ಮೃತ ಕಾರ್ಯಕರ್ತರ ಕುಟುಂಬಕ್ಕೆ ನೆರವು activists 
ರಾಜ್ಯ

ಮೃತ ಕಾರ್ಯಕರ್ತರ ಕುಟುಂಬಕ್ಕೆ ನೆರವು activists

ಕೋಲಾರ: ಹೃದಯಾಘಾತದಿಂದ ಇತ್ತೀಚೆಗೆ ಮೃತಪಟ್ಟ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಂಚಾಲಕ ಲೋಕೇಶ್​, ಪ್ರಧಾನ ಸಂಚಾಲಕ ಮೆಹಬೂಬ್​ ಅವರ ಮನೆಗೆ ಶುಕ್ರವಾರ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಭೇಟಿ ನೀಡಿ ಆರ್ಥಿಕ ನೆರವು ನೀಡಿ, ಕುಟುಂಬಗಳಿಗೆ ಧೈರ್ಯ ತುಂಬಿದರು. activists
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟಿ.ಎ.ನಾರಾಯಣಗೌಡ, ರಕ್ಷಣಾ ವೇದಿಕೆಯೊಂದಿಗೆ ಗುರುತಿಸಿಕೊಂಡು ಸುಮಾರು ವರ್ಷಗಳಿಂದ ಕನ್ನಡ, ಕನ್ನಡಿಗ ಕರ್ನಾಟಕ ಹೋರಾಟದಲ್ಲಿ ಇಬ್ಬರೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹೃದಯಾಘಾತದಿಂದ ಮೃತಪಟ್ಟಿದ್ದು, ಎರಡೂ ಕುಟುಂಬಗಳ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಜವಾಬ್ದಾರಿ ತೆಗೆದುಕೊಳ್ಳಲಾಗಿದೆ ಎಂದರು.
ಬೆಳಗಾವಿ, ರಾಜ್ಯದ ಗಡಿ, ಜಲ ವಿಚಾರವಾಗಿ ನಡೆದ ಹೋರಾಟದಲ್ಲಿ ಇಬ್ಬರೂ ಮುಂಚೂಣಿಯಲ್ಲಿದ್ದರು. ಈ ರೀತಿ ಸಮಸ್ಯೆಯಾದಾಗ ನೆರವಿಗೆ ಧಾವಿಸುವುದು ನಮ್ಮ ಜವಾಬ್ದಾರಿ. ಕನ್ನಡದ ಬಗ್ಗೆ ಇಟ್ಟುಕೊಂಡಿದ್ದ ಪ್ರೀತಿ, ಕಾಳಜಿ ಮಾದರಿಯಾಗಿದೆ ಎಂದು ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯೆ ಕುರ್ಕಿ ರಾಜರಾಜೇಶ್ವರಿ, ವೇದಿಕೆಯ ಗೌರವಾಧ್ಯಕ್ಷ ಎನ್​.ಮುನಿರಾಜು, ಜಿಲ್ಲಾಧ್ಯಕ್ಷ ಮೇಡಿಹಾಳ ರಾವೇಂದ್ರ, ಪ್ರಧಾನ ಕಾರ್ಯದರ್ಶಿ ವಿ.ಮುನಿರಾಜು, ಉಪಾಧ್ಯಕ್ಷ ಪ್ರಭಾಕರ್​ ಗೌಡ, ತಾಲೂಕು ಅಧ್ಯಕ್ಷರಾದ ಕೋಲಾರ ಶಶಿಕುಮಾರ್​, ಮಾಲೂರು ಎಂ.ಎಸ್​.ಶ್ರೀನಿವಾಸ್​, ಬಂಗಾರಪೇಟೆ ರಾಮಪ್ರಸಾದ್​, ಕಾರ್ಮಿಕ ಟಕ ಅಧ್ಯಕ್ಷ ಮಂಜುನಾಥ್​ಗೌಡ, ಶೇಖರ್​ ಉಪಸ್ಥಿತರಿದ್ದರು.