ರಾಷ್ಟಿ$ಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ. ವಿ. ಪ್ರಶಾಂತ ಮತ್ತು ರಾಜ್ಯದ ವಿವಿಧ ಕಾಲೇಜುಗಳ ಎನ್ನೆಸ್ಸೆಸ್ಸ್ವಯಂಸೇವಕರ ತಂಡ ನವದೆಹಲಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ವೇಳೆ ಹಿರಿಯ ಗಾಂಧಿವಾದಿ ಡಾ. ಎಸ್.ಎನ್. ಸುಬ್ಬರಾವ್ ಅವರ 97ನೇ ಜನ್ಮ ದಿನಾಚರಣೆ ಅಂಗವಾಗಿ ಹೊರತಂದ ಸನ್ಮಾನ್ ಸ್ಮರಣ ಸಂಚಿಕೆಯನ್ನು ಸಚಿವರಿಂದ ಬಿಡುಗಡೆಗೊಳಿಸಲಾಯಿತು.
ವಿಜಯಪುರ : ಭಾರತವು ವಿವಿಧ ಧರ್ಮ, ಜನಾಂಗ, ಸಂಸತಿ ಮತ್ತು ಭಾಷೆಗಳನ್ನು ಒಳಗೊಂಡ ವಿಶಾಲ ರಾಷ್ಟ$ವಾಗಿದ್ದು, ವಿವಿಧತೆಯಲ್ಲಿ ಏಕತೆಯನ್ನು ಕಾಣುವುದೇ ನಮ್ಮ ದೇಶದ ಶಕ್ತಿ ಎಂದು ರಾಷ್ಟಿ$ಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ. ವಿ. ಪ್ರಶಾಂತ ತಿಳಿಸಿದರು.
ನವದೆಹಲಿಯ ರಾಷ್ಟಿ$ಯ ಯುವ ಯೋಜನೆ ವತಿಯಿಂದ ಪಂಜಾಬ್ ರಾಜ್ಯದ ಲೆಹರ್ಗಾದ ಸೀಬಾ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಆರು ದಿನಗಳ ರಾಷ್ಟಿ$ಯ ಭಾವೈಕ್ಯತಾ ಯುವ ಸಾಂಸತಿಕಶಿಬಿರದಲ್ಲಿ ಪಾಲ್ಗೊಂಡು ತವರಿಗೆ ಮರಳಿದ ಎನ್ನೆಸ್ಸೆಸ್ ಸ್ವಯಂಸೇವಕರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸವೋರ್ದಯ ಮಂಡಳಿಯ ಆವರಣದಲ್ಲಿ ಅಭಿನಂದಿಸಿ ಮಾತನಾಡಿದರು.
ನಾಗಾರ್ಜುನ ಕಾಲೇಜಿನ ಹಿರಿಯ ಸ್ವಯಂಸೇವಕ ಪಿ. ಸಚಿನ್ ಶಿವನಾರಾಯಣ ಮಾತನಾಡಿ, ಇಂತಹ ಶಿಬಿರಗಳಿಂದ ವಿವಿಧ ರಾಜ್ಯಗಳ ಯುವಜನರ ಪರಿಚಯ, ಆಹಾರ ಮತ್ತು ಸಂಪ್ರದಾಯಗಳ ವಿನಿಮಯ ಸಾಧ್ಯವಾಗುತ್ತದೆ ಎಂದರು.
ಎಚ್ಡಿಕೆ ಭೇಟಿ : ಇದೇ ವೇಳೆ ಶಿಬಿರದಿಂದ ಹಿಂತಿರುಗಿದ ಯುವಜನತೆಯ ತಂಡವು ನವದೆಹಲಿಯಲ್ಲಿ ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿತು. ಸಚಿವರು ರಾಜ್ಯದ ಶಿಬಿರಾರ್ಥಿಗಳ ಅನುಭವಗಳನ್ನು ಆಲಿಸಿ ಶುಭ ಕೋರಿದರು. ಇದೇ ವೇಳೆ ಹಿರಿಯ ಗಾಂಧಿವಾದಿ ಡಾ.ಎಸ್.ಎನ್. ಸುಬ್ಬರಾವ್ ಅವರ 97ನೇ ಜನ್ಮ ದಿನಾಚರಣೆ ಅಂಗವಾಗಿ ಹೊರತಂದ ಸನ್ಮಾನ್ ಸ್ಮರಣ ಸಂಚಿಕೆಯನ್ನು ಸಚಿವರು ಲೋಕಾರ್ಪಣೆ ಮಾಡಿದರು.ಶಿಬಿರದಲ್ಲಿ ಯೋಗ, ಸ್ವಚ್ಛ ಭಾರತ ಅಭಿಯಾನ, ಸಾಂಸತಿಕವಿನಿಮಯ ಹಾಗೂ ಸ್ವರ್ಣ ಮಂದಿರ, ವಾಘಾ ಗಡಿ, ತಾಜ್ ಮಹಲ್ ಸೇರಿದಂತೆ ವಿವಿಧ ಐತಿಹಾಸಿಕ ಸ್ಥಳಗಳ ಭೇಟಿಯನ್ನು ಆಯೋಜಿಸಲಾಗಿತ್ತು.
ಈ ಶಿಬಿರದಲ್ಲಿ ವಿಜಯಪುರದ ಶ್ರೀ ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನ ಸಿ.ಆರ್.ನಂದೀಶ್, ಡಿ. ವರ್ಷಕ್, ನಾಗಾರ್ಜುನ ಕಾಲೇಜಿನ ಹರ್ಷಿತ್ ಗೌಡ, ಶ್ರೀವತ್ಸ, ಪಿ. ಸಚಿನ್, ರಂಜನ್ ಕುಮಾರ್, ಕುಮಾರ್ ರೆಡ್ಡಿ, ಶ್ರೇಯಸ್ ನಾಯಕ್, ಶಿಡ್ಲಟ್ಟದ ಎನ್. ಕಾರ್ತಿಕ್ ಯಾದವ್, ಎನ್. ಕೇತನ್ ಯಾದವ್, ಪವನ್ ಕುಮಾರ್, ಚಿಂತಾಮಣಿಯ ಅಕ್ಷಯ್, ಚಿಕ್ಕಬಳ್ಳಾಪುರದ ಎನ್.ಎನ್. ಚನ್ನಕೇಶವ ಯಾದವ್ ಹಾಗೂ ಸ್ವಯಂಸೇವಕರಾದ ಎಂ. ಅಶೋಕ್, ಸಿ.ಬಿ. ಮಂಜುನಾಥ್, ಕೆ. ಅಶೋಕ್, ಎಂ. ನರಸಿಂಹ ಮೂರ್ತಿ ಪಾಲ್ಗೊಂಡಿದ್ದರು.
ಯುವಜನತೆಯ ಈ ಸಾಧನೆಗೆ ಮಾಜಿ ಶಾಸಕ ಡಾ. ಎನ್.ಎಲ್. ನಿಸರ್ಗ ನಾರಾಯಣಸ್ವಾಮಿ, ಪ್ರಾಂಶುಪಾಲರಾದ ಡಾ. ಜಿ. ಮುರಳಿ ಆನಂದ್, ಡಾ. ಎನ್. ಆನಂದಮ್ಮ, ಎಸ್.ಎಸ್. ಪ್ರದಿಪ ಹಾಗೂ ಎನ್.ಎಸ್.ಎಸ್. ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.