ಕಲಬುರಗಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಡಾ.ದಶರಥ ನಾಮದಾರ ಅವರನ್ನು ಸನ್ಮಾನಿಸಲಾಯಿತು. ತೊನಸನಳ್ಳಿ ಶ್ರೀ ಡಾ.ಮಲ್ಲಣ್ಣಪ್ಪ ಮುತ್ಯಾ,ಡಾ.ಪ್ರಭಾಕರ ಕಶ್ಯಪ್​, ಶಾಂತಕುಮಾರ ಬಿಲಗುಂದಿ, ವೀಣಾ ಬಸವರಾಜ ಯರಗೋಳ, ಬಸವರಾಜ ಇಂಗಿನ್​, ಶಿವಕುಮಾರ ಪಸಾರ ಇತರರಿದ್ದರು. 
ರಾಜ್ಯ

ವರ್ತಮಾನ ತಿಳಿಸುವುದಷ್ಟೇ ಜ್ಯೋತಿಷ್ಯ ಶಾಸ್ತ್ರ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಡಾ.ಪ್ರಭಾಕರ ಕಶ್ಯಪ್​ ಅಭಿಮತ
  • ದಶರಥ ನಾಮದಾರ ಗಚ್ಚಿನಮಠಗೆ ಅಭಿನಂದನೆ
ಕಲಬುರಗಿ: ಜ್ಯೋತಿಷ್ಯ ಶಾಸ್ತ್ರ ವರ್ತಮಾನ ತಿಳಿಸುತ್ತದೆ ಹೊರತು, ವಿಧಿಲಿಖಿತ ಬದಲಾಯಿಸಲು ಸಾಧ್ಯವಿಲ್ಲ. ಹೀಗಾಗಿ ಮುಂದೆ ನಡೆಯುವ ಟನೆಗಳನ್ನು ಅರಿತು ಜೀವನ ಸಾಗಿಸಬೇಕು. ದೇವರಲ್ಲಿ ಮೊರೆ ಹೋಗಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಪ್ಲೋರಿಡಾದ ಯೋಗ ಸಂಸ್ಕೃತಿಕ ಧಾರ್ಮಿಕ ವಿಶ್ವವಿದ್ಯಾಲಯ ಉಪಕುಲಪತಿ, ಬೆಂಗಳೂರಿನ ಸ್ಕೋಪ್​ ಜ್ಯೋತಿಷ್ಯ ಸಂಸ್ಥೆ ಸಂಸ್ಥಾಪಕ ಡಾ.ಪ್ರಭಾಕರ ಕಶ್ಯಪ್​ ಹೇಳಿದರು.
ಹಳೇ ಜೇವರ್ಗಿ ರಸ್ತೆಯ ಖಾಸಗಿ ಹೋಟೆಲ್​ನಲ್ಲಿ ಮಾನಸವೀಣೆ ವಿದ್ಯಾ ಸಂಸ್ಥೆ, ಪ್ರೊ.ಎಸ್​.ಎಸ್​. ಆಲಗೂರ ಪ್ರತಿಷ್ಠಾನ ಹಾಗೂ ಸ್ನೇಹಿತರ ಒಕ್ಕೂಟದ ಸಹಯೋಗದಡಿ ಭಾನುವಾರ ಏರ್ಪಡಿಸಿದ್ದ ಜ್ಯೋತಿಷ್ಯ ಶಾಸದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ ಪಿಎಚ್​.ಡಿ ಪಡೆದ ನ್ಯಾಯವಾದಿ ಡಾ.ದಶರಥ ಎಸ್​.ನಾಮದಾರ ಮತ್ತು ಡಾ.ಶಿವಕುಮಾರ ಗಚ್ಚಿನಮಠ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಯೋತಿಷಿಗಳಿಗೆ ಹಿಂದಿನ ಕಾಲದಲ್ಲಿ ರಾಜಾಶ್ರಯವಿತ್ತು. ಹೀಗಾಗಿ ಜನಸಾಮಾನ್ಯರ ಬಳಿ ನೆರವು ಕೇಳುವ ಅಗತ್ಯವಿರಲಿಲ್ಲ. ಈಗ ಆಳ್ವಿಕೆ ನಡೆಸುವರು ಜ್ಯೋತಿಷ್ಯ ಮೌಢ್ಯ ಎಂದು ಹೇಳುತ್ತ ತಿರುಗಾಡುತ್ತಿದ್ದಾರೆ. ಆದರೆ ಹಿಂಬಾಗಿಲಿನಿಂದ ಬಂದು ಜೋತಿಷ್ಯ ಕೇಳುತ್ತಾರೆ. ಹೀಗಾಗಿ ಜನರ ಬಳಿ ಅಲ್ಪಸ್ವಲ್ಪ ಹಣ ಪಡೆದು ಜ್ಯೋತಿಷ್ಯ ಹೇಳುವಂತಾಗಿದೆ ಎಂದರು.
ಹೈಕೋರ್ಟ್​ನ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ವರ್ಚುವಲ್​ ಮೂಲಕ ಮಾತನಾಡಿ, ಕಾರ್ಯಕ್ರಮ ಆಯೋಜಿಸಿದ್ದನ್ನು ಶ್ಲಾಘಿಸಿದರು.
ತೊನಸನಹಳ್ಳಿ ಶ್ರೀ ಡಾ.ಮಲ್ಲಣ್ಣಪ್ಪ ಮಹಾಸ್ವಾಮೀಜಿ ಸಾನ್ನಿಧ್ಯ, ಮಾನಸ ವೀಣೆ ಸಂಸ್ಥೆ ಅಧ್ಯಕ್ಷೆ ವೀಣಾ ಬಸವರಾಜ ಯರಗೋಳ ಅಧ್ಯಕ್ಷತೆ ವಹಿಸಿದ್ದರು. ಗಣೇಶ ಸಹಕಾರ ಬ್ಯಾಂಕ್​ ಅಧ್ಯ ಶಾಂತಕುಮಾರ ಬಿಲಗುಂದಿ, ಜಿಲ್ಲಾ ವಕೀಲರ ಸಂದ ಅಧ್ಯ ಶಿವಕುಮಾರ ವಿ.ಪಸಾರ, ರೈತ ಹೋರಾಟಗಾರ ಬಸವರಾಜ ಇಂಗಿನ್​, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯ ಬಾಬುರಾವ ಯಡ್ರಾಮಿ, ಸಮಿತಿ ಸಂಚಾಲಕ ಶರಣಗೌಡ ಮಲಘಾಣ ದೊಡ್ಡಪೂಜಾರಿ ಇತರರಿದ್ದರು.
ಪ್ರಮುಖರಾದ ಬಸವರಾಜ ವಾಲಿ, ಬಿ.ಎಂ. ರಾವೂರ, ನಾಗರಾಜ ಕಟ್ಟಿಮನಿ, ಗೋಪಾಲಕೃಷ್ಣ ಯಾದವ್​, ಅನೀಲ್​ ಕಾಂಬಳೆ, ಎ.ಆರ್​. ಹಂಡಿ, ಶರಣಗೌಡ ಬಸವರಾಜ, ರವೀಂದ್ರ ಪಾಟೀಲ್​, ಜ್ಯೋರ್ತಿಲಿಂಗ ಚಿಕ್ಕಮಠ, ಗಂಗಾಧರ ಇಜೇರಿ, ಮಲ್ಲಾರೆಡ್ಡಿ ಮಲ್ಲಾಬಾದ್​, ಬಸವರಾಜ ಉಪ್ಪಿನ್​, ಡಾ.ನಾನಾಗೌಡ, ಶ್ರೀಮಂತ ಹೆಳವರ, ಎಲ್​.ಬಿ. ಹಿಟ್ಟಿನ್​, ಎಸ್​.ಪಿ. ಸಾತನೂರ ಇತರರಿದ್ದರು.
ಬಾಬುರಾವ ಜಮಾದಾರ ಬಾದನಳ್ಳಿ ಸ್ವಾಗತಿಸಿದರು. ಚಾಮುಂಡೇಶ್ವರಿ ಶಾಲೆ ವಿದ್ಯಾರ್ಥಿಗಳಾದ ಅನುಶ್ರೀ ಮತ್ತು ದಿವ್ಯಶ್ರೀ ಪ್ರಾರ್ಥಿಸಿದರು. ಭವಾನಿ, ದೀಪಿಕಾ ಗಣೇಶ ಸ್ತೋತ್ರಕ್ಕೆ ನೃತ್ಯ ಮಾಡಿದರು. ಡಾ.ಭೀಮರಾವ ಅರಿಕೇರಿ ಮತ್ತು ಸಿದ್ದರಾಮಪ್ಪ ಪಾಪಣಿ ಅಭಿನಂದಿತರನ್ನು ಪರಿಚಯಿಸಿದರು. ಬಸವರಾಜ ಮಹಾಗಾಂವ ಮತ್ತು ಸಾ ಗೋಟೂರ ನಿರೂಪಣೆ ಮಾಡಿದರು.

ಆಧುನಿಕ ಸಮಾಜದ ನಾಗರಿಕರು ಶಾಂತಿ ಸಮಾಧಾನ ಮೈಗೂಡಿಸಿಕೊಂಡು ಸಂಪ್ರದಾಯಗಳನ್ನು ಆಚರಣೆಗೆ ತಂದಾಗ ಮಾತ್ರ ಧರ್ಮದ ಬಗ್ಗೆ ಅರಿವು ಮೂಡಲು ಸಾಧ್ಯ.ದೇವರನ್ನು ಟೀಕಿಸುವುದರಿಂದ ಪ್ರಯೋಜವಿಲ್ಲ. ಜ್ಯೋತಿಷ್ಯ ಶಾಸ್ತ್ರ ಅರಿತುಕೊಂಡು ಜೀವನ ಸಾಗಿಸಿದರೆ ಒಳಿತಾಗುತ್ತದೆ.

> ಶ್ರೀ ಡಾ.ಮಲ್ಲಣ್ಣಪ್ಪ ಮಹಾಸ್ವಾಮೀಜಿ

ಅಲ್ಲಮಪ್ರಭು ಸಂಸ್ಥಾನ ಮಠ ತೊನಸನಹಳ್ಳಿ