ಸೇಡಂನಲ್ಲಿ ಕಾನೂನು ಸೇವಾ ಸಮಿತಿ ಆಯೋಜಿಸಿದ್ದ ಮಾನವ ಕಳ್ಳಸಾಗಣೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್​ ನ್ಯಾಯಾಧೀಶ ಬಸವರಾಜ ತಳವಾರ ಮಾತನಾಡಿದರು. ಕಿರಿಯ ಸಿವಿಲ್​ ನ್ಯಾಯಾಧೀಶ ಬಾಲು ಜಾಧವ್​, ೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರತಿ, ವಕೀಲರ ಸಂದ ತಾಲೂಕು ಅಧ್ಯಕ್ಷ ಶರಣಬಸಪ್ಪ ಹಾಗರಗಿ ಇತರರಿದ್ದರು.  
ರಾಜ್ಯ

ಸಾಮಾಜಿಕ ಮಾಧ್ಯಮ ಬಳಕೆ ಜಾಗೃತಿ ಅವಶ್ಯ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಸಿವಿಲ್​ ನ್ಯಾಯಾಧೀಶ ಬಸವರಾಜ ಅನಿಸಿಕೆ
  • ಸೇಡಂನಲ್ಲಿ ಕಳ್ಳಸಾಗಣೆ ವಿರೋಧಿ ದಿನ
ಸೇಡಂ: ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮವನ್ನೆ ಬಂಡವಾಳ ಮಾಡಿಕೊಂಡಿರುವ ಕೆಲವರು ದುರುಪಯೋಗ ಹೆಚ್ಚು ಮಾಡುತ್ತಿದ್ದಾರೆ. ಯುವ ಸಮುದಾಯ ಅತ್ಯಂತ ಜಾಗರೂಕತೆಯಿಂದ ಸಾಮಾಜಿಕ ಜಾಲತಾಣ ಬಳಕೆ ಮಾಡಬೇಕು ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ ಬಸವರಾಜ ತಳವಾರ ಸಲಹೆ ನೀಡಿದರು.
ಸರ್ಕಾರಿ ಕನ್ಯಾಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವಮಾನವ ಕಳ್ಳಸಾಗಣೆ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲವು ಮೊಬೈಲ್​ ಆ್ಯಪ್​ಗಳನ್ನು ಬಳಸುವಾಗ ಹಲವರು ಕಾಲ್​ ಮಾಡಿ ನಿಮ್ಮ ಮೊಬೈಲ್​ಗೆ ಒಟಿಪಿ ಬಂದಿದೆ ಎಂದು ಹೇಳಿ ಎನ್ನುತ್ತಾರೆ. ನಿಮ್ಮ ಮಾಹಿತಿ ಪಡೆದು ಮೋಸ ಮಾಡುವ ಸಂದರ್ಭಗಳಿರುತ್ತವೆ. ಇಂತಹ ಪ್ರಕರಣಗಳು ಅನೇಕ ಕಡೆಗಳಲ್ಲಿ ನಡೆಯುತ್ತಿರುವುದು ವರದಿಯಾಗುತ್ತಿದ್ದು, ಅತ್ಯಂತ ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ಕಿರಿಯ ಸಿವಿಲ್​ ನ್ಯಾಯಾಧೀಶ ಬಾಲು ಜಾಧವ್​ ಮಾತನಾಡಿ, ಯುವಕರು ತಂತ್ರಜ್ಞಾನದ ಬಳಕೆಯ ಜತೆಗೆ ಓದಿನತ್ತ ಹೆಚ್ಚಿನ ಗಮನ ಹರಿಸಬೇಕು. ನಿರಂತರ ಓದು ಒಬ್ಬ ವ್ಯಕ್ತಿಯನ್ನು ಮೇಧಾವಿಯನ್ನಾಗಿಸುತ್ತದೆ. ಜತೆಗೆ ತಂತ್ರಜ್ಞಾನವನ್ನು ಸಮಪರ್ಕವಾಗಿ ಬಳಸಬೇಕು ಎಂದು ಸಲಹೆ ನೀಡಿದರು. ವಕೀಲ ನಾಗೇಶ ಮಿಟ್ಟಿ ಉಪನ್ಯಾಸ ನೀಡಿದರು.
ವಕೀಲರ ಸಂದ ತಾಲೂಕು ಅಧ್ಯಕ್ಷ ಶರಣಬಸ್ಸಪ್ಪ ಹಾಗರಗಿ, ೇತ್ರ ಶಿಕ್ಷಣಾಧಿಕಾರಿ ಮಾರುತಿ ಹುಜರಾತಿ, ಮುಖ್ಯಶಿಕ್ಷಕಿ ಶಮೀಮ ಬಾನು, ಪ್ರಮುಖರಾದ ಹೇಮಾ, ಭೀಮರಾವ ದಂಡೋತಿ, ಶಾಂತಕುಮಾರ ಹಿರೇಮಠ, ಪರಶುಮರಾರೆಡ್ಡಿ, ಜಗದೇವಪ್ಪ ಭೀಮ್ನಳ್ಳಿ, ಪ್ರೀಯಾಂಕ ರಾಠೋಡ್​ ಇತರರಿದ್ದರು.