ವಿಜಯಪುರ ಸಮೀಪದ ಸುಗಟೂರು ಗ್ರಾಮದಲ್ಲಿ ವಿವಿಧ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ರಾಜ್ಯೋತ್ಸವದಲ್ಲಿ ಬಸ್ಗಳಿಗೆ ಪೂಜೆ ಸಲ್ಲಿಸಿ ಚಾಲಕರಾದ ಕೃಷ್ಣಪ್ಪ, ಶ್ರೀನಿವಾಸ್, ನಿರ್ವಾಹಕರಾದ ಸಂಜಯ್, ರಾಮಚಂದ್ರಪ್ಪ, ಸುಧಾಕರ್ ಅವರನ್ನು ಸನ್ಮಾನಿಸಲಾಯಿತು. ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ, ಪ್ರಸಾದ್, ಮಧು, ಅಶೋಕ್ ಇತರರು ಇದ್ದರು.
ವಿಜಯಪುರ: ಕನ್ನಡವನ್ನು ಉಳಿಸಿ ಪೋಷಿಸುವಲ್ಲಿ ಆಟೋಗಳು, ಬಸ್ ಮತ್ತು ಲಾರಿ ಚಾಲಕರ ಸೇವೆಯು ಅನನ್ಯವಾದುದು. ಕನ್ನಡಪರವಾದ ಸಂಸತಿ, ಭಾಷೆ, ಇತಿಹಾಸ ಕುರಿತ ಬರಹ, ಘೋಷವಾಕ್ಯಗಳನ್ನು ಬರೆಯಿಸಿ ಜನಸಮಾನ್ಯರಲ್ಲಿ ಜಾಗೃತಿ ಮೂಡಿಸುವಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಬೆಂ. ಗ್ರಾಮಾಂತರ ಜಿಲ್ಲಾ
ಶರಣ ಸಾಹಿತ್ಯ ಪರಿಷತ್ಮಾಜಿ ಅಧ್ಯಕ್ಷ, ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ಪಟ್ಟಣ ಸಮೀಪದ ಸುಗಟೂರು ಗ್ರಾಮದಲ್ಲಿ ವಿವಿಧ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿ, ಜನಸಾಮಾನ್ಯರ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದು ಪ್ರಾಮಾಣಿಕ ಸೇವೆ ಸಲ್ಲಿಸುವಲ್ಲಿ ಚಾಲಕರು, ನಿರ್ವಾಹಕರು ದುಡಿಯುತ್ತಿದ್ದಾರೆ ಎಂದರು. ಕನ್ನಡದ ನೆಲ ಜಲವನ್ನು ಅನುಭವಿಸುತ್ತಿರುವವರು ಕನ್ನಡ ಕಲಿತು ವ್ಯಾವಹಾರಿಕವಾಗಿ ಬಳಸಬೇಕೆಂಬುದರಲ್ಲಿ ಇರುವ ದುರಭಿಮಾನ ಕೂಡದು. ಜಗತ್ತಿನ ಯಾವ ಭಾಷೆಯ ಕವಿಯೊಡನೆ ಸರಿಸಮಾನವಾಗಿ ನಿಲ್ಲಬಲ್ಲ ಕವಿಶ್ರೇಷ್ಠರು ಕನ್ನಡದಲ್ಲಿದ್ದು, ಕನ್ನಡ ಸಾಹಿತ್ಯವನ್ನು ಯುವಪೀಳಿಗೆ ಅಧ್ಯಯನ ಮಾಡಬೇಕಿದೆ ಎಂದರು.
ನಿರ್ವಾಹಕ ಸಂಜಯ್ಕುಮಾರ್ ಮಾತನಾಡಿ, ಗಡಿ ಸಮಸ್ಯೆಗಳ ಪರಿಹಾರಕ್ಕೆ ಮಹಾಜನ್ ಆಯೋಗದ ವರದಿಯೇ ಅಂತಿಮ. ಅಖಂಡ ಕರ್ನಾಟಕದ ಮನೋಭಾವನೆ ಎಲ್ಲರಲ್ಲಿಯೂ ಮೂಡಬೇಕು ಎಂದರು. ಹೊಸಕೋಟೆ&-ವಿಜಯಪುರ 298 ಪಿಬಿ ಬಿಎಂಟಿಸಿ ಬಸ್ಗಳಿಗೆ ವಿಶೇಷ ಪೂಜೆ ಸಲ್ಲಿಸಿ ಚಾಲಕರು, ನಿರ್ವಾಹಕರನ್ನು ಸನ್ಮಾನಿಸಲಾಯಿತು. ಯುವಕ ಸಂಘದ ಪ್ರಸಾದ್ ಹೋಟೆಲ್ ಮಧು, ಚಾಲಕರಾದ ಕೃಷ್ಣಪ್ಪ, ಶ್ರೀನಿವಾಸ್, ಸಂಜಯ್, ರಾಮಚಂದ್ರಪ್ಪ, ಸುಧಾಕರ್, ಗ್ರಾಪಂ ಸದಸ್ಯ ಎಂ.ನಾಗರಾಜು, ಎಂ.ಶಂಕರಪ್ಪ, ನಾರಾಯಣಸ್ವಾಮಿ, ಅಶೋಕ್, ಬಿ.ನಾಗರಾಜು, ಮಂಜುನಾಥ್ ಬಾಬು, ಸಂತೋಷ್, ವೇಣುಗೋಪಾಲ್, ನಾರಾಯಣಸ್ವಾಮಿ ಇತರರು ಇದ್ದರು.