Assaulted for not paying for drinks
ಚಿಂತಾಮಣಿ: ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸೋಮವಾರ ಮದ್ಯ ಸೇವಿಸಲು ಪತ್ನಿ ಹಣ ನೀಡಿಲ್ಲವೆಂದು ಸಿಟ್ಟಾದ ಪತಿ ಹಲ್ಲೆ ಮಾಡಿದ್ದಾನೆ.
ವಿನಾಯಕ ನಗರದ ನಿವಾಸಿ ರಾಧನ್ (37) ಹಲ್ಲೆಗೊಳಗಾದವರು. ತಾಲೂಕಿನ ಆಲಂಬಗಿರಿ ನಾರಾಯಣಸ್ವಾಮಿ 24 ವರ್ಷಗಳ ಹಿಂದೆ ರಾಧನ್ ಅವರನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಮದ್ಯ ವ್ಯಸನಿಯಾಗಿದ್ದ ನಾರಾಯಣಸ್ವಾಮಿ ಹಣ ನೀಡುವಂತೆ ಪೀಡಿಸುತ್ತಿದ್ದ ಹಿನ್ನೆಲೆಯಲ್ಲಿ 4 ವರ್ಷಗಳಿಂದ ರಾಧನ್ ಮಕ್ಕಳ ಜತೆ ತವರಿನಲ್ಲಿ ನೆಲೆಸಿದ್ದು, ಟೇಲರಿಂಗ್ ಮಾಡಿ ಜೀವನ ನಡೆಸುತ್ತಿದ್ದಾರೆ. ಭಾನುವಾರ ಆಕೆಯ ಮನೆಗೆ ಬಂದ ಪತಿ ಮದ್ಯಪಾನಕ್ಕೆ ಹಣ ನೀಡದ್ದಕ್ಕೆ ಎಳೆದಾಡಿ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.