ಅಥಣಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಏಡ್ಸ್ ದಿನದ ಅಂಗವಾಗಿ ಜನಜಾಗೃತಿ ಜಾಥಾ ಜರುಗಿತು. ಇ.ಎಸ್.ಈರಣ್ಣ, ನಾಮದೇವ ಸಾಲಮಂಟಪಿ, ರವಿಕುಮಾರ, ಓಂಕಾರಮೂರ್ತಿ, ರವೀಂದ್ರ ಹಾವರಗಿ, ಆಶಾ ಗಾವಡೆ ಇತರರಿದ್ದರು.
ಅಥಣಿ: ಆಧುನಿಕ ಜೀವನಶೈಲಿಯಿಂದ ಯುವ ಜನತೆ ಏಡ್ಸ್ನಂತಹ ಮಹಾಮಾರಿಗೆ ಬಲಿಯಾಗುತ್ತಿರುವುದು ಕಳವಳಕಾರಿಯಾಗಿದ್ದು, ಇದನ್ನು ತಡೆಗಟ್ಟಲು ಯುವಜನರಲ್ಲಿ ಅರಿವು ಮೂಡಿಸುವುದು ಅವಶ್ಯ ಎಂದು ಅಥಣಿಯ 11ನೇ ಹೆಚ್ಚುವರಿ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶ ಇ.ಎಸ್.ಈರಣ್ಣ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಇಲಾಖೆ, ಕಾನೂನು ಸೇವಾ ಸಮಿತಿ, ರೋಟರಿ ಸಂಸ್ಥೆ ಸಹಯೋಗದಲ್ಲಿ ಬುಧವಾರ ವಿಶ್ವ ಏಡ್ಸ್ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ನಾಮದೇವ ಸಾಲಮಂಟಪಿ ಮಾತನಾಡಿದರು. ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರವಿಕುಮಾರ, ಪ್ರಧಾನ ಸಿವಿಲ್ ಹಾಗೂ ಜೆಎಂಎ್ಸಿ ನ್ಯಾಯಾಧೀಶ ಓಂಕಾರಮೂರ್ತಿ, ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎ್ಸಿ ನ್ಯಾಯಾಧೀಶ ರವೀಂದ್ರ ಹಾವರಗಿ, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸುನಿತಾ ಪ್ರಬಣ್ಣವರ, ರೋಟರಿ ಸಂಸ್ಥಾಪಕ ಅಧ್ಯ ಗಜಾನನ ಮಂಗಸೂಳಿ, ಸಿಡಿಪಿಒ ಮಂಜುನಾಥ ಸೌಂದಲಗೆಕರ, ರೋಟರಿ ಅಧ್ಯ ಸಚಿನ ದೇಸಾಯಿ ಇತರರಿದ್ದರು.