‘ನವರತನ್ ಅಂಡ್ ಸನ್ಸ್ ಜುವೆಲ್ಲರಿ  
ರಾಜ್ಯ

ನವರತನ್ ಅಂಡ್ ಸನ್ಸ್‌ನಲ್ಲಿ ಆಕರ್ಷಕ ಕೊಡಗೆ ಲಭ್ಯ : ಅಕ್ಷಯ ತೃತೀಯಾ ಹಿನ್ನೆಲೆ-Akshaya Tritiya

ಬೆಂಗಳೂರು: ಅಕ್ಷಯ ತೃತೀಯಾ ಪ್ರಯುಕ್ತ ‘ನವರತನ್ ಅಂಡ್ ಸನ್ಸ್’ಚಿನ್ನ, ವಜ್ರ ಮತ್ತು ಬೆಳ್ಳಿ ಆಭರಣಗಳ ಖರೀದಿ ಮೇಲೆ ಹಲವು ಕೊಡುಗೆಗಳನ್ನು ಘೋಷಿಸಿದೆ.
ಚಿನ್ನಾಭರಣಗಳ ಮೇಕಿಂಗ್ ಶುಲ್ಕದ ಮೇಲೆ ಶೇ.9, ಒಂದು ಕೆಜಿ ಬೆಳ್ಳಿ ಆಭರಣಗಳ ಮೇಲೆ 3 ಸಾವಿರ ರೂ ಮತ್ತು ಪ್ರತಿ ಕ್ಯಾರೆಟ್ ವಜ್ರಾಭರಣದ ಮೇಲೆ 25 ಸಾವಿರ ರೂ.ರಿಯಾಯಿತಿ ನೀಡಲಿದೆ. ಒಂದು ಲಕ್ಷ ರೂ.ಗಿಂತ ಮೇಲ್ಪಟ್ಟ ಆಭರಣ ಖರೀದಿಸಿದರೆ ಖಚಿತ ಉಡುಗೊರೆಗಳು ದೊರೆಯಲಿವೆ. ಏ.20ರವರೆಗೆ ಈ ಆಫರ್​​​ ಇರಲಿದೆ. ನವರತನ್ ಅಂಡ್ ಸನ್ಸ್ ಮಳಿಗೆಗೆ ಭೇಟಿ ನೀಡುವ ಗ್ರಾಹಕರಿಗೆ ವಾಹನ ನಿಲುಗಡೆ ಸೌಲಭ್ಯ ಇದೆ. ಇಡೀ ದಿನ ಉಪಾಹಾರದ ಜೊತೆಗೆ ಸ್ನಾಕ್ಸ್ ಸಿಗಲಿದೆ. ಒಂದೇ ಸೂರಿನಡಿ ಬೆಳ್ಳಿ, ವಜ್ರ ಮತ್ತು ಚಿನ್ನಾಭರಣ ಖರೀದಿಸಬಹುದು.
ನವರತನ್ ಅಂಡ್ ಸನ್ಸ್ ವ್ಯವಸ್ಥಾಪಕ ನಿರ್ದೇಶಕ ನಿರ್ಮಲ್ ಕುಮಾರ್ ಬಾಫನಾ ಮಾತನಾಡಿ, ಮಳಿಗೆಯಲ್ಲಿ ಸಾವಿರಕ್ಕೂ ಅಧಿಕ ವಿನ್ಯಾಸದಿಂದ ತಯಾರಿಸಲಾಗಿರುವ ಚಿನ್ನಾಭರಣಗಳನ್ನು ಸಂಗ್ರಹಿಸಲಾಗಿದೆ. ಜುಮುಕಿ, ಕಿವಿಯೋಲೆ, ಡ್ರಾಪ್ಸ್, ಉಂಗುರ, ನೆಕ್ಲೇಸ್, ಕಿವಿಯೋಲೆ, ಬಳೆ, ತೋಳಬಂದಿ, ಡಾಬು, ವಿಕ್ಟೋರಿಯನ್ ಕಲೆಕ್ಷನ್ಸ್, ಆ್ಯಂಟಿಕ್ ಕಲೆಕ್ಷನ್ಸ್, ಪೋಲ್ಕಿ ಮತ್ತು ವಜ್ರದ ವಿವಿಧ ವಿನ್ಯಾಸದ ಬಳೆಗಳಿವೆ. ಪುರುಷರು, ಮಹಿಳೆಯರು ಧರಿಸಬಹುದಾದ ವೈಟ್‌ಗೋಲ್ಡ್, ಮಹಿಳೆಯರಿಗೆ ಒಪ್ಪುವ ರೋಸ್‌ಗೋಲ್ಡ್, ಇಟಾಲಿಯನ್ ಸೆಟ್, ಹೊಸ ಶೈಲಿಯ ವಜ್ರದ ನೆಕ್ಲೆಸ್, ಹಾರ, ಚಾನ್‌ಬಾಲಿ, ಲೈಟ್‌ವೇಟ್ ಚೋಕರ್ಸ್‌, ಪ್ಯೂಷನ್, ಟ್ರೆಡಿಷನಲ್, ಸಾಲಿಟರ್ಸ್, ಬ್ರೈಡಲ್ ಸೆಟ್ಸ್ ವಜ್ರಾಭರಣಗಳಿವೆ ಎಂದರು.
ಮದುವೆ ಸೇರಿ ಇತರ ಶುಭ ಸಮಾರಂಭಗಳಿಗೆ ಧರಿಸುವ ಆಭರಣಗಳಿವೆ. ಯುವಜನತೆಯನ್ನು ಆಕರ್ಷಿಸುವ ಅಂತಾರಾಷ್ಟ್ರೀಯ ಶೈಲಿಯ ವಿನ್ಯಾಸದ ಆಭರಣಗಳ ಸಂಗ್ರಹ ಇದೆ. ಭಾರತೀಯ ಸಂಸ್ಕೃತಿ,ಪಾರಂಪರಿಕ ಶೈಲಿಯ ಆಭರಣ ವಿನ್ಯಾಸಪಡಿಸಿದ್ದೇವೆ. ಬೆಳ್ಳಿಯ ಪೂಜಾ ಸಾಮಾಗ್ರಿಗಳಿವೆ. ಗ್ರಾಹಕರು ಬಂಡವಾಳ ತಕ್ಕಂತೆ ಆಭರಣಗಳನ್ನು ಖರೀದಿಸುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಬಹುದು. ಚಿನ್ನ ಖರೀದಿಸಿದರೆ ಮುಂದೆ ಎದುರಾಗುವ ಕಷ್ಟದ ಸಂದರ್ಭದಲ್ಲಿ ಇದು ನೆರವಾಗಲಿದೆ ಎಂದರು.