ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ಜು. 6ರಂದು ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬೆಳ್ಳಿ ಮೂರ್ತಿ ಕಳ್ಳತನ ಹಿನ್ನೆಲೆ ದೇವಸ್ಥಾನಕ್ಕೆ ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ, ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ, ಬಸವನ ಬಾಗೇವಾಡಿ ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಮುದ್ದೇಬಿಹಾಳ ಸಿಪಿಐ ಮಹಮ್ಮದ ಸಿಯುದ್ದಿನ್, ಕ್ರೈಂ ಪಿಎಸ್‌ಐ ಆರ್.ಎಸ್. ಭಂಗಿ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.
- ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಭೇಟಿ
- ದೇವಸ್ಥಾನ ಸಮಿತಿಯಿಂದ ಮಾಹಿತಿ ಸಂಗ್ರಹ
ಢವಳಗಿ : ದೇವಸ್ಥಾನದ ಮೂರ್ತಿ ಕಳ್ಳತನಕ್ಕೆ ಸಂಬಂಧಿಸಿದ ಹಾಗೆ ತನಿಖೆಗೆ ಹಲವಾರು ತಂಡಗಳನ್ನು ರಚಿಸಿ ಸಾಕಷ್ಟು ತನಿಖೆ ಮಾಡಿದ್ದಾರೆ. ನಮಗೆ ಕೆಲವೊಂದು ಕುರುಹುಗಳು ಸಿಕ್ಕಿವೆ. ದೇವಸ್ಥಾನದ ಸಾಕಷ್ಟು ಭಕ್ತರಿಗೆ ಮೂರ್ತಿ ಕಳ್ಳತನಕ್ಕೆ ಅನೇಕ ಭಕ್ತರ ಮನಸ್ಸಿಗೆ ನೋವಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಆದಷ್ಟು ಬೇಗ ಪತ್ತೆ ಹಚ್ಚುತ್ತೇವೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ಹೇಳಿದರು.
ಸಮೀಪದ ಬಸರಕೋಡ ಗ್ರಾಮದಲ್ಲಿ ಜು. 6ರಂದು ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಬೆಳ್ಳಿ ಮೂರ್ತಿ ಕಳ್ಳತನ ಹಿನ್ನೆಲೆ ದೇವಸ್ಥಾನಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ದೇವಸ್ಥಾನದ ಸಮಿತಿಯಿಂದ ಮಾಹಿತಿ ಸಂಗ್ರಹಿಸಿ ಮಾತನಾಡಿದರು.
ದೇವಸ್ಥಾನದ ಅಧ್ಯಕ್ಷ ಕೆ.ವೈ. ಬಿರಾದಾರ, ಸದಸ್ಯ ಶ್ರೀಶೈಲ ಮೇಟಿ ಮಾತನಾಡಿ, ಪವಾಡ ಬಸವೇಶ್ವರ ಮೂರ್ತಿ ಕಳ್ಳತನವಾದ ದಿನದಿಂದ ದೇವಸ್ಥಾನಕ್ಕೆ ಪೊಲೀಸರು ತಮ್ಮ ಆಯಾಮದಲ್ಲಿ ಸಾಕಷ್ಟು ತನಿಖೆ ಮಾಡುತ್ತಿದ್ದಾರೆ. ದೇವಸ್ಥಾನಕ್ಕೆ ಒಂದೂವರೆ ಲಕ್ಷ ಮೌಲ್ಯದ ಹೊಸದಾಗಿ 15 ಸಿಸಿ ಕ್ಯಾಮರಾ ಆಳವಡಿಸಲಾಗುತ್ತದೆ ಎಂದು ತಿಳಿಸಿದರು.
ವಿಜಯಪುರ ವಿಜಯಪುರ ಎಸ್‌ಪಿ ಲಕ್ಷ್ಮಣ ನಿಂಬರಗಿ, ಬಸವನ ಬಾಗೇವಾಡಿ ಡಿವೈಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಮುದ್ದೇಬಿಹಾಳ ಸಿಪಿಐ ಮಹಮ್ಮದ ಸಿಯುದ್ದಿನ್, ಕ್ರೈಂ ಪಿಎಸ್‌ಐ ಆರ್.ಎಸ್. ಭಂಗಿ ಸೇರಿ ಸಿಬ್ಬಂದಿ ಹಾಗೂ ದೇವಸ್ಥಾನ ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ಇದ್ದರು.