Assault on returning home after a long day
ಶಿಡ್ಲಗಟ್ಟ: ಕರಗ ಮುಗಿಸಿ ಮನೆಗೆ ತೆರಳುತ್ತಿದ್ದ ನಗರದ ಗಾಂಧಿನಗರ ನಿವಾಸಿ ಶ್ರೀಧರ್ ಮೇಲೆ ವ್ಯಕ್ತಿಯೊಬ್ಬ ಗುರುವಾರ ರಾತ್ರಿ ಹಲ್ಲೆ ಮಾಡಿದ್ದಾನೆ. ದಾರಿಯಲ್ಲಿ ಬೋವಿ ನಗರದ ವ್ಯಕ್ತಿ ಅಡ್ಡಗಟ್ಟಿದ್ದಾನೆ. ಯಾವುದೇ ಪ್ರಚೋದನೆ ಇಲ್ಲದೆ ಶ್ರೀಧರ್ ಮೇಲೆ ಹಲ್ಲೆ ನಡೆಸಿದ ಆರೋಪಿ, ದೇಹದ ವಿವಿಧ ಭಾಗಗಳಿಗೆ ಗಾಯ ಮಾಡಿದ್ದಾನೆ.
ಶ್ರೀಧರ್ ಅವರಿಗೆ ಹಿಂದಿನಿಂದ ಬಂದು ಕುತ್ತಿಗೆ ಮತ್ತು ಕೈಗೆ ಹಲ್ಲೆ ಮಾಡಲಾಗಿದ್ದು, ತೀವ್ರ ಗಾಯಗಳಾಗಿವೆ. ಪೊಲೀಸರು ಬಂದ ಕೂಡಲೇ ಆರೋಪಿ ಕಾಲ್ಕಿತ್ತಿದ್ದಾನೆ. ಗಾಯಾಳುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಠಾಣೆಯಲ್ಲಿ ಶ್ರೀಧರ್ ದೂರು ದಾಖಲಿಸಿದ್ದಾರೆ.