ಭಾರತೀಯ ಜ್ಯೋತಿಷ್ಯ ಸಂಸ್ಥಾನ ಮತ್ತು ಭಾರತಿ ವಿದ್ಯಾ ಭವನ ಸಹಯೋಗದಲ್ಲಿ ಹಮ್ಮಿಕೊಂಡಿಂದ್ದ ಜ್ಯೋತಿಷ್ಯ ಸಮ್ಮೇಳನ
ಬೆಂಗಳೂರು: ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ಜ್ಯೋತಿಷ್ಯ ಶಾಸ್ತ್ರದ ಪರಿಚಯ ಮಾಡಿದ್ದರೆ ಇಂದು ಜ್ಯೋತಿಷ್ಯ ಆಯುರ್ವೇದ ಒಂದೇ ನಾಣ್ಯದ ಎರಡು ಮುಖವಾಗುತ್ತಿತ್ತು . ಆದರೆ, ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ಜ್ಯೋತಿಷ್ಯದ ಮರೆಯಾಗಿರುವುದು ವಿಷಾಧಕರ ಎಂದು ಶ್ರೀ ಗಜೇಂದ್ರ ಬಾಬು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತೀಯ ಜ್ಯೋತಿಷ್ಯ ಸಂಸ್ಥಾನ ಮತ್ತು ಭಾರತಿ ವಿದ್ಯಾ ಭವನ ಸಹಯೋಗದಲ್ಲಿ ಹಮ್ಮಿಕೊಂಡಿಂದ್ದ ಜ್ಯೋತಿಷ್ಯ ಸಮ್ಮೇಳನದಲ್ಲಿ ಮಾತನಾಡಿದರು.
ಪಂಚಾಂಗ, ಜ್ಯೋತಿಷ್ಯ ಶಾಸ್ತ್ರದ ಕೊಡುಗೆ ಆರ್ಥಿಕ ಮತ್ತು ಉದ್ಯೋಗ ವಲಯದಲ್ಲಿ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಇತ್ತೀಚೆಗೆ ಒಂದು ಸಂಶೋಧನಾ ವರದಿ ತಿಳಿಸಿದೆ. ಮಹಾ ಕುಂಭಾಭಿಷೇಕ ನಡೆದಿದ್ದು ಕೂಡ ಅದರ ಬುನಾದಿ ಜ್ಯೋತಿರ್ ವಿಜ್ಞಾನ ನಂತರ ದೇಶದಲ್ಲಿ ನಡೆಯುವ ವಿವಾಹ ಹಾಗೂ ಹಬ್ಬ ಹರಿದಿನಗಳಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 80,000 ಕೋಟಿ ಬರಲಿದೆ ಎಂದು ಸಭೆಗೆ ತಿಳಿಸಿದರು.
ಅಕ್ಷಯ ತೃತೀಯ ದಿನದಂದು ಚಿನ್ನದ ವ್ಯಾಪಾರ ಇದರ ಹಿನ್ನೆಲೆ ಪಂಚಾಂಗ ಹಾಗೂ ಇದರ ಕೊಡುಗೆ ಜ್ಯೋರ್ತಿವಿಜ್ಞಾನ ಆದುದರಿಂದ ಜ್ಯೋತಿರ್ವಿಜ್ಞಾನವನ್ನು ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುವುದಕ್ಕೆ ಅನುಕೂಲ ಮಾಡಲಾಗಿದೆ ಮೊಘಲರ ಕಾಲದಲ್ಲಿ ಕೂಡ ಮೊಘಲರು ಜ್ಯೋತಿಷಿಗಳ ಸಲಹೆ ಪಡೆದರೆ ಎಂಬುದು ಇತ್ತೀಚೆಗೆ ಜಯ ಅಕ್ಬರ್ ಅವರು ಬರೆದ ಪುಸ್ತಕದಲ್ಲಿ ದಾಖಲಾಗಿದೆ ಎಂಬುದು ಆಶ್ಚರ್ಯಕರ ಸಂಗತಿ ಎಂದು ಹೇಳಿದರು.