ಆರ್ಥಿಕ ಅಭಿವೃದ್ಧಿಗೆ ಸಂಘಗಳು ಸಹಕಾರಿ economic  
ರಾಜ್ಯ

ಆರ್ಥಿಕ ಅಭಿವೃದ್ಧಿಗೆ ಸಂಘಗಳು ಸಹಕಾರಿ economic

ಚಿಕ್ಕಬಳ್ಳಾಪುರ ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ಶಾಸಕ ಕೆ.ಎಚ್​.ಪುಟ್ಟಸ್ವಾಮಿಗೌಡ ಅಭಿಮತ
ಗೌರಿಬಿದನೂರು: ಸಹಕಾರ ಸಂಘಗಳಿಂದ ರೈತರು, ಮಹಿಳೆಯರ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯ ಎಂದು ಶಾಸಕ ಕೆ.ಎಚ್​.ಪುಟ್ಟಸ್ವಾಮಿಗೌಡ ಹೇಳಿದರು. economic
ನಗರದ ಡಿಸಿಸಿ ಬ್ಯಾಂಕ್​ ಕಚೇರಿಯ ದಿ.ಎನ್​.ಸಿ.ನಾಗಯ್ಯರೆಡ್ಡಿ ಸಭಾಂಗಣದಲ್ಲಿ ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆಯಿಂದ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ- ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ ಭಾರತದ ಅಭ್ಯುದಯಲ್ಲಿ ಸಹಕಾರ ಕ್ಷೇತ್ರದ ಮಹತ್ವ ತಿಳಿದ ಪ್ರಧಾನಿ ನೆಹರು ಸಹಕಾರ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡಿದರು. ಈ ನಿಟ್ಟಿನಲ್ಲಿ ಅವರ ಜನ್ಮ ದಿನದಿಂದ ಸಪ್ತಾಹ ಆಚರಿಸಲಾಗುತ್ತದೆ ಎಂದರು.
ಸಹಕಾರಿ ಕ್ಷೇತ್ರ ಸಾಕಷ್ಟು ಪ್ರಗತಿ ಸಾಧಿಸಿದ್ದು, ಕೃಷಿ, ತೋಟಗಾರಿಕೆ, ಕೈಗಾರಿಕಾ ಉತ್ಪಾದನೆ, ಹಾಲು, ಹಣ್ಣು, ತರಕಾರಿ, ರಸಗೊಬ್ಬರ, ರೇಷ್ಮೆ, ಗೃಹ ನಿಮಾರ್ಣ ನೇಕಾರಿಕೆ, ಮೀನುಗಾರಿಕೆ ನಿರ್ವಹಣೆ ಮುಂದಾದ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ. ಸಂಘಗಳಲ್ಲಿ ಕೃಷಿಗೆ ಅಗತ್ಯ ಪರಿಕರ, ರಸಗೊಬ್ಬರ ರಿಯಾಯಿತಿ ದರದಲ್ಲಿ ಸಿಗುವಂತಾಗಬೇಕು. ಬೆಳೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಾಗಬೇಕು. ಆಗ ರೈತರ ಕೃಷಿ ಚಟುವಟಿಕೆಗಳ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದಲು ನೆರವಾಗುತ್ತದೆ ಎಂದರು.
ಡಿಸಿಸಿ ನಿರ್ದೇಶಕ ಜೆ.ವಿ.ಹನುಮೇಗೌಡ ಮಾತನಾಡಿ, ಸಂಘಗಳಿಂದ ಮಹಿಳೆಯರ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ಸರ್ಕಾರ ಸರ್ವರ ಅಭಿವೃದ್ಧಿಗೆ ಪಕ್ಷಾತಿತ, ಜಾತ್ಯಾತಿತವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದರು.
ಕೆ.ಎನ್​.ವೆಂಕಟರಾಮರೆಡ್ಡಿ ಮಾತನಾಡಿ, ದೇಶದಲ್ಲಿ ಎಂಟುವರೆ ಲಕ್ಷ ಸಹಕಾರ ಸಂಘಗಳು ದೇಶ ಕಟ್ಟುವಲ್ಲಿ ತೊಡಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಹಕಾರ ಸಂಘಗಳಿಂದ ಸಾಲ ನೀಡಿ ಬೆಂಬಲಿಸುತ್ತಿದೆ ಎಂದರು.ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಷ್​.ವಿ.ನಾಗರಾಜ್​ ಮಾತನಾಡಿದರು.ಸಹಕಾರ ಕ್ಷೇತ್ರದಲ್ಲಿ ಸಾಧಿಸಿದವರನ್ನು ಶಾಸಕರು ಸನ್ಮಾನಿಸಿಸಿದರು.
ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಆರ್​.ಮುರಳಿ, ನಿರ್ದೇಶಕರಮಣಾ ರೆಡ್ಡಿ, ಮಧುಸೂದನ ರೆಡ್ಡಿ, ಸಿ.ಎಚ್​.ಪ್ರಕಾಶ್​, ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರ್​ ರೆಡ್ಡಿ, ಪಿಎಲ್​ಡಿ ಬ್ಯಾಂಕ್​ ಅಧ್ಯಕ್ಷ ಟಿ.ಕೆ.ವಿಜಯರಾಘವ, ಡಿಸಿಸಿ ಬ್ಯಾಂಕ್​ ವ್ಯವಸ್ಥಾಪಕ ಮಹಮದ್​ ಅಸ್ಲಾಂ, ಪಿಎಲ್​ಡಿ ಬ್ಯಾಂಕ್​ ವ್ಯವಸ್ಥಾಪಕಿ ಜಿ.ಆರ್​.ಮೀನಾಕ್ಷಿ, ಕೆ.ಎಸ್​.ಚಂದ್ರಶೇಖರ್​ ಇದ್ದರು.