ಸಂಚಾರ ನಿಯಮ ಜಾಗೃತಿ ನಿಮಿತ್ತ ಹುಮನಾಬಾದ್ನಲ್ಲಿ ಡಿವೈಎಸ್ಪಿ ಮಡೋಳಪ್ಪ ನೇತೃತ್ವದಲ್ಲಿ ಶುಕ್ರವಾರ ನಡೆದ ಆಟೋ ರ್ಯಾಲಿಯಲ್ಲಿ ಸಿಪಿಐ ಸಂತೋಷ ತಟ್ಟೆಪಳ್ಳಿ, ಪಿಎಸ್ಐ ಹುಲೆಪ್ಪ ಗೌಡಗೊಂಡ ಇತರರಿದ್ದರು.
ಹುಮನಾಬಾದ್: ರಸ್ತೆ ಅಪಘಾತ ತಡೆಗಟ್ಟಲು ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಡಿವೈಎಸ್ಪಿ ಮಡೋಳಪ್ಪ ಕರೆ ನೀಡಿದರು.
ರಸ್ತೆ ಸುರತೆ ಮತ್ತು ಸಂಚಾರ ನಿಯಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ಯಾಸೆಂರ್ಜಸ್ ಆಟೋ ಮತ್ತು ಗೂಡ್ಸ್ ಆಟೋ ಚಾಲಕರ ರ್ಯಾಲಿಯಲ್ಲಿ ಮಾತನಾಡಿದ ಅವರು, ವಾಹನ ದಾಖಲೆಗಳನ್ನು ಸದಾ ತಮ್ಮ ಬಳಿ ಇಟ್ಟುಕೊಳ್ಳಬೇಕು. ಅತಿವೇಗ, ರ್ನಿಲ್ಯ ಚಾಲನೆ ಮತ್ತು ನಿಯಮ ಉಲ್ಲಂನೆಯಿಂದ ಜೀವಹಾನಿ ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಎಲ್ಲರೂ ಜವಾಬ್ದಾರಿಯಿಂದ ವಾಹನ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಸಿಪಿಐ ಸಂತೋಷ ತಟ್ಟೆಪಳ್ಳಿ ಮಾತನಾಡಿ, ಸಾರ್ವಜನಿಕರ ಸುರತೆಗಾಗಿ ಪೊಲೀಸ್ ಇಲಾಖೆ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಆಟೋ ಚಾಲಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಸಂಚಾರ ಪಿಎಸ್ಐ ಹುಲೆಪ್ಪ ಗೌಡಗೊಂಡ ಮಾತನಾಡಿ, ಚಾಲನಾ ಪರವಾನಗಿ, ವಾಹನ ನೋಂದಣಿ, ವಿಮೆ ಇತರ ದಾಖಲೆಗಳನ್ನು ನಿಯಮಿತವಾಗಿ ನವೀಕರಿಸಬೇಕು. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ಅತಿಯಾದ ವೇಗ ಮತ್ತು ಸಂಚಾರ ನಿಯಮ ಉಲ್ಲಂನೆ ತಪ್ಪಿಸುವ ಮೂಲಕ ಸುರತ ಸಂಚಾರಕ್ಕೆ ಸಹಕರಿಸಬೇಕು ಎಂದು ಕೋರಿದರು.