Atal Ji's inspiration for Modi's work
ಕೊರಟಗೆರೆ: ಅಟಲ್ ಬಿಹಾರಿ ವಾಜಪೇಯಿ ಅವರು ದೇಶ ಕಂಡ ಅಪರೂಪದ ನಾಯಕ. ರಾಜಕೀಯದಲ್ಲಿ ಶುದ್ಧತೆ, ಮಾತಿನಲ್ಲಿ ಸಂಯಮ ಹಾಗೂ ಆಡಳಿತದಲ್ಲಿ ದೃಢತೆ ಅವರ ವ್ಯಕ್ತಿತ್ವದ ಪ್ರಮುಖ ಲಣಗಳಾಗಿದ್ದವು. ವಿರೋಧಿಗಳಿಂದಲೂ ಗೌರವ ಪಡೆದ ಮಹಾನ್ ರಾಜಕಾರಣಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಅಂಗವಾಗಿ ಕೊರಟಗೆರೆ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾಜಪೇಯಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು,
ಸ್ವರ್ಣ ಚತುಷ್ಪಥ ಯೋಜನೆ, ಗ್ರಾಮೀಣ ರಸ್ತೆ ಅಭಿವೃದ್ಧಿ, ಅಣುಶಕ್ತಿ ಪರೀೆ ಮೂಲಕ ಭಾರತದ ಶಕ್ತಿ ಪ್ರದರ್ಶನ ಸೇರಿದಂತೆ ಅನೇಕ ಐತಿಹಾಸಿಕ ರ್ನಿಣಯಗಳನ್ನು ವಾಜಪೇಯಿ ಅವರು ಕೈಗೊಂಡರು. ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳಿಗೆ ಅಟಲ್ ಜೀ ಅವರ ದೂರದೃಷ್ಟಿಯೇ ಮೂಲ ಪ್ರೇರಣೆ ಎಂದು ಹೇಳಿದರು.
ರಾಜಕೀಯದಲ್ಲಿ ಸೌಜನ್ಯ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಿದ ವಾಜಪೇಯಿ ಅವರ ಆದರ್ಶಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ತಾಲೂಕು ಬಿಜೆಪಿ ಅಧ್ಯ ರುದ್ರೇಶ್ ಮಾತನಾಡಿ, ನವ ಭಾರತ ನಿರ್ಮಾಣದ ನಿರ್ಮಾತೃ ವಾಜಪೇಯಿಯವರಾಗಿದ್ದು, ಅವರ ಕಾರ್ಯ ವೈಖರಿ ಪ್ರತಿಯೊಬ್ಬ ರಾಜಕಾರಣಿಗೂ ಅನುಕರಣಿಯ ಎಂದರು.
ತಾಲೂಕು ಜೆಡಿಎಸ್ ಅಧ್ಯ ಜಿ.ಎಂ.ಕಾಮರಾಜು ಮಾತನಾಡಿ, ದೇಶದಲ್ಲಿ ಅಜಾತಶತ್ರುವಾಗಿ ರಾಜಕಾರಣ ಮಾಡಿದ ಏಕೈಕ ವ್ಯಕ್ತಿ ಎಂದರೆ ಅದು ವಾಜಪೇಯಿ. ಇಂದು ಪ್ರತಿಯೊಬ್ಬ ರಾಜಕಾರಣಿಯು ಅವರ ಸ್ನೇಹ ಭಾವದ ನಡಿಯನ್ನು ರೂಡಿಸಿಕೊಂಡು ಪ್ರಗತಿಗೆ ಶ್ರಮಿಸಬೇಕು ಎಂದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಮಹೇಂದ್ರ, ಪಪಂ ಸದಸ್ಯ ಕೆ.ಎನ್.ಲ್ಮನಾರಾಯಣ, ಪಪಂ ಮಾಜಿ ಸದಸ್ಯ ಸುಶೀಲಮ್ಮ, ಮುಖಂಡರಾದ ವಿಜಯಣ್ಣ, ವಿ.ಕೆ.ವೀರಕ್ಯಾತರಾಯ, ಕೊಡ್ಲಹಳ್ಳಿ ವೆಂಕಟೇಶ್ ಹಾಗೂ ಬಿಜೆಪಿ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು. ವಾಜಪೇಯಿ ಜನ್ಮದಿನದ ಅಂಗವಾಗಿ ಬಿಜೆಪಿ ಕಚೇರಿ ಆವರಣದಲ್ಲಿ ಗಿಡ ನೆಡಲಾಯಿತು.