ಅಥ್ಲೀಟ್ ಕಾರ್ತಿಕ್ ಜೋಶಿ  
ರಾಜ್ಯ

2 ಸಾವಿರ ಕಿಮೀ ತಲುಪಿಸಿದ ಅಥ್ಲೀಟ್ ಕಾರ್ತಿಕ್ ಜೋಶಿ: ಕಾರ್ಗಿಲ್‌ನಿಂದ ಕನ್ಯಾಕುಮಾರಿವರೆಗೆ ಓಟ- Athlete Karthik Joshi

ಹರೀಶ್​​ ಕೆ.ಸಿ.
ಮುಂಬೈ: ಭಾರತದ ಅತ್ಯಂತ ಕಠಿಣ ರನ್ನಿಂಗ್ ಸವಾಲುಗಳಲ್ಲಿ ಒಂದಾದ ‘ಕಾರ್ಗಿಲ್‌ನಿಂದ ಕನ್ಯಾಕುಮಾರಿ’ (ಕೆ2ಕೆ) ಸುದೀರ್ಘ ಓಟದಲ್ಲಿ ಅಥ್ಲೀಟ್ ಕಾರ್ತಿಕ್ ಜೋಶಿ, 2 ಸಾವಿರ ಕಿಮೀ ಕ್ರಮಿಸುವ ಮೂಲಕ ಮೈಲಿಗಲ್ಲು ಸಾಧಿಸಿದ್ದಾರೆ.
‘ಸ್ಕೆಚರ್ಸ್’ ಸಂಸ್ಥೆ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಈ ಸಾಹಸಯಾತ್ರೆ, ಇದೀಗ ಮಹಾರಾಷ್ಟ್ರ ಪ್ರವೇಶಿಸಿದೆ. ಮುಂಬೈ ಮತ್ತು ಥಾಣೆಯ ಓಟಗಾರರ ಸಮೂಹ ಕಾರ್ತಿಕ್‌ನನ್ನು ಆತ್ಮೀಯವಾಗಿ ಬರಮಾಡಿಕೊಂಡಿದೆ.
ಮೇ 2ರಂದು ಕಾರ್ಗಿಲ್ ಯುದ್ಧ ಸ್ಮಾರಕದಿಂದ ಈ ಓಟ ಆರಂಭಿಸಿದ ಕಾರ್ತಿಕ್, ಒಟ್ಟು 4,200 ಕಿಮೀ ದೂರ ಕ್ರಮಿಸುವ ಗುರಿ ಹೊಂದಿದ್ದಾರೆ. ಪ್ರತಿದಿನ ಸರಾಸರಿ 70ರಿಂದ 80 ಕಿಮೀ ಓಡುತ್ತಿರುವ ಅವರು, ಕೇವಲ 55 ದಿನಗಳಲ್ಲಿ ಪ್ರಯಾಣವನ್ನು ಮುಗಿಸಿ ಹೊಸ ದಾಖಲೆ ಬರೆಯುವ ಉತ್ಸಾಹದಲ್ಲಿದ್ದಾರೆ. ಪರ್ವತ ರಸ್ತೆಗಳು, ಕಠಿಣ ಭೂಪ್ರದೇಶಗಳು ಮತ್ತು ಬದಲಾಗುವ ಹವಾಮಾನದ ನಡುವೆಯೂ ಅವರು ಯಶಸ್ವಿಯಾಗಿ ಮುನ್ನಡೆಯುತ್ತಿದ್ದಾರೆ.
ಇಡೀ ಓಟದುದ್ದಕ್ಕೂ ಕಾರ್ತಿಕ್ ಜೋಶಿ, ಸ್ಕೆಚರ್ಸ್ ಕಂಪನಿಯ ಏರೋ ಸೀರೀಸ್ ರನ್ನಿಂಗ್ ಶೂ ಧರಿಸಿದ್ದಾರೆ. ವಿಶೇಷವಾಗಿ ’ಸ್ಕೆಚರ್ಸ್ ಏರೋ ಬರ್ಸ್ಟ್’ ಮತ್ತು ‘ಏರೋ ಸ್ಪಾರ್ಕ್’ ಶೂಗಳು ಈ ಕಠಿಣ ಪ್ರಯಾಣದಲ್ಲಿ ಅವರಿಗೆ ಅತ್ಯುತ್ತಮ ಆರಾಮದಾಯಕತೆ ಹಾಗೂ ಅದ್ಭುತ ಪ್ರದರ್ಶನ ನೀಡಲು ಸಹಾಯ ಮಾಡುತ್ತಿವೆ. ಸ್ಕೆಚರ್ಸ್‌ನ ಅತ್ಯಾಧುನಿಕ ರನ್ನಿಂಗ್ ಶೂಗಳನ್ನು ಓಟಗಾರರ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಸ್ಕೆಚರ್ಸ್ ದಕ್ಷಿಣ ಏಷ್ಯಾ ಪ್ರೈ.ಲಿ.ನ ಸಿಇಒ ರಾಹುಲ್ ವೀರಾ ಹೇಳಿದ್ದಾರೆ.