾಯಪಟ್ಟರು.
ಜಾಥಾದಲ್ಲಿಬಸವನಗುಡಿಯ ಶಾಸಕ ಎಲ್.ಎ.ರವಿಸುಬ್ರಮಣ್ಯ,ನಟ ಅಜಯ್ ರಾವ್ಮತ್ತಿತರರು ಪಾಲ್ಗೊಂಡಿದ್ದರು.ಜಾಗೃತಿ ಮೂಡಿಸುವಭಾಗವಾಗಿ ಇಂದು (ಭಾನುವಾರ)ಆಯುರ್ವೇದವಾಕಾಥಾನ್ ಹಾಗೂ ವಿಂಟೇಜ್ ಕಾರ್ರ‌್ಯಾಲಿ ಆಯೋಜಿಸಲಾಗಿದೆ.
ಆಯುರ್ವೇದದ ಮಹತ್ವವನ್ನು ಜನತೆಯ ಮುಂದಿಡಲು ಸಮ್ಮೇಳನವನ್ನು ಸಂಘಟಿಸಲಾಗಿದೆ. ಆಯುರ್ವೇದ ಅನುಭವ ಕೇಂದ್ರಗಳು, ಆಯುರ್ವೇದ ಆಹಾರ ಪ್ರದರ್ಶಿನಿ, ಆಯುರ್ವೇದ ಪಾಕೋತ್ಸವ, ಧನ್ವಂತರಿ ಮಹಾಯಜ್ಞ, ಔಷಧೀಯ ಸಸ್ಯಗಳ ಉಚಿತ ವಿತರಣೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳು ಸಮ್ಮೇಳನದಲ್ಲಿ ಇರಲಿವೆ. 3 ರಿಂದ 4 ಲಕ್ಷ ಜನ ಸೇರುವ ನಿರೀಕ್ಷೆ ಇದೆ.