ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಆನೇಕಲ್​ ತಾಲೂಕಿನ ದೊಮ್ಮಸಂದ್ರದ ಧರ್ಮಸಾಗರ ಎಂ.ಮುದ್ದಣ್ಣ ಮುನಿಮಲ್ಲಮ್ಮ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಸನ್ಮಾನಿಸಲಾಯಿತು. ಆಡಳಿತ ಮಂಡಳಿಯ ಉಪಾಧ್ಯಕ್ಷ ಅಶ್ವತ್ಥ ನಾರಾಯಣರೆಡ್ಡಿ, ಹಿರಿಯ ನಿರ್ದೇಶಕರಾದ ಡಿ.ಸಿ.ಮನೋಹರ್​, ಜಗನ್ನಾಥ್​, ಕೃಷ್ಣಪ್ಪ, ವೆಂಕಟಸ್ವಾಮಿ ಇದ್ದರು.  
ರಾಜ್ಯ

ಹಕ್ಕು, ಕರ್ತವ್ಯಗಳ ಅರಿವು ಅಗತ್ಯ / SARJAPUR

ಸರ್ಜಾಪುರ : ವಿದ್ಯಾರ್ಥಿಗಳು ಕೇವಲ ಪುಸ್ತಕಗಳಿಗೆ ಸೀಮಿತವಾಗದೆ ಸಂವಿಧಾನ, ಹಕ್ಕುಗಳು ಮತ್ತು ಕರ್ತವ್ಯಗಳ ಅರಿವು ಹೊಂದಬೇಕು. ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಅಪರಾಧ, ಅನ್ಯಾಯಗಳ ವಿರುದ್ಧ ಜಾಗೃತಿ ಮೂಡಿಸಲು ಅಂಬೇಡ್ಕರ್​ ಚಿಂತನೆಗಳು ಅಗತ್ಯ ಎಂದು ಧರ್ಮಸಾಗರ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಶಾಂತಕುಮಾರ್​ ಹೇಳಿದರು.
ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ 31 ವಿದ್ಯಾರ್ಥಿಗಳನ್ನು ಆನೇಕಲ್​ ತಾಲೂಕಿನ ದೊಮ್ಮಸಂದ್ರದ ಧರ್ಮಸಾಗರ ಎಂ.ಮುದ್ದಣ್ಣ ಮುನಿಮಲ್ಲಮ್ಮ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಅಂಬೇಡ್ಕರ್​ ಜಯಂತಿಯಲ್ಲಿ ಸನ್ಮಾನಿಸಿ ಮಾತನಾಡಿದರು.
ಸರ್ಕಾರಿ ರಜೆ ದಿನಗಳಲ್ಲಿ ಕೇವಲ ಆಚರಣೆಗೆ ಸೀಮಿತವಾಗದೆ, ಅವರ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡಬೇಕಿದೆ. ದೇಶದ ನಾಗರಿಕರು ಕಾನೂನು ಮತ್ತು ಸಂವಿಧಾನ ತಿಳಿದುಕೊಂಡರೆ ಮಾತ್ರ ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯ ಸ್ಥಾಪನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಯ ಖಜಾಂಚಿ ಡಿ.ವಿ.ಧನರಾಜು ಮಾತನಾಡಿ, ಹಿರಿಯರು ಒಂದೊಂದು ರೂಪಾಯಿ ಸಂಗ್ರಹಿಸಿ ಈ ಶಾಲೆಯನ್ನು ಕಟ್ಟಿದರು. ಇಂದು ಈ ಸಂಸ್ಥೆ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ದೀಪವಾಗಿದೆ ಎಂದು ಹೇಳಿದರು.
ಹಿರಿಯ ವಿದ್ಯಾರ್ಥಿ ಚಾರಿಟೇಬಲ್​ ಟ್ರಸ್ಟ್​ ಅಧ್ಯಕ್ಷ ಕೇಶವ ಬಾಬುರೆಡ್ಡಿ, ಪ್ರಾಂಶುಪಾಲ ನರೇಶ್​ ರಾಜು, ಮುಖ್ಯ ಶಿಕ್ಷಕರಾದ ಶ್ರೀವಿದ್ಯಾ, ಈಶ್ವರಪ್ಪ ಇತರರು ಇದ್ದರು.