ಆಳಂದನಲ್ಲಿ ಶಾಸಕ ಬಿ.ಆರ್​.ಪಾಟೀಲ್​ ಅವರು ಡಿ.ದೇವರಾಜು ಅರಸು ನಿಗಮದಿಂದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದರು. ಶಿವಪುತ್ರಪ್ಪ ಪಾಟೀಲ್​, ಜಗದೇವಪ್ಪ ಮುಗುಟ, ಹಣಮಂತ ಜಾಗೀರದಾರ್​ ಇತರರಿದ್ದರು. 
ರಾಜ್ಯ

ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಿ

ಆಳಂದ: ಮಹಿಳೆಯರು ಸರ್ಕಾರ ನೀಡುತ್ತಿರುವ ಯೋಜನೆಗಳ ಸದ್ಬಳಕೆ ಮಾಡಿಕೊಂಡು ಸ್ವಾವಲಂಬನೆಯಿಂದ ಜೀವನ ನಡೆಸಬೇಕು ಎಂದು ಶಾಸಕ ಬಿ.ಆರ್​.ಪಾಟೀಲ್​ ಕರೆ ನೀಡಿದರು. ಶಾಸಕರ ಕಚೇರಿಯಲ್ಲಿ ಭಾನುವಾರ 2025&26ನೇ ಸಾಲಿನ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿ, ನಿಮಗೆ ನೀಡುತ್ತಿರುವ ಯಂತ್ರಗಳನ್ನು ಬೇರೆಯವರಿಗೆ ಮಾರುವುದು ಹಾಗೂ ವರ್ಗಾಯಿಸುವುದು ಮಾಡಬಾರದು. ಸೌಲಭ್ಯಗಳ ಲಾಭ ಪಡೆದು ಉತ್ತಮ ಬದುಕು ನಡೆಸಬೇಕು ಎಂದು ಕರೆ ನೀಡಿದರು. ನಿಗಮದ ವ್ಯವಸ್ಥಾಪಕ ಜಗದೇವಪ್ಪ ಮುಗುಟ ಪ್ರಾಸ್ತಾವಿಕ ಮಾತನಾಡಿ, ಆಳಂದ ೇತ್ರದಿಂದ 50 ಅರ್ಜಿಗಳನ್ನು ಆನ್​ಲೈನ್​ ಮೂಲಕ ಸ್ವೀಕರಿಸಲಾಗಿದ್ದು, ಸಮಗ್ರ ಪರಿಶೀಲನೆ ನಡೆಸಿ ಮಾಡಿಯಾಳ, ಯಸಳಂಗಿ, ಹಡಲಗಿ, ಆಳಂದ, ಸರಸಂಬಾ, ಭೂಸನೂರ ಸೇರಿ ಒಟ್ಟು 19 ಫಲಾನುಭವಿಗಳಿಗೆ ಯಂತ್ರಗಳನ್ನು ವಿತರಿಸಲಾಗಿದೆ ಎಂದರು. ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್​, ತಾಲೂಕು ಅಧಿಕಾರಿ ಹಣಮಂತ ಜಾಗಿರದಾರ, ಪ್ರಮುಖರಾದ ಪಂಡೀತ ಶೇರಿಕರ, ಪ್ರತಾಪ ಕುಲಕರ್ಣಿ, ಸಿದ್ದರಾಮ ಪ್ಯಾಟಿ, ಸರೋಜಿನಿ ಭೂಸನೂರ, ಭಾಗ್ಯಶ್ರೀ ಸರಸಂಬಾ, ಕಾವೇರಿ ಆಳಂದ, ಗೀತಾಂಜಲಿ ಯಳಸಂಗಿ, ಭಾಗ್ಯಶ್ರೀ ಮಾಡಿಯಾಳ, ಶೋಭಾ ಮಾದನಹಿಪ್ಪರಗಾ, ವಿಮಲಾ ಎಸ್​., ಸರುಬಾಯಿ ಬಿ., ಜಗದೇವಿ ಹಟ್ಟಿ ಇತರರಿದ್ದರು.