Assault on Panchayat staff
ಕೋಲಾರ: ತಾಲೂಕಿನ ಅಣ್ಣಿಹಳ್ಳಿ ಗ್ರಾಪಂನಲ್ಲಿ ಇತ್ತೀಚೆಗೆ ಅಧಿಕಾರಿ ಮೇಲೆ ನಡೆದ ಹಲ್ಲೆ ಯತ್ನ ಪ್ರಕರಣ ಮಾಸುವ ಮುನ್ನವೇ ಶ್ರೀನಿವಾಸಪುರ ತಾಲೂಕು ಲಕ್ಷಿ$್ಮಸಾಗರ ಗ್ರಾಮ ಪಂಚಾಯಿತಿಯಲ್ಲೂ ಮತ್ತೊಂದು ಪ್ರಕರಣ ಸಂಭವಿಸಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಲಕ್ಷಿ$್ಮಸಾಗರ ಗ್ರಾಮ ಪಂಚಾಯಿತಿಯಲ್ಲಿ ಶ್ಯಾಗೊತ್ತೂರು ನಿವಾಸಿ ಗುತ್ತಿಗೆದಾರ ಮುನಿಶಾಮಪ್ಪ ಕಂಪ್ಯೂಟರ್ ಧ್ವಂಸ ಮಾಡಿ, ಸಿಬ್ಬಂದಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೈಯಿಂದ ಹೊಡೆದು ಬೆದರಿಕೆ ಒಡ್ಡಿದ್ದಾರೆ. ಈ ಸಂಬಂಧ ಪಂಚಾಯಿತಿ ಪಿಡಿಒ ಮಹೇಶ್ ಕುಮಾರ್ ಶ್ರೀನಿವಾಸಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಜು.7ರಂದು ಎ್ಐಆರ್ ದಾಖಲಾಗಿದೆ.
ಅಭಿವೃದ್ಧಿ ಕೆಲಸಕ್ಕೆ ಸಂಬಂಧ ಬಿಲ್ ಬಿಡುಗಡೆ ಮಾಡುವ ವಿಚಾರದಲ್ಲಿ ಇಂಜಿನಿಯರ್ ಬಿಲ್ ಕಡಿಮೆ ಮಾಡಿದ್ದಾರೆ ಎಂದು ಆರೋಪಿಸಿ ಏಕಾಏಕಿ ಅಧಿಕಾರಿ, ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆಗ ಕಚೇರಿಯಲ್ಲಿದ್ದ ಸಿಬ್ಬಂದಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಕುಮಾರ್ ಅವರಿಗೆ ಕರೆ ಮಾಡಿ ವಿಚಾರ ಗಮನಕ್ಕೆ ತಂದಿದ್ದಾರೆ. ಕೂಡಲೇ ಕಚೇರಿ ಆಗಮಿಸಿದ ಪಿಡಿಒ ಪ್ರಶ್ನೆ ಮಾಡಿದಾಗ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದಲ್ಲದೆ, ಕಂಪ್ಯೂಟರನ್ನು ಧ್ವಂಸಗೊಳಿಸಿದ್ದಾನೆ.
ಈ ಕುರಿತು ದೂರು ನೀಡಿದ್ದು, ಆರೋಪಿಯನ್ನು ಬಂಧಿಸಬೇಕು ಎಂದು ದೂರುದಾರರಾದ ಪಿಡಿಒ ಮಹೇಶ್ ಕುಮಾರ್ ಒತ್ತಾಯಿಸಿದ್ದಾರೆ.