ಬೆಣ್ಣೆಶಿರೂರಿನಲ್ಲಿ ಕೆಕೆಆರ್​ಡಿಬಿ ಅಕ್ಷರ ಅವಿಷ್ಕಾರ ಯೋಜನೆಯಡಿ ನಿರ್ಮಿಸಲಾದ 6 ಕೋಣೆಗಳನ್ನು ಶಾಸಕ ಬಿ.ಆರ್​.ಪಾಟೀಲ್​ ಉದ್ಘಾಟಿಸಿದರು. ಅಣ್ಣಪ್ಪ ಹಾದಿಮನಿ, ಸಿದ್ದರಾಮ ಪ್ಯಾಟಿ, ಹಣಮಂತ್ರಾಯ ಪಾಟೀಲ್​, ಹೊನ್ನೇಶ ಅಳ್ಳಗಿ ಇತರರಿದ್ದರು. 
ರಾಜ್ಯ

ಸರ್ಕಾರಿ ಸೌಲಭ್ಯ ಪಡೆದು ಮುಂದೆ ಬನ್ನಿ

ನಿಂಬರ್ಗಾ: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ಶಾಲೆ-ಕಾಳೇಜುಗಳನ್ನು ಆರಂಭಿಸಿದ್ದು, ಇದರ ಸದುಪಯೋಗ ಪಡೆದು ಉತ್ತಮ ವ್ಯಕ್ತಿಗಳಾಗಬೇಕು ಎಂದು ಶಾಸಕ ಬಿ.ಆರ್​.ಪಾಟೀಲ್​ ಕರೆ ನೀಡಿದರು. ಬೆಣ್ಣೆಶಿರೂರಿನಲ್ಲಿ ಕೆಕೆಆರ್​ಡಿಬಿಯ ಅಕ್ಷರ ಅವಿಷ್ಕಾರ ಯೋಜನೆಯಡಿ ನಿರ್ಮಿಸಲಾದ ಕಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ 6 ಕೋಣೆಗಳನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪುಸ್ತಕ, ಸಮವಸ್ತ್ರ, ಹಾಲು, ಹಣ್ಣು ಹಾಗೂ ಪೌಷ್ಟಿಕ ಆಹಾರವನ್ನು ಉಚಿತವಾಗಿ ನೀಡುತ್ತಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಣ್ಣಪ್ಪ ಹಾದಿಮನಿ, ಚನ್ನು ಬಿರಾದಾರ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ, ಎಇಇ ಹೊನ್ನೇಶ ಅಳ್ಳಗಿ, ಜೆಇ ಸಂಪತಕುಮಾರ್​, ಸಿಆರ್​ಪಿ ಸಂಜಯಕುಮಾರ ಜೋಗನ, ಮುಖ್ಯಗುರು ಈರಣ್ಣ ಸಾವಳಗಿ, ಪ್ರಮುಖರಾದ ಸಂತೋಷ ಪಾಟೀಲ್​, ಹಣಮಂತರಾಯ ಪಾಟೀಲ್​, ಝಿಶಾನ್​ ಅನ್ಸಾರಿ, ಮಕ್ದುಮ್​ ಖುರೇಶಿ, ಲಕ್ಷ$್ಮಣ ಸೂಗರ, ಧರ್ಮರಾಜ ಮಾಶಾಳಕರ್​, ಶಿವಲಿಂಗಪ್ಪ ಕುಂಬಾರ ಇತರರಿದ್ದರು.