ಆಟೋ ಡ್ರೈವರ್‌ಗೆ ಕೋಟಿ ಬೆಲೆಯ ಲಂಬೋರ್ಘಿನಿ ಸೂಪರ್ ಕಾರ್ ಕೊಟ್ಟ ಮಾಲೀಕ! 
ರಾಜ್ಯ

ಆಟೋ ಚಾಲಕನಿಗೆ ಕೋಟಿ ಬೆಲೆಯ ಲಂಬೋರ್ಘಿನಿ ಕೊಟ್ಟ ಮಾಲೀಕ: ಆಟೋ ಹತ್ತಿದ ಕೋಟ್ಯಧಿಪತಿ; ವಿಡಿಯೋ ವೈರಲ್​! Lamborghini Viral Video

ಪ್ರಮುಖ ಮುಖ್ಯಾಂಶಗಳು

  • ಆಟೋ ಡ್ರೈವರ್‌ಗೆ ಕೋಟಿ ಬೆಲೆಯ ಲಂಬೋರ್ಘಿನಿ ಸೂಪರ್ ಕಾರ್ ಕೊಟ್ಟ ಮಾಲೀಕ!
  • ಬದಲಿಗೆ ತಾವೇ ಆಟೋ ಹತ್ತಿ ಸವಾರಿ ಮಾಡಿದ ಬೆಂಗಳೂರಿನ ಉದ್ಯಮಿ
  • ತಾವೇ ಆಟೋ ಓಡಿಸಿ, ಚಾಲಕನಿಗೆ ಕೋಟಿ ಬೆಲೆಯ ಕಾರು ನೀಡಿದ ಹೃದಯಸ್ಪರ್ಶಿ ವಿಡಿಯೋ
ಬೆಂಗಳೂರು: ಲಂಬೋರ್ಘಿನಿ ಈ ಕಾರಿನ ಹೆಸರನ್ನು ಕೇಳದವರು ಯಾರು ಇಲ್ಲ ಎಂದರೆ ಸುಳ್ಳಲ್ಲ. ಕೋಟ್ಯಾಂತರ ರೂಪಾಯಿ ಬೆಲೆಯಿರುವ ಈ ಕಾರನ್ನು ಒಮ್ಮೆಯಾದರೂ ಚಲಾಯಿಸಬೇಕು. ಸಾಧ್ಯವಾದರೆ ಒಂದು ಲಂಬೋರ್ಘಿನಿ (Lamborghini Viral Video) ಕಾರನ್ನು ಖರೀದಿಸಬೇಕು ಎನ್ನುವುದು ಕಾರ್​ ಕ್ರೇಜ್​ ಇರುವ ಜನರ ಆಸೆಯಾಗಿರುತ್ತದೆ.
ಆದರೆ ಈ ಕಾರಿನ ಬೆಲೆ ಅತಿ ದುಬಾರಿಯಿರುವ ಕಾರಣ ಎಲ್ಲಾ ಜನರು ಅದರಲ್ಲೂ ಮದ್ಯಮವರ್ಗದ ಜನರಿಗೆ ಈ ಕಾರನ್ನು ಖರೀದಿಸುವುದು, ಚಲಾಯಿಸುವುದು ತಿರುಕನ ಕನಸಂತೆ ಕಾಣಿಸುತ್ತದೆ.
ಆದರೆ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಲಂಬೋರ್ಘಿನಿ ಚಾಲಕನೊಬ್ಬ ತನ್ನ ಕಾರನ್ನು ಆಟೋ ಚಾಲಕನಿಗೆ ಒಂದು ರೌಂಡ್​ ಚಲಾಯಿಸಲು ಕೊಟ್ಟಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ವೈರಲ್ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ವಿಡಿಯೋನಲ್ಲಿ, ಲಂಬೋರ್ಘಿನಿ ಕಾರಿನ ಮಾಲೀಕ ಹಾಗೂ ಸೋಷಿಯಲ್​ ಮೀಡಿಯಾ ಪರ್ಸನಾಲಿಟಿ ರಾಕೇಶ್ ಕೆವಿಎನ್ ತಮ್ಮ ಲ್ಯಾಂಬೋರ್ಗಿನಿ ಸೂಪರ್ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಆಟೋ ಚಾಲಕನೊಬ್ಬ ಕೈಬೀಸಿ ಶುಭಕೋರಿದ್ದಾನೆ. ಇದಕ್ಕೆ ರಾಕೇಶ್​ ಕೂಡ ಹಾಯ್​ ಎಂದಿದ್ದಾರೆ
ನಂತರ ಆಟೋ ಚಾಲಕ ಲಂಬೋರ್ಘಿನಿ ಕಾರನ್ನು ಓಡಿಸುವುದು ನನ್ನ ಜೀವನದ ದೊಡ್ಡ ಕನಸೆಂದು ಹೇಳಿದ್ದಾರೆ. ಆಗ ರಾಕೇಶ್​ ಆಟೋವನ್ನು ರಸ್ತೆ ಬದಿಗೆ ನಿಲ್ಲಿಸಲು ಹೇಳಿದ್ದಾನೆ. ನಂತರ ತನ್ನ ಲಂಬೋರ್ಘಿನಿ ಕಾರಿನ್ನು ಚಲಾಯಿಸಲು ಆಟೋ ಚಾಲಕನಿಗೆ ಅನುಮತಿ ನೀಡಿದ್ದಾನೆ.
ನಂತರ ಆಟೋ ಏರಿದ ರಾಕೇಶ್​ ರಿಕ್ಷಾ ಚಲಾಯಿಸಿದರೆ, ಇತ್ತ ಆಟೋ ಚಾಲಕ ಲಂಬೋರ್ಘಿನಿ ಕಾರನ್ನು ಸ್ಪಲ್ಪ ದೂರ ಓಡಿಸಿ ತನ್ನ ಬಹುಕಾಲದ ಆಸೆಯೊಂದನ್ನು ಈಡೇರಿಸಿಕೊಂಡಿದ್ದಾನೆ. ಈ ವಿಡಿಯೋಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ದೊರೆತಿದೆ, (ಏಜನ್ಸೀಸ್​).