ಕಕ್ಕೇರಾದಲ್ಲಿ ಶನಿವಾರ ಹಮ್ಮಿಕೊಂಡ ಹೋಬಲಿ ಮಟ್ಟದ ಪ್ರಜÁಸೇವಾ ಆಂದೋಲದಲ್ಲಿ ದೇವಿಂದ್ರಪ್ಪ ಬಳಿಚಕ್ರ ತಹಸೀಲ್ದಾರ್ ಹುಸೇನಸಾಬ್‌ಎ.ಸರಕಾವಸ್ ಅವರಿಗೆ ಮನವಿಪತ್ರ ಸಲ್ಲಿಸಿದರು. ಜಟ್ಟೆಪ್ಪ ದಳಾರ, ಬಸವರಾಜ ಸಜ್ಜನ್, ಡಾ.ರಾಜಾ ವೆಂಕಟಪ್ಪನಾಯಕ, ಗುಂಡಪ್ಪ ಸೊಲಾಪುರ, ಪಂಡಿತ ನಿಂಬೋರೆ, ಮಾನಪ್ಪ ಗೋನಾಲ್ ಇತರರಿದ್ದರು. 
ರಾಜ್ಯ

ಯೋಜನೆಯ ಲಾಭ ಪಡೆದುಕೊಳ್ಳಿ

ಕಕ್ಕೇರಾ: ಸರ್ಕಾರದ ಸುತ್ತೋಲೆಯಂತೆ ಪ್ರಜಾಸೇವಾ ಕರ‍್ಯಕ್ರಮದಡಿ ಸಾರ್ವಜನಿಕರ ಕುಂದು-ಕೊರತೆ ಆಲಿಸಿ ಸ್ಥಳದಲ್ಲಿಯೇ ಪರಿಹಾರ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದ್ದು ನಾಗರೀಕರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ಹುಸೇನ್‌ಸಾಬ್.ಎ.ಸರಕಾವಸ್ ಹೇಳಿದರು.
ಪಟ್ಟಣದ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ರಾಜ್ಯಾದ್ಯಂತ ಕಳೆದ ಸೆ.೫ರಿಂದ ಪ್ರಜಾಸೇವೆ ಎಂಬ ನೂತನ ಇಲಾಖೆ ಪ್ರಾರಂಭಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ತಾಲೂಕು, ಜಿಲ್ಲಾ ಮಟ್ಟದ ಕಚೇರಿಗಳಿಗೆ ಸಾರ್ವಜನಿಕರು ಅಲೆದಾಡುವುದನ್ನು ತಪ್ಪಿಸಲು ಸರ್ಕಾರವೇ ನಿಮ್ಮ ಮನೆ ಬಾಗಿಲಲ್ಲಿ ಬಂದು ನಿಮ್ಮ ಸಮಸ್ಯೆಗೆ ಸ್ಪಂದಿಸಲು ಇಂದು ಪಟ್ಟಣದಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಜನರು ತಮ್ಮ ಕುಂದು-ಕೊರತೆಗಳಿದ್ದಲ್ಲಿ ಪ್ರತಿ ಶನಿವಾರ ನಡೆಯುವ ಈ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ‍್ಯಕ್ರಮದಲ್ಲಿ ಪಟ್ಟಣದ ಮುಖಂಡರಾದ ನಿಂಗಪ್ಪನಾಯ್ಕ್, ಬುಚ್ಚಪ್ಪನಾಯಕ, ಚಂದ್ರು ವಜ್ಜಲ್, ನಿಂಗಯ್ಯ ಬೂದಗುಂಪಿ, ದೇವಿಂದ್ರಪ್ಪ ಬಳಿಚಕ್ರ, ಡಾ.ನಂದು ಕಾಂಗ್ರೆಸ್ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿ, ಪ್ರಜಾಸೇವಾ ಕರ‍್ಯಕ್ರಮದ ಕುರಿತಾಗಿ ಸಾರ್ವಜನಿಕರಿಗೆ ಡಂಗೂರದ ಮೂಲಕವಾಗಲಿ, ಪತ್ರಿಕಾ ಪ್ರಕಟಣೆಯಾಗಲಿ ಮುಂಚಿತವಾಗಿ ತಿಳಿಸದೆ ತರಾತುರಿಯಲ್ಲಿ ಆಯೋಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ನಾಗರೀಕರಿಗಿಂತ ಅಽಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಕಕ್ಕೇರಾ ತಾಲೂಕು ಕೇಂದ್ರ, ಬರಗಾಲ ಘೋಷಣೆ, ಸೋಮನಾಥ ದೇವಸ್ಥಾನಕ್ಕೆ ಸಮಿತಿ ರಚನೆ, ಕಳ್ಳರ ಪಾಲಾದ ಸೋಮನಾಥ ದೇವರ ಉತ್ಸವ ಮೂರ್ತಿ ಪತ್ತೆ, ವಾಲ್ಮೀಕಿ ವೃತ್ತದಿಂದ ಹಳೆಯ ಬಜಾರ ಮಾರ್ಗದ ಜಕ್ಕಪ್ಪಯ್ಯನ ದೇವಸ್ಥಾನದವರೆಗೆ ರಸ್ತೆ ಅಗಲೀಕರಣ, ಪುರಸಭೆಗೆ ಸಿಬ್ಬಂದಿ ನೇಮಕ, ಸಮುದಾಯ ಕೇಂದ್ರ ಶೀಘ್ರ ಲೋಕಾರ್ಪಣೆ, ಶಿಕ್ಷಣ, ರಸ್ತೆ, ಕುಡಿಯುವ ನೀರು, ಅತಿಥಿ ಶಿಕ್ಷಕರ ನೇಮಕ, ಸಾರಿಗೆ ಸೌಲಭ್ಯ, ರಸ್ತೆ ದುರಸ್ತಿ, ಮುರಾರ್ಜಿ, ಸೈನಿಕ ಶಾಲೆ, ಕಿತ್ತೂರು ರಾಣಿ ವಸತಿ ಶಾಲೆ, ಕನ್ಯಾ ಪ್ರೌಢಶಾಲೆ, ಪದವಿ ಕಾಲೇಜು ಆರಂಭಿಸುವುದು, ಅಲೆಮಾರಿ ಜನಾಂಗಕ್ಕೆ ವಸತಿಶಾಲೆ, ಪೊಲೀಸ್ ಠಾಣೆ ಆರಂಭಿಸುವುದು, ೧೧೦ಕೆಇಬಿ ಸ್ಟೇಶನ್ ನಿರ್ಮಾಣ, ಸಂಧ್ಯಾ ಸುರಕ್ಷಾ, ಜಮೀನು ಸಮಸ್ಯೆ ಸೇರಿ ಅನೇಕ ಸಮಸ್ಯೆಗಳ ಕುರಿತಾಗಿ ಮಾತನಾಡಿ ಮನವಿಪತ್ರ ಸಲ್ಲಿಸಿದರು.
ಮುಖಂಡ ದೇವಿಂದ್ರಪ್ಪ ಬಳಿಚಕ್ರ ಮಾತನಾಡಿ, ಈ ಕರ‍್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬ ನಾಗರೀಕರಿಗೆ ಪಶು ಸಂಗೋಪನಾ ಇಲಾಖೆ ಅಽಕಾರಿಗಳು ನೀಡಿದ್ದ, ಕುರಿ ಮತ್ತು ಹೈನುಗಾರಿಕೆ ತರಬೇತಿ ಕರಪತ್ರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಇದ್ದ ಭಾವಚಿತ್ರದ ಕರಪತ್ರ ವೇದಿಕೆಯಲ್ಲಿ ಪ್ರದರ್ಶಿಸಿ ಮುಖ್ಯಮಂತ್ರಿ ಯಾರು, ಉಪ ಮುಖ್ಯಮಂತ್ರಿ ಯಾರು ಎಂಬುದು ಅಽಕಾರಿಗಳಿಗೆ ಗೊತ್ತಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಕರ‍್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಜೆಟ್ಟೆಪ್ಪ ದಳಾರ, ತಾಪಂ ಕಾರ್ಯನಿರ್ವಾಹಕ ಅಽಕಾರಿ ಬಸವರಾಜ ಸಜ್ಜನ್, ತಾಲೂಕು ಆರೋಗ್ಯಾಽಕಾರಿ ಡಾ.ರಾಜಾ ವೆಂಕಟಪ್ಪನಾಯಕ, ಅಕ್ಷರ ದಾಸೋಹದ ಅಽಕಾರಿ ಪಂಡಿತ ನಿಂಬೊರೆ, ಕೆಪಿಸಿಸಿ ಸದಸ್ಯ ಗುಂಪಪ್ಪ ಸೊಲಾಪುರ, ಪುರಸಭೆ ಮುಖ್ಯಾಧಿಕಾರಿ ಮಾನಪ್ಪ ಗೋನಾಲ್, ಜೆಸ್ಕಾಂ ಎಇಇ ಮಮ್ಮದ್ ರಫೀಕ್ ಸೇರಿ ವಿವಿಧ ಇಲಾಖೆ ಅಽಕಾರಿಗಳಿದ್ದರು. ಉಪತಹಸೀಲ್ದಾರ್ ಪ್ರವೀಣ ಸಜ್ಜನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಂದಾಯ ನಿರೀಕ್ಷಕ ಮಲಕಾಜಪ್ಪ ಸ್ವಾಗತಿಸಿದರು. ಗಣೇಶ ಬಸಾಪುರ ಪ್ರಾರ್ಥಿಸಿದರು. ಬಸಯ್ಯಸ್ವಾಮಿ ನಿರೂಪಣೆ ಮಾಡಿದರು. ಗೋವಿಂದ್ ರಾಠೋಡ್ ವಂದಿಸಿದರು.