ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಇತ್ತೀಚೆಗೆನಿಧನರಾಗಿರುವ ವೃಕ್ಷಮಾತೆ ಸಾಲುಮರದತಿಮ್ಮಕ್ಕ ಹೆಸರಿನಲ್ಲಿ ಪ್ರಶಸ್ತಿಸ್ಥಾಪಿಸಲಾಗುವುದು ಎಂದುಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯಘೋಷಿಸಿದ್ದಾರೆ.
ಅರಮನೆಮೈದಾನದಲ್ಲಿ ನಡೆದ ಕರ್ನಾಟಕರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣಮಂಡಳಿ (ಕೆಎಸ್‌ಪಿಸಿಬಿ)ಸುವರ್ಣ ಮಹೋತ್ಸವಸಮಾರಂಭವನ್ನು ಉದ್ಘಾಟಿಸಿಮಾತನಾಡಿದರು.
ನಮ್ಮಸುತ್ತಮುತ್ತಲಿನ ಪರಿಸರವನ್ನುಮಲಿನಗೊಳ್ಳದಂತೆ ಇಟ್ಟುಕೊಳ್ಳಬೇಕಾದಕರ್ತವ್ಯ ಕೇವಲ ಸರ್ಕಾರ ಅಥವಾಸ್ಥಳೀಯ ಸಂಸ್ಥೆಗಳ ಜವಾಬ್ದಾರಿಮಾತ್ರವಲ್ಲ.ಸಾರ್ವಜನಿಕರುಕೈಜೋಡಿಸಿದಾಗ ಮಾತ್ರ ಈ ಕೆಲಸಸಾಧ್ಯವಾಗುತ್ತದೆ.ಆ ನಿಟ್ಟಿನಲ್ಲಿಇತ್ತೀಚೆಗೆ ನಿಧನರಾದ ಸಾಲುಮರದತಿಮ್ಮಕ್ಕ ಎಲ್ಲರಿಗೂ ಪ್ರೇರಣೆ. ಅವರ ಹೆಸರನ್ನುಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿಕೆಎಸ್‌ಪಿಸಿಬಿಯಲ್ಲಿ 1ಕೋಟಿ ರೂ.ದತ್ತಿನಿಧಿಯನ್ನುಇರಿಸಿ ಅದರಿಂದ ಬರುವ ಬಡ್ಡಿಯಲ್ಲಿಪ್ರತಿವರ್ಷ ಐವರು ಪರಿಸರವಾದಿಗಳಿಗೆಸಾಲುಮರದ ತಿಮ್ಮಕ್ಕ ಪ್ರಶಸ್ತಿಯನ್ನುನೀಡುವಂತೆ ಕೆಎಸ್‌ಪಿಸಿಬಿ ಅಧ್ಯಕ್ಷನರೇಂದ್ರಸ್ವಾಮಿ ವಿನಂತಿಯನ್ನುಅನುಮೋದಿಸಿ, ಈಕಾರ್ಯಕ್ಕೆ ಸರ್ಕಾರ ಕೂಡಾಅಗತ್ಯವಿರುವ ಸಹಕಾರವನ್ನು ನೀಡಲಿದೆಎಂದು ಸಿಎಂ ವಿವರಿಸಿದರು.
ಕೆಎಸ್‌ಪಿಸಿಬಿಸ್ಥಾಪನೆಯಾಗಿ 50ವರ್ಷಗಳುಪೂರ್ಣಗೊಂಡಿವೆ.ದೂರದೃಷ್ಟಿಯನಾಯಕಿ ಇಂದಿರಾ ಗಾಂಧಿಯವರು ಪರಿಸರಸಂರಕ್ಷಣೆ, ಜಲಸಂರಕ್ಷಣೆ,ವನ್ಯಜೀವಿಸಂರಕ್ಷಣೆ ಕಾಯ್ದೆಗಳನ್ನು ಜಾರಿಗೆತಂದಿದ್ದರು.ಅವರ ಜನ್ಮದಿನವಾದನ.19ರಂದೇಕೆಎಸ್‌ಪಿಸಿಬಿ ಸುವರ್ಣ ಮಹೋತ್ಸವಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ.ಈ ಜಾಗೃತಿಕಾರ್ಯಕ್ರಮ ಕೇವಲ ಸುವರ್ಣಮಹೋತ್ಸವಕ್ಕೆ ಸೀಮಿತವಾಗದೆ,ಪ್ರತಿವರ್ಷಮುಂದುವರೆಸುವಂತೆ ಸಿಎಂ ಸಲಹೆನೀಡಿದರು.
ಎಲ್ಲಜೀವಿಗಳ ಉಳಿವಿಗೆ ಮಾಲಿನ್ಯನಿಯಂತ್ರಣ ಅತ್ಯಗತ್ಯ.ಕೇಂದ್ರ ಬಿಡುಗಡೆಮಾಡಿರುವ ಪಟ್ಟಿಯ ಪ್ರಕಾರ ದೇಶದ131 ಮಹಾನಗರಗಳಮಾಲಿನ್ಯ ಮಿತಿಮೀರಿದೆ.ಈ ಪಟ್ಟಿಯಲ್ಲಿಬೆಂಗಳೂರು,ಹುಬ್ಬಳ್ಳಿ,ದಾವಣಗೆರೆ ನಗರಗಳುಸೇರಿರುವುದು ಆತಂಕಕಾರಿ ವಿಷಯ.2030ಕ್ಕೆ ಬೆಂಗಳೂರುನಗರವನ್ನು ಪ್ಲಾಸ್ಟಿಕ್ ಮುಕ್ತನಗರವನ್ನಾಗಿ ಮಾಡುವ ಗುರಿಇರಿಸಿಕೊಳ್ಳಲಾಗಿದ್ದು,ಸಾರ್ವಜನಿಕರು,ಸಂಘ ಸಂಸ್ಥೆಗಳು,ವಿಶೇಷವಾಗಿಯುವಕರು,ವಿದ್ಯಾರ್ಥಿಗಳುಈ ಬಗ್ಗೆ ಅರ್ಥಮಾಡಿಕೊಂಡು ಜನರಲ್ಲಿಜಾಗೃತಿ ಮೂಡಿಸಬೇಕು ಎಂದು ಸಿಎಂಕರೆ ನೀಡಿದರು.
ಕಾರ್ಯಕ್ರಮದಲ್ಲಿಪ್ರತಿ ಜಿಲ್ಲೆಯಿಂದ ಮೂವರಿಗೆಮತ್ತು ರಾಜ್ಯಮಟ್ಟದಲ್ಲಿ ಐವರಿಗೆ‘ಇಂದಿರಾ ಪ್ರಿಯದರ್ಶಿನಿ ಪರಿಸರಪ್ರಶಸ್ತಿ’ ನೀಡಿ ಗೌರವಿಸಲಾಯಿತು.ಡಿಸಿಎಂಡಿ.ಕೆ.ಶಿವಕುಮಾರ್,ಸಚಿವರಾದ ಈಶ್ವರ್ಖಂಡ್ರೆ, ದಿನೇಶ್ಗುಂಡೂರಾವ್,ಎನ್.ಚೆಲುವರಾಯಸ್ವಾಮಿ,ಬೈರತಿ ಸುರೇಶ್,ಎಂ.ಸಿ.ಸುಧಾಕರ್,ಕೆಎಸ್‌ಪಿಸಿಬಿಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ,ಮಾಜಿ ಡಿಸಿಎಂಶಾಸಕರಾದ ದಿನೇಶ್ ಗೂಳಿಗೌಡ,ರವಿ ಗಾಣಿಗ,ರಮೇಶ್ ಬಂಡಿಸಿದ್ದೇಗೌಡ,ಪೊನ್ನಣ್ಣಮತ್ತಿತರರು ಉಪಸ್ಥಿತರಿದ್ದರು.
ಸಭಾಕಾರ್ಯಕ್ರಮಕ್ಕೂ ಮೊದಲಿಗೆ ಗಾಯಕವಿಜಯ್ ಪ್ರಕಾಶ್ ತಂಡದವರುನಡೆಸಿಕೊಟ್ಟ ಸಂಗೀತ ಕಾರ್ಯಕ್ರಮನೆರೆದವರ ಗಮನ ಸೆಳೆಯಿತು.
ದೇಶದಲ್ಲಿ ಅರಣ್ಯ, ಪರಿಸರ, ವನ್ಯಜೀವಿಗಳು ಉಳಿದಿರುವುದಕ್ಕೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜಾರಿ ಮಾಡಿದ ಕಾಯ್ದೆಗಳು ಕಾರಣ. ಜಾಗತಿಕ ಸಮಸ್ಯೆಯಾಗಿರುವ ಹವಾಮಾನ ವೈಪರಿತ್ಯವನ್ನು ಸರಿದೂಗಿಸಿ ಮುಂದಿನ ಜನಾಂಗಕ್ಕೆ ಭೂಮಿಯನ್ನು ಪರಿಶುದ್ಧವಾಗಿ ನೀಡಲು ಪರಿಸರ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯವಾಗಬೇಕು. ಪ್ಲಾಸ್ಟಿಕ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುವುದರ ಜೊತೆಗೆ ಕ್ಯಾನ್ಸರ್ ರೋಗಕ್ಕೂ ಕಾರಣವಾಗುತ್ತದೆ. ‘ವೃಕ್ಷೋ ರಕ್ಷತಿ ರಕ್ಷಿತಃ’ ಎಂಬುದು ಎಲ್ಲರ ಮಂತ್ರವಾಗಬೇಕು.