Attack on Kai leader with a water cannon
ಬಾಗೇಪಲ್ಲಿ: ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸಮರ್ಪಕವಾಗಿ ಪೂರೈಸುವಂತೆ ತಾಕೀತು ಮಾಡಿದ ಕಾಂಗ್ರೆಸ್ ಮುಖಂಡನ ಮೇಲೆ ಗುರುವಾರ ನೀರಗಂಟಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಕಾನಗಮಾಕಲಪಲ್ಲಿ ಗ್ರಾಮದಲ್ಲಿ ನೀರಿನ ಘಟಕದಿಂದ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ ಎಂದು ಕೈ ಮುಖಂಡ ರವೀಂದ್ರನಾಥ್ ಗ್ರಾಪಂ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಪಂ ಸಿಬ್ಬಂದಿ ರಾಮರೆಡ್ಡಿ ಗ್ರಾಮದಲ್ಲಿ ಪರಿಶೀಲಿಸಿ ನೀರಿನ ಘಟಕದಲ್ಲಿ ಸ್ವಚ್ಛತೆ ಕಾಪಾಡಿ ನೀರು ಪೂರೈಸುವಂತೆ ನೀರಗಂಟಿ ಗಣೇಶ್ಗೆ ಸೂಚಿಸಿದ್ದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ರವೀಂದ್ರನಾಥ್, ನೀರು ಸರಬರಾಜು ಮಾಡುವಲ್ಲಿ ನೀರಗಂಟಿ ರ್ನಿಲಕ್ಷ$್ಯ ವಹಿಸಿದ್ದಾರೆ. ಪ್ರತಿನಿತ್ಯ ಬೆಳಗ್ಗೆ, ಸಂಜೆ ನೀರು ಬಿಡುವಂತೆ ನೀರಗಂಟಿಗೆ ತಾಕೀತು ಮಾಡುತ್ತಿದ್ದಂತೆ ಗ್ರಾಪಂ ಸಿಬ್ಬಂದಿ ಸಮ್ಮುಖದಲ್ಲೇ ಕಲ್ಲಿನಿಂದ ತಲೆಗೆ ಹೊಡೆದು ಪರಾರಿಯಾಗಿದ್ದಾನೆ. ರವೀಂದ್ರನಾಥ್ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗಣೇಶ್ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಿದ್ದಾರೆ.