Attempted murder by kicking a mother in the stomach?
ಚಿಂತಾಮಣಿ: ತಾಲೂಕಿನ ವೆಂಕಟರಾಯನಕೋಟೆ ಗ್ರಾಮದಲ್ಲಿ ಗಂಡನ ಮಮಾರ್ಂಗಕ್ಕೆ ಒದ್ದು ಹೆಂಡತಿಯೇ ಕೊಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.
ಅಸ್ವಸ್ಥಗೊಂಡಿರುವ ಪತಿಯನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ಬೆನ್ನಲ್ಲೇ ಪತ್ನಿಯೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಕೆಯನ್ನು ನೆರೆಹೊರೆಯವರು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.
ದಂಪತಿ ಒಂದೇ ಗ್ರಾಮದವರಾಗಿದ್ದು, 2 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಮದುವೆ ಬಳಿಕ ಇಬ್ಬರ ನಡುವೆ ವೈಮನಸ್ಸು ಮೂಡಿ ಗಲಾಟೆ ಮಾಡಿಕೊಂಡು ಬಟ್ಲಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದರು ಎನ್ನಲಾಗಿದೆ.
ವಿಚ್ಛೇದನ ನೀಡುವಂತೆ ಪತ್ನಿ ಆಗಾಗ್ಗೆ ಪತಿಯನ್ನು ಪೀಡಿಸುತ್ತಿದ್ದಳು. ಇದೇ ವಿಚಾರವಾಗಿ ಹಲವಾರು ಬಾರಿ ಗಲಾಟೆ ಮಾಡಿಕೊಂಡು ಠಾಣೆಗೆ ಹೋಗಿದ್ದು, ಮಧ್ಯವರ್ತಿಗಳು ಮತ್ತು ಪೊಲೀಸರು ಇಬ್ಬರನ್ನು ಸಮಧಾನಪಡಿಸಿ ಕಳುಹಿಸಿದ್ದರು. ಡೈವೋರ್ಸ್ ಕೊಡಲು ಒಪ್ಪದ ಹಿನ್ನೆಲೆಯಲ್ಲಿ ಮಲಗಿದ್ದಾಗ ಮಮಾರ್ಂಗಕ್ಕೆ ಒದ್ದು ಕೊಲೆ ಯತ್ನ ನಡೆಸಿದ್ದಾಳೆ ಎನ್ನಲಾಗಿದೆ.