ಬಲಶೆಟ್ಟಿಹಾಳ ಗ್ರಾಮದ ಬಸವಲಿಂಗ ಶಿವಯೋಗಿಗಳ ವಿರಕ್ತ ಮಠದಲ್ಲಿ ಸಿದ್ಧಲಿಂಗ ದೇವರ ನಿರಂಜನ ಚರಪಟ್ಟಾಧಿಕಾರ ನಿಮಿತ್ತ ಗ್ರಾಮಸ್ಥರು ದುಶ್ಚಟಗಳನ್ನು ತ್ಯಜಿಸಿ ಸಿದ್ದಲಿಂಗ ದೇವರ ಜೋಳಿಗೆಗೆ ಹಾಕಿ ಆಶೀರ್ವಾದ ಪಡೆದರು. ಬಸಯ್ಯಸ್ವಾಮಿ ದೇವತ್ಕಲ್, ನಾಗಭೂಷಣಸ್ವಾಮಿ ದೇವತ್ಕಲ್, ಜಿಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ, ಡಾ.ವೀರಭದ್ರಪ್ಪಗೌಡ ಹೊಸಮನಿ, ಡಾ.ಸಂತೋಷ ಕೊಂಗಂಡಿ, ಭೀಮನಗೌಡ ಬಿರಾದಾರ, ಭೀಮರಾಯ ಸಾಹು, ಶಂಕ್ರಣ್ಣ ಸಾಹು ಇತರರಿದ್ದರು.
- ವಿರಕ್ತ ಮಠದ ಸಿದ್ಧಲಿಂಗ ದೇವರು ಅಭಿಮತ
- >ಪಟ್ಟಾಧಿಕಾರಿ ಮಹೋತ್ಸವ 18ರಂದು
ಕಕ್ಕೇರಾ: ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿದ್ದು, ದೇವರ ಸ್ಮರಣೆ ಮಾಡಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂದು ಬಲಶೆಟ್ಟಿಹಾಳದ ಗ್ರಾಮದ ಬಸವಲಿಂಗ ಶಿವಯೋಗಿಗಳ ವಿರಕ್ತ ಮಠದ ಪೂಜ್ಯ ಸಿದ್ಧಲಿಂಗ ದೇವರು ನುಡಿದರು.
ಬಲಶೆಟ್ಟಿಹಾಳ ಗ್ರಾಮದ ಬಸವಲಿಂಗ ಶಿವಯೋಗಿಗಳ ವಿರಕ್ತಮಠದಲ್ಲಿ ಜೂ.18 ಹಮ್ಮಿಕೊಂಡ ಸಿದ್ದಲಿಂಗ ದೇವರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಭಾನುವಾರ ಸಿದ್ಧಲಿಂಗ ದೇವರು ತಮ್ಮ ಅಪಾರವಾದ ಭಕ್ತರೊಂದಿಗೆ ಬಸವೇಶ್ವರ ಭಾವಚಿತ್ರ ಹಾಗೂ ವಾದ್ಯಮೇಳದೊಂದಿಗೆ ಬಲಶೆಟ್ಟಿಹಾಳ ಗ್ರಾಮದ ಮನೆ&ಮನೆಗೆ ಸಂಚರಿಸಿ ಎಲ್ಲರ ಆರೋಗ್ಯ ವಿಚಾರಿಸಿ, ದುಶ್ಚಟಗಳಿಂದ ದೂರ ಇರುವಂತೆ ಸಲಹೆ ನೀಡಿದರು.
ಆಗ ಗ್ರಾಮದ ನಾಗರೀಕರು, ಯುವಕರು ಇನ್ಮುಂದೆ ನಾವುಗಳು ಬೀಡಿ, ಸಿಗರೇಟು, ತಂಬಾಕು, ಗುಟ್ಕಾ ಮತ್ತು ಮದ್ಯ ಸೇರಿ ಎಲ್ಲ ರೀತಿಯ ದುಶ್ಚಟಗಳನ್ನು ಸ್ವಯಂಪ್ರೇರಿತರಾಗಿ ಇಂದಿನಿಂದಲೇ ತ್ಯಜಿಸಿ ನಾವು ತಮ್ಮ ಬಸವ ಜೋಳಿಗೆಗೆ ಹಾಕಿ ಬಸವಣ್ಣನವರ ಕಾಯಕ ತತ್ವ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಆರೋಗ್ಯಕರ ಜೀವನ ನಡೆಸುತ್ತೇವೆ ಎಂದು ಪೂಜ್ಯರ ಎದುರು ಪ್ರಮಾಣ ಮಾಡಿ ಆಶೀರ್ವಾದ ಪಡೆದರು.
ಸಂಜೆ ಜರುಗಿದ ಕಡಕೋಳ ಮಡಿವಾಳೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಮೂದನೂರಿನ ಕಂಠಿಮಠದ ಪೂಜ್ಯ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿ, ಜೂ.18ರಂದು ವೈಭವದಿಂದ ಜರುಗುವ ಪೂಜ್ಯ ಸಿದ್ಧಲಿಂಗ ದೇವರ ನಿರಂಜನ ಚರಪಟ್ಟಾಧಿಕಾರ ಕಾರ್ಯಕ್ರಮಕ್ಕೆ ಇಡೀ ಬಲಶೆಟ್ಟಿಹಾಳ ಗ್ರಾಮಸ್ಥರು ತನು, ಮನ, ಧನದೊಂದಿಗೆ ಕಂಕಣಬದ್ಧರಾಗಿದ್ದಕ್ಕೆ ಶ್ರೀಮಠದ ಭಕ್ತರನ್ನು ಮುಕ್ತಕಂಠದಿಂದ ಶ್ಲಾಸಿ ಸಿದ್ಧಲಿಂಗ ದೇವರನ್ನು ಸನ್ಮಾನಿಸಿದರು.
ಸಮೀಪದ ದ್ಯಾಮನಾಳ ಗ್ರಾಮಸ್ಥರು ಟ್ರಾಕ್ಟರ್ನಲ್ಲಿ 1.20 ಕ್ವಿಂಟಾಲ್ ಮಾದಲಿಯನ್ನು ಮಠಕ್ಕೆ ಸಮರ್ಪಿಸಿದರು. ಜಿಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ ಸೇರಿ ಅನೇಕರು ಶ್ರೀಮಠದ ದಾಸೋಹಕ್ಕೆ ನೀಡಿದರು.
ಬಸಯ್ಯಸ್ವಾಮಿ ದೇವತ್ಕಲ್, ನಾಗಭೂಷಣಸ್ವಾಮಿ ದೇವತ್ಕಲ್, ಜಿಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ, ಡಾ.ವೀರಭದ್ರಪ್ಪಗೌಡ ಹೊಸಮನಿ, ಡಾ.ಸಂತೋಷ ಕೊಂಗಂಡಿ, ಭೀಮನಗೌಡ ಬಿರಾದಾರ, ಭೀಮರಾಯ ಸಾಹು, ಶಂಕ್ರಣ್ಣ ಸಾಹು, ಸಾಯಬಣ್ಣ ಮುತ್ಯಾ ಬಬಲಾದಿ, ಗುರು ಹುಲಕಲ್, ಬಲಭೀಮರಾಜ ಗುಂಡಿ, ಜಟ್ಟೆಪ್ಪಗೌಡ ಪಾಟೀಲ್, ಹಣಮಂತ್ರಾಯ ಮಾರಲಭಾವಿ, ಕೃಷ್ಣಪ್ಪಗೌಡ ಮಾಲಿ ಪಾಟೀಲ್, ಕಾಶೀನಾಥ ಬಿರಾದಾರ ಇತರರಿದ್ದರು.
ಬಸವರಾಜ ಭದ್ರಗೋಳ ಸ್ವಾಗತಿಸಿದರು. ಷಣ್ಮುಖ ನುಚ್ಚಿ ನಿರೂಪಣೆ ಮಾಡಿ ವಂದಿಸಿದರು.