ಇಂಡಿ ನಗರದ ಕಾಳಪ್ಪ ರೂಗಿ ಅವರ ಹೊಲದಲ್ಲಿ ನಡೆದ ಕೀಟನಾಶಕಗಳಿಂದ ರೈತರ ಆರೋಗ್ಯದ ಮೇಲೆ ಆಗುವ ಪರಿಣಾಮ ಕುರಿತು ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ಜಾಗೃತಿ ಮೂಡಿಸಿದರು. ಮಹಾದೇವಪ್ಪ ಏವೂರ, ಮಹಾಂತೇಶ ಶೆಟ್ಟೆನ್ನವರ, ಕಾಳಪ್ಪ ರೂಗಿ, ಮಾಳಪ್ಪ ಗುಡ್ಲ, ಬೀರಪ್ಪ ರೂಗಿ, ನಿಂಗಪ್ಪ ಮಾವಿನಹಳ್ಳಿ, ಚಂದ್ರಕಾಂತ ಹಳಗುಣಕಿ ಇತರರಿದ್ದರು. 
ರಾಜ್ಯ

ಬೆಳೆಗಳಿಗೆ ರಾಸಾಯನಿಕ ಬಳಕೆ ಜಾಗೃತಿ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ಸಲಹೆ
  • ರೈತರ ರಕ್ತದಲ್ಲಿ ಕೀಟನಾಶಕ ಪತ್ತೆ

ಇಂಡಿ: ಬೆಳೆಗಳಿಗೆ ರಾಸಾಯನಿಕ ಕೀಟನಾಶಕ ಸಿಂಪಡಿಸುವ ರೈತರ ರಕ್ತದಲ್ಲಿ ಕೀಟನಾಶಕ ಅಂಶಗಳು ಪತ್ತೆಯಾಗಿರುವುದಾಗಿ ಕೆಎಂಸಿಆರ್‌ಐ ವೈದ್ಯರು ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ ಎಂದು ಕೃಷಿ ಉಪ ನಿರ್ದೇಶಕ ಚಂದ್ರಕಾಂತ ಪವಾರ ತಿಳಿಸಿದರು.

ನಗರದ ಕಾಳಪ್ಪ ರೂಗಿ ಅವರ ಹೊಲದಲ್ಲಿ ಸೋಮವಾರ ನಡೆದ ಕೀಟನಾಶಕಗಳ ಕುರಿತು ರೈತರ ಆರೋಗ್ಯದ ಮೇಲೆ ಆಗುವ ಪರಿಣಾಮ ಕುರಿತು ಮಾತನಾಡಿದರು.
ಆಸ್ಪತ್ರೆಯ ಬಹು ಶಾಸ್ತೀಯ ಸಂಶೋಧನಾ ಘಟಕದ ನೋಡಲ್ ಅಧಿಕಾರಿ, ವಿಜ್ಞಾನಿಗಳು ಮತ್ತು ಪ್ರಯೋಗಾಲಯದ ತಂತ್ರಜ್ಞರು ಇತ್ತೀಚೆಗೆ ಕೀಟನಾಶಕ ಸಿಂಪಡಿಸುವ ತಾಲೂಕಿನ 10 ರೈತರ ರಕ್ತದ ಮಾದರಿ ಸಂಗ್ರಹಿಸಿ ಸಂಶೋಧನೆ ನಡೆಸಿದ್ದರು. ಕೀಟನಾಶಕ ಸಿಂಪಡಿಸಿದ 15 ದಿನಗಳ ನಂತರವೂ ರೈತರ ರಕ್ತದಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾದವು ಎಂದರು.
ಕೀಟನಾಶಕ ಸಿಂಪಡಣೆ ವೇಳೆ ರೈತರು ಹೆಚ್ಚು ಮುಂಜಾಗ್ರತೆ ವಹಿಸುವುದಿಲ್ಲ. ಅದರಿಂದ ಅದರೊಳಗಿರುವ ವಿಷಕಾರಿ ರಾಸಾಯನಿಕ ಅಂಶಗಳು ಉಸಿರಾಟ ಮತ್ತು ಚರ್ಮದ ಮೂಲಕ ಅವರ ದೇಹವನ್ನು ಸೇರುತ್ತದೆ. ಹೃದಯ, ಕಿಡ್ನಿ, ನರ ದೌರ್ಬಲ್ಯದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಧುಮೇಹ ಮೆರೆವಿನ ಕಾಯಿಲೆಯೂ ಕಾಡುತ್ತದೆ ಎಂದು ಸಂಶೋಧನಾ ಘಟಕ ತಿಳಿಸಿದೆ. ಶೀಘ್ರವೇ ಕೃಷಿ ಇಲಾಖೆ ಜತೆ ಸಭೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ, ಕೀಟನಾಶಕ ಸಿಂಪಡಣೆ ವೇಳೆ ಕೈ ಗವಸು ಹಾಕಿ ಮುಖಕ್ಕೆ ಮಾಸ್ಕ್ ಧರಿಸಬೇಕು, ದೇಹದ ಮೇಲೆ ರಾಸಾಯನಿಕ ಅಂಶ ಬೀಳದಂತೆ ಎಚ್ಚರ ವಹಿಸಬೇಕು ಎಂದರು.

ಇತರರಿದ್ದರು.