ಬಸವಕಲ್ಯಾಣ: ಚಲಿಸುತಿದ್ದ ಅಪ್ಪಿ ಆಟೋ ಪಲ್ಟಿಯಾಗಿ ಆಟೋ ಮಾಲೀಕ ಮೃತಪಟ್ಟ ಘಟನೆ ತಾಲೂಕಿನ ಎರಡಂಗಿ ಗ್ರಾಮದ ಸಮಿಪದ ಬಸವ ನಗರ ಬಳಿ ಶುಕ್ರವಾರ ರಾತ್ರಿ ಜರುಗಿದೆ.
ತಾಲೂಕಿನ ಖಾನಾಪೂರವಾಡಿ ನಿವಾಸಿ ಶರಣಬಸಪ್ಪ ಎಸ್. ಬಿರಾದಾರ (೪೨) ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಬಸವಕಲ್ಯಾಣ ನಗರದಿಂದ ಅಪ್ಪಿ ಆಟೋದಲ್ಲಿ ತನ್ನ ಗ್ರಾಮಕ್ಕೆ ತೆರಳುವಾದ ಎದರಿಗೆ ಬಂದ ಬೈಕ್ ಡಿಕ್ಕಿಯಾಗಿ ಆಟೋ ಪಲ್ಟಿಯಾಗಿದ್ದು, ಆಟೋ ನಡೆಸುತ್ತಿದ್ದ ಈತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ