ಬೇಲೂರಿನ ದೇವಾಂಗ ಬೀದಿಯಲ್ಲಿರುವ ಚೌಡೇಶ್ವರಿ ಅಮ್ಮನವರನ್ನು 55 ಸೀರೆ ಹಾಗೂ ವಿವಿಧ ಪುಷ್ಪಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. 
ರಾಜ್ಯ

ಚೌಡೇಶ್ವರಿ ದೇವಿಗೆ ಆಕರ್ಷಕ ಅಲಂಕಾರ

ಪ್ರಮುಖ ಮುಖ್ಯಾಂಶಗಳು

  • ಆಷಾಢ ಮಾಸದ ನಾಲ್ಕನೇ ವಾರದ ಪೂಜೆ
  • ದೇವಾಂಗ ಬೀದಿ

ಬೇಲೂರು:

ಆಷಾಢ ಮಾಸದ ನಾಲ್ಕನೇ ವಾರದ ಪೂಜೆ ಅಂಗವಾಗಿ ಪಟ್ಟಣದ ದೇವಾಂಗ ಬೀದಿಯಲ್ಲಿರುವ ಶ್ರೀ ಚೌಡೇಶ್ವರಿ ದೇವಿಯನ್ನು 55 ಸೀರೆ ಹಾಗೂ ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.

ದೇವಾಂಗ ಯುವಕರ ಬಳಗದ ನೇತೃತ್ವದಲ್ಲಿ ವಿಶೇಷ ಪೂಜೆ ಆಯೋಜಿಸಲಾಗಿತ್ತು. ದೇವಿಗೆ ವಿಶೇಷ ಆರತಿ, ಮಂಗಳಾರತಿ ಬಳಿಕ ಪ್ರಸಾದ ವಿತರಣೆ ಮಾಡಲಾಯಿತು.ನೂರಾರು ಭಕ್ತರು ಪೂಜೆಯಲ್ಲಿ ಭಾಗವಹಿಸಿ ಅಮ್ಮನವರ ದರ್ಶನ ಪಡೆದರು.
ದೇವಾಂಗ ಸಂಘದ ಗೌರವಾಧ್ಯಕ್ಷ ಗಿರಿಯಪ್ಪಶೆಟ್ಟಿ ಮಾತನಾಡಿ, ಆಷಾಢ ಮಾಸದಲ್ಲಿ ಚೌಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವುದು ನಮ್ಮ ಸಮಾಜದ ಪರಂಪರೆಯಾಗಿದೆ. ಯುವಕರು ಇಂತಹ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿಯಿಂದ ಪಾಲ್ಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
ದೇವಾಂಗ ಯುವಕರ ಬಳಗದ ವಿಜಯ್ ಮಾತನಾಡಿದರು. ಬಳಗದ ಸದಸ್ಯರಾದ ದಿನೇಶ, ರಾಖೇಶ, ಪುಟ್ಟಣ್ಣ ಇತರರಿದ್ದರು.
.